Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮುಂದಿನ ಯುಗ ಜ್ಞಾನ ವಿಜ್ಞಾನಗಳ ಯುಗ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

06:24 PM Nov 17, 2024 IST | suddionenews
Advertisement

 

Advertisement

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 : ಮುಂದಿನ ಯುಗ ಜ್ಞಾನ ವಿಜ್ಞಾನಗಳ ಯುಗವಾಗುತ್ತದೆ ಆದ್ದರಿಂದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಶ್ರೀ ಜಗದ್ಗುರು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

Advertisement

ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಶನಿವಾರ ಆಯೋಜಿಸಿದ್ದ, ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪಡೆದ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಸರ್ಕಾರ ನಿಮ್ಮ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿದೆ. ಇದು ಕರ್ನಾಟಕದ ಎರಡನೇ ಬಹುದೊಡ್ಡ ಪ್ರಶಸ್ತಿಯಾಗಿದೆ. ಇದು ದೊರಕಿರುವುದು ನಿಮ್ಮ ಪುಣ್ಯ ಎಂದರು. ಪ್ರಶಸ್ತಿಗೆ ಆಯ್ಕೆಯಾದವರು ಯಾರು ಕೂಡ ಅರ್ಜಿ ಹಾಕಿಲ್ಲ, ಇವರ ಸೇವೆಯನ್ನು ಪರಗಣಿಸಿ ಸರ್ಕಾರ ಪ್ರಶಸ್ತಿ ನೀಡಿದೆ ಇದು ಸಂತೋಷಕರ ವಿಚಾರ ಎಂದರು. ಶಿಕ್ಷಣದಲ್ಲಿ ಸಂಸ್ಕಾರ ಸಿಕ್ಕರೆ ದೊಡ್ಡ ವ್ಯಕ್ತಿಗಳನ್ನಾಗಿ ಮಾಡಿ ಉನ್ನತ ಸ್ಥಾನಗಳಿಗೆ ಕೊಂಡೊಯ್ಯುತ್ತದೆ. ನಮ್ಮ ಧರ್ಮದಲ್ಲಿರುವ ಕಂದಾಚಾರ, ಮೂಡನಂಬಿಕೆ ಹೊರ ಇಟ್ಟು ನಾವುಗಳು ವೈಜ್ಞಾನಿಕ ವೈಚಾರಿಕತೆಯನ್ನು ಹಾಗೂ ನಮ್ಮ ಆಚರಣೆ, ಧರ್ಮಗಳಲ್ಲಿ ವಿಜ್ಞಾನವನ್ನು ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಭವಿಷ್ಯ ಸುಗಮವಾಗಿರುತ್ತದೆ. ಆಗ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ನಿಜವಾದ ಭಕ್ತಿ ಬಡವರ ಮನೆಯಲ್ಲಿ ಇದೆ. ಬಡವರ ಮನಸ್ಸು ಮುಗ್ದತೆಯಿಂದ ಕೂಡಿರುತ್ತದೆ ಎಂದು ಹೇಳಿದರು.
ಇಂತ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ. ಈ ಪ್ರಶಸ್ತಿ ಅರ್ಹರಿಗೆ ಸಿಕ್ಕಿರುವುದರಿಂದ ಮುಂದಿನ ಪೀಳಿಗೆಗೆ ಯುವಕರಿಗೆ ಸ್ಪೂರ್ತಿ ತರಲಿದೆ ಎಂದು ಹೇಳಿದರು.

ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ ಇಂತಹ ವ್ಯಕ್ತಿಗಳನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತೋಷಕರ ವಿಚಾರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾವು ಪ್ರಶಸ್ತಿ ಪಡೆದವರಿಗೆ ಪ್ರೋತ್ಸಾಹ ನೀಡಬೇಕು, ಮನುಷ್ಯ ಹುಟ್ಟಿನಿಂದ ಸಾರ್ಥಕತೆಯ ಜೀವನ ಕಟ್ಟಿಕೊಂಡು ಸಮಾಜದ ಋಣ ತೀರಿಸಬೇಕು ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಲಿಕಲ್ ನಟರಾಜ್ ಮಾತನಾಡಿ,
ಶೂದ್ರರು ಆಸ್ತಿ, ಮನೆ ಮಾರಿ ಜಾತ್ರೆ ಮಾಡುತ್ತಾರೆ,ಆದರೆ ಇನ್ನೊಬ್ಬರು ಜಾತ್ರೆ ಮಾಡಿಸಿ ಮನೆ ಕಟ್ಟಿಕೊಳ್ಳುತ್ತಾರೆ, ಹಾಗಾಗಿ ದೇವರ, ಧರ್ಮದ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತದೆ ಎಂದರು.

 

ಜನರು ಇಂದು ಹಣದ ಮೇಲೆ ವಿವಿಧ ರೀತಿಯ ದೇವರ ದರ್ಶನ ಪಡೆಯುತ್ತಿದ್ದಾರೆ. ದೇವರಗಳನ್ನು ಇಂದು ಬೀದಿಗೆ ತಂದು ನಿಲ್ಲಿಸಿದ್ದೇವೆ ಹಾಗಾಗಿ ಅಂಬೇಡ್ಕರ್ ಬುದ್ಧ ಬಸವಣ್ಣ ಅವರ ಅನುಯಾಯಿಗಳು ಆಗಿದ್ದರೆ. ಹೋಮ ಹವನಗಳಿಗೆ ಮಾರು ಹೋಗಬೇಡಿ ಎಂದು ತಿಳಿ ಹೇಳಿದರು. ಎಷ್ಟೋ ಜನರಿಗೆ ಮನೆಯೇ ಇಲ್ಲ ಇನ್ನು ವಾಸ್ತವ ಎಲ್ಲಿದೆ ಎಂದು ಮನವರಿಕೆ ಮಾಡಿಕೊಟ್ಟರು. ಸಾಮಾಜಿಕ ಜಾಲತಾಣದಿಂದ ನಮ್ಮ ಮಕ್ಕಳು ತಪ್ಪು ದಾರಿಗೆ ಹೋಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ ಎಂದು ಸಲಹೆ ನೀಡಿದರು.

ದೇಶದಲ್ಲಿ ವಿದ್ಯಾವಂತರ ಕೊರತೆ ಇಲ್ಲ ಪ್ರಜ್ಞಾವಂತರ ಕೊರತೆ ಇದೆ. ಧರ್ಮ ಎನ್ನುವುದು ಮಾರುಕಟ್ಟೆಯ ಸರಕು ಆಗಬಾರದು, ಪಂಚಾಂಗ, ಜಾತಕ, ತಂತ್ರ, ಮಂತ್ರ, ಇವೆಲ್ಲ ಬದಿಗೆ ಇಟ್ಟು ಪಂಚ ಅಂಗಗಳ ಬಗ್ಗೆ ಗಮನಕೊಡಬೇಕು, ಮನೆಯ ವಾಸ್ತವ ಬಿಟ್ಟುಬಿಡಿ ಮನಸ್ಸಿನ ವಾಸ್ತವದ ಕಡೆ ಗಮನ ಕೊಡಿ ಆಗ ಬದುಕು ಹಸನಾಗುತ್ತದೆ. ಸಮಾಧಾನಕ್ಕಾಗಿ ,ನೆಮ್ಮದಿಗಾಗಿ ಮನಸ್ಸು ಮನಸ್ಸುಗಳನ್ನು ಒಂದುಗೂಡಿಸುವ ದೇವರು ಬೇಕು ವಿನಹ, ದೇವರ ಹೆಸರಿನಲ್ಲಿ ಬದುಕುತ್ತಿರುವ ಸಮಾಜಘಾತಕರಲ್ಲ ವಿದ್ಯಾಭ್ಯಾಸ ಮಾಡಿ ಉದ್ಯೋಗ ಪಡೆಯಲು ಸುಮಾರು ವರ್ಷಗಳ ಕಾಲ ಓದಬೇಕು, ಕೆಲವರು ಬಟ್ಟೆ ಬದಲಾಯಿಸಿದರೆ ಸಾಕು ಜೀವನ ಕಟ್ಟಿಕೊಳ್ಳುತ್ತಿದ್ದಾರೆ, ಇಂತಹ ಸಮಾಜಘಾತಕರ ವಿರುದ್ಧ ಹೋರಾಡಬೇಕಿದೆ ಎಂದರು.

ಎಲ್ಲಾ ಧರ್ಮದವರನ್ನು ಪ್ರೀತಿಸಬೇಕು ಆಗ ಮಾತ್ರ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ, ಬುದ್ಧ ಅಂಬೇಡ್ಕರ್ ಬಸವಣ್ಣ ಅವರ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ. ಟಿ ದಿಲೀಪ್ ಕುಮಾರ್, ಡಾ. ವಿ. ಕಮಲಮ್ಮ, ಹುಲಿಕಲ್ ನಟರಾಜ್, ಟಿ.ಸೋಮೇಶ, ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಾವೇರಿ ಭೋವಿ ಜನಾಂಗದ ಜಿಲ್ಲಾಧ್ಯಕ್ಷ ರವಿ ಪೂಜಾರಿ, ಚಿತ್ರದುರ್ಗ ಭೋವಿ ಜನಾಂಗದ ಜಿಲ್ಲಾ ಅಧ್ಯಕ್ಷ ತಿಪ್ಪೇಸ್ವಾಮಿ, ದಾವಣಗೆರೆ ಮಾಜಿ ರೇಷ್ಮೆ ಮಂಡಳಿ ಅಧ್ಯಕ್ಷಬಸವರಾಜ್, ಭೀಮಪ್ಪ, ಮೋಹನ್, ತಿಮ್ಮಣ್ಣ, ಭೋವಿಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಸೇರಿದಂತೆ ಭೋವಿ ಸಮಾಜದ ಮುಖಂಡರು ಇದ್ದರು.

Advertisement
Tags :
bengaluruchitradurgaJagadguru Sri Immadi Siddarameshwar SwamijikannadaKannadaNewssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಬೆಂಗಳೂರುಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article