ಸರ್ಕಾರವ ವರ್ಗಾವಣೆ ದಂಧೆಯಲ್ಲಿ ಹಣ ಮಾಡ್ತಿದೆ : ಚಿತ್ರದುರ್ಗದಲ್ಲಿ ಆರ್.ಅಶೋಕ್ ವಾಗ್ದಾಳಿ
ಚಿತ್ರದುರ್ಗ: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೋಟೆನಾಡಿನಲ್ಲಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದಾರೆ. ಇದೊಂದು ಮನೆ ಹಾಳು ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಅಭಿವೃದ್ಧಿ ಕಾರ್ಯ ಮಾಡಲು ಹಣವಿಲ್ಲ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಹಣ ಮಾಡ್ತಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆದ್ ಸರ್ಕಾರಕ್ಕೆ ಮಾನ ಮರ್ಯಾದೆ ಏನು ಇಲ್ಲ ಎನಿಸುತ್ತದೆ. ಆದ್ರೂ ಸಿಎಂ ಜೀವನ ತೆರೆದ ಪುಸ್ತಕ, ವೈಟ್ ಪೇಪರ್ ಅಂತೆ. ಬೈ ಎಲೆಕ್ಷನ್ ವೇದಿಕೆ ಮೇಲೆ ಜಮೀರ್ ರಾಜಾರೋಷವಾಗಿ ಹಣ ಹಂಚಿದ್ದಾನೆ. ಜಮೀರ್ ಹಣ ಹಂಚಿದ್ದು ತೆರೆದ ಪುಸ್ತಕವಾ..? ಅವನು ತೆರೆದೇ ಹಣ ಹಂಚಿದ್ದು. ವಯನಾಡಿಗೆ ಹೋದ ಅಕ್ಕಿಯನ್ನು ಹಂಚಿದ್ದು. ಈ ಬೆಳವಣಿಗೆಗಳೆಲ್ಲಾ ನಡೆದಾಗ ಪ್ರಧಾನಿಯವರಿಗೆ ಮಾಹಿತಿ ಹೋಗಿರಲ್ವಾ..? 700 ಕೋಟಿ ಹೋಗಿದೆ. ಆದರೆ ಕಳೆದ 25 ವರ್ಷದಿಂದ ಡಿಕೆಶಿ ಬರೀ ಸಾಕ್ಷಿ ಗುಡ್ಡೆ ಕೇಳ್ತಿದ್ದಾರೆ.
ಈಗ ಸಾಕ್ಷಿ ಸಮೇತ 18 ಕೋಟಿ ಸಂಗ್ರಹಿಸಿದ ಬಗ್ಗೆ ದೂರು ಕೊಟ್ಟಿದ್ದಾರೆ. ಅದರಲ್ಲಿ ಕಮಿಷನರ್, ಡಿಸಿಗೆ ಎಷ್ಟು ಹಣ ಎಂದು ದೂರಿನಲ್ಲಿ ಹಾಕಿದ್ದಾರೆ. ಅವರನ್ಯಾಕೆ ಜೈಲಿಗೆ ಹಾಕಿಲ್ಲ. ತೆರೆದ ಪುಸ್ತಕದಲ್ಲಿ ಅವನು ಸರ್ಕಾರದ ಅಕೌಂಟ್ ತೋರೊಸಿದ್ದಾನೆ. ಅವನ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳಿಗೆ ದುಡ್ಡಿನ ದಾಹ ಅತಿಯಾಗಿದೆ ಎಂದು ಮಾಲೀಕರೆ ಹೇಳಿದ್ದಾರೆ. ಲಿಕ್ಕರ್ ಅಸೋಸಿಯೇಷನ್ 20ನೇ ತಾರೀಖು ಸ್ಟ್ರೈಕ್ ಕಾಲ್ ಮಾಡಿದ್ದಾರೆ. ಇದನ್ನೆಲ್ಲಾ ನರೇಂದ್ರ ಮೋದಿ ಹೇಳಿ ಮಾಡಿಸಿದ್ರಾ..? ಇಲ್ಲಿ ಭ್ರಷ್ಟಾಚಾರ ನಡೆದಿದೆ. ಅದಕ್ಕೆ ನರೇಂದ್ರ ಮೋದಿ ಹೇಳಿದ್ದಾರೆ. ಅದಕ್ಕೆ ನರೇಂದ್ರ ಮೋದಿ ಅವರ ಮೇಲೆನೇ ಏಕವಚನದಲ್ಲಿ ಮುಗಿ ಬೀಳುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.