For the best experience, open
https://m.suddione.com
on your mobile browser.
Advertisement

ಸರ್ಕಾರ ಡಿನ್ನರ್ ಕೂಟದಲ್ಲಿ ಮುಳುಗಿದೆ : ಚಿತ್ರದುರ್ಗದಲ್ಲಿ  ಆರ್. ಅಶೋಕ್ ಹೇಳಿಕೆ

08:13 PM Nov 26, 2023 IST | suddionenews
ಸರ್ಕಾರ ಡಿನ್ನರ್ ಕೂಟದಲ್ಲಿ ಮುಳುಗಿದೆ   ಚಿತ್ರದುರ್ಗದಲ್ಲಿ  ಆರ್  ಅಶೋಕ್ ಹೇಳಿಕೆ
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್.26 : ವಿಪಕ್ಷ ನಾಯಕ ಆರ್ ಅಶೋಕ್ ಇಂದು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ರಾಜ್ಯದಲ್ಲಿ ಮಳೆ ಇಲ್ಲದೆ ಬರದಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬರ ಸಮೀಕ್ಷೆ ಮಾಡಬೇಕು, ಮಾಡಿದ್ರು ಕೂಡ ಅದು ಅರೆಬೆಂದ ಸಮೀಕ್ಷೆ ಆಗಿದೆ. ಸರ್ಕಾರ ಯಾವುದೋ ಒಂದು ಆಪ್ ಬಿಟ್ಟಿದೆ. ಅದರಲ್ಲಿ ರೈತರ ಮಾಹಿತಿಯೇ ಇಲ್ಲ. ಸರ್ಕಾರ ಕಾಟಾಚಾರಕ್ಕೆ ಸಮೀಕ್ಷೆ ಮಾಡಿದೆ. ಪಕ್ಕದ ಆಂಧ್ರದಲ್ಲಿ ಹೊಸ ತಳಿ ಬಂದಿದೆ
ಆ ತಳಿಯನ್ನು ರೈತರಿಗೆ ಪರಿಚಯ ಮಾಡಬೇಕು ಎಂದರು.

ರಾಜ್ಯದಲ್ಲಿ ಬರ ಬಂದಿದೆ ಮಂತ್ರಿಗಳು ಪತ್ತೆ ಇಲ್ಲ, ಇತ್ತ ಮುಖ್ಯಮಂತ್ರಿಗಳು ಎಲ್ಲರೂ ಸಮೃದ್ಧಿ ಆಗಿದ್ದೇವೆ ಎಂದು ಪ್ರಚಾರ ಕೊಟ್ಟಿದ್ದಾರೆ. ರೈತರು ಎಲ್ಲಿ ನೆಮ್ಮದಿಯಾಗಿ ಇದ್ದಾರೆ.

Advertisement

ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿ ಇದ್ದಾರೆ ಎಂದು ಪ್ರಶ್ನೆ ಹಾಕಿದರು. ಸಿಎಂ ಇಳಿತಾರೋ, ಸಿಎಂ ಏರುತ್ತಾರೋ ಗೊತ್ತಿಲ್ಲ.
ಗ್ರಾಮ ಪಂಚಾಯಿತಿ ಎಲೆಕ್ಷನ್ ಅದಂಗೆ ಆಗಿದೆ. ಗೃಹ ಸಚಿವ ಡಾ ಜಿ ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಕೂಟ ಮಾಡ್ತಾರೆ. ಸರ್ಕಾರ ಡಿನ್ನರ್ ಕೂಟದಲ್ಲಿ ಮುಳುಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಲವರು ಅಸಮಾಧಾನದಿಂದ ದುಬೈಗೆ ಹೋಗಿದ್ದಾರೆ. ಕೆಲವರು ಪರಿಹಾರ ನೀಡಿಲ್ಲ ಅಂದ್ರೆ ರಾಜೀನಾಮೆ ಅಂತ ಹೇಳ್ತಾರೆ
ಡಿಕೆಶಿ ಸಿಎಂ ಮಾಡಿ ಅಂತ ಹೇಳ್ತಾರೆ. ಅವರಲ್ಲೇ ಇಷ್ಟೆಲ್ಲಾ ಗೊಂದಲ ಇದೆ ಜನರ ಕಷ್ಟ ಇನ್ನೆಲ್ಲಿ ತಿಳಿಯುತ್ತೆ. ಸರ್ಕಾರದಲ್ಲಿ ಮುಕ್ತಿ ಕ್ಯಾಬಿನೆಟ್ ಆಗಿದೆ. ಕೇಸ್ ಇದ್ದವರಿಗೆ ಮುಕ್ತಿ ಕೊಡುವ ಕೆಲಸ ಮಾಡ್ತಿದೆ. ಬಳ್ಳಾರಿಯ ನಾಗೇಂದ್ರಗೆ ಮುಕ್ತಿ ಕೊಟ್ಬಿಡಿ, ಅವ್ರ ಮೇಲೆ 25 ಸಿಬಿಐ ಕೇಸ್ ಇದೆ ಮುಕ್ತಿ ಕೊಡಿ
ಮುಕ್ತಿಯ ಕ್ಯಾಬಿನೆಟ್ ಅಂತ ಬೋರ್ಡ್ ಹಾಕಿ, ಇತ್ತ ಗಣಿಧಣಿ ಜನಾರ್ದನ್ ರೆಡ್ಡಿಗೂ ಮುಕ್ತಿ ಕೊಡಿಸುವಂತೆ ಹೇಳಿದ್ದಾರೆ ಎಂದು ಮಾತಿನೂದ್ದಕ್ಕೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Tags :
Advertisement