For the best experience, open
https://m.suddione.com
on your mobile browser.
Advertisement

ಸರ್ಕಾರದ ವಿವಿಧ ಕಾಯಿದೆಗಳಿಂದ ಕಾರ್ಮಿಕರಿಗೆ ಅನುಕೂಲ : ಡಾ.ಅವಿನಾಶ್ ನಾಯಕ್

02:56 PM Dec 01, 2024 IST | suddionenews
ಸರ್ಕಾರದ ವಿವಿಧ ಕಾಯಿದೆಗಳಿಂದ ಕಾರ್ಮಿಕರಿಗೆ ಅನುಕೂಲ   ಡಾ ಅವಿನಾಶ್ ನಾಯಕ್
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್,ಚಿತ್ರದುರ್ಗ. ಡಿಸೆಂಬರ್. 01 : ರಾಜ್ಯದ ವಿವಿಧ ಸೋಲಾರ್ ಮತ್ತು ವಿಂಡ್‍ಮಿಲ್‍ಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಗುತ್ತಿಗೆ ಮತ್ತು ಖಾಯಂ ನೌಕರರ ಅನುಕೂಲಕ್ಕಾಗಿ ಕಾರ್ಮಿಕ ಇಲಾಖೆವತಿಯಿಂದ ಕಾಯ್ದೆಯನ್ನು ತಯಾರು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದರೆ ನಿಮಗೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಲಿದೆ ಎಂದು ಕಾರ್ಮಿಕ ಇಲಾಖೆಯ ದಾವಣಗೆರೆಯ ಸಹಾಯಕ ಆಯುಕ್ತರಾದ ಡಾ.ಅವಿನಾಶ್ ನಾಯಕ್ ತಿಳಿಸಿದರು.

ಕರ್ನಾಟಕ ರಾಜ್ಯ ಸೋಲಾರ್ ಹಾಗೂ ವಿಂಡ್ ಎನರ್ಜಿ ಎಂಪ್ಲಾಯ್ಸ್ ಯೂನಿಯನ್‍ವತಿಯಿಂದ ನಗರದ ಪತ್ರಿಕಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಮಾವೇಶ ಹಾಗೂ 'ಕಾರ್ಮಿಕ ಕಾಯ್ದೆಗಳು & ಕಾರ್ಮಿಕರ ಹಕ್ಕುಗಳು' ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ವಿವಿಧ ರೀತಿಯ ಕಾರ್ಮಿಕರಿಗೆ ಸರ್ಕಾರ ವಿವಿಧ ರೀತಿಯ ಕಾಯ್ದೆಗಳನ್ನು ಜಾರಿ ಮಾಡಿದೆ, ಇದರಲ್ಲಿ ಖಾಯಂ ಹಾಗೂ ಗುತ್ತಿಗೆದಾರರ ನೌಕರರಿಗೆ ಅವರ ವೇತನ, ಕೆಲಸದ ಸಮಯ, ವಿವಿಧ ರೀತಿಯ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ನಿಯಮಗಳನ್ನು ಜಾರಿ ಮಾಡಿದೆ. ಕೈಗಾರಿಕೆಯ ಮಾಲೀಕರು ಇದನ್ನು ತಪ್ಪದೆ ಜಾರಿ ಮಾಡಬೇಕಿದೆ. ಯಾರು ಜಾರಿ ಮಾಡುವುದಿಲ್ಲವೂ ಅಂತಹ ವಿರುದ್ದ ಕಾರ್ಮಿಕ ಇಲಾಖೆ ಕಾನೂನು ರೀತಿಯಲ್ಲಿ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದರು.

ಕಾರ್ಮಿಕರಾದವರು ತಮಗಾಗಿ ಇರುವಂತ ವಿವಿಧ ರೀತಿಯ ಕಾಯ್ದೆಗಳನ್ನು ತಿಳಿಯಬೇಕಿದೆ. ಇದು ನಮಗೆ ಸಿಗುತ್ತದ್ದೇಯೇ ಇಲ್ಲವೂ ಎಂಬುದರ ಬಗ್ಗೆ ಪರಿಶೀಲಿಸಬೇಕಿದೆ ಒಮ್ಮೆ ಸಿಗದಿದ್ದರೆ ಮಾಲಿಕರ ಬಳಿ ಕೇಳ ಬೇಕು ಅವರು ನೀಡದಿದ್ದರೆ ಕಾರ್ಮಿಕ ಇಲಾಖೆಗೆ ದೂರನ್ನು ನೀಡುವುದರ ಮೂಲಕ ಪಡೆಯಬಹುದಾಗಿದೆ ನಮಗೆ ನಿಮ್ಮ ಬಗ್ಗೆ ಇರುವ ಕಾಯ್ದೆಗಳ ಬಗ್ಗೆ ಮಾಹಿತಿ ಇಲ್ಲದಿದ್ದರೆ ಮಾಲಿಕರು ನಿಮಗೆ ಮೋಸವನ್ನು ಮಾಡುವ ಅವಕಾಶ ಇರುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳು ಇರಬೇಕಿದೆ. ಇಲ್ಲದಿದ್ದ ಪಕ್ಷದಲ್ಲಿ ಇಲಾಖೆವತಿಯಿಂದ ಕೂಡಿಸುವ ಕಾರ್ಯವನ್ನು ಮಾಡಲಾಗುವುದು ಮಾಲಿಕರಿಂದ ನಿಮಗೆ ಸಿಗಬೇಕಾದ ವಿವಿಧ ರೀತಿಯ ಸೌಲಭ್ಯಗಳು ಸಿಗದಿದ್ದರೆ ಇಲಾಖೆವತಿಯಿಂದ ವಿಚಾರಣೆಯನ್ನು ಮಾಡಲಾಗುವುದು ಇಲ್ಲಿ ನ್ಯಾಯ ಸಿಗದಿದ್ದರೆ ಕಾರ್ಮಿಕ ನ್ಯಾಯಾಲಯದಿಂದ ನ್ಯಾಯವನ್ನು ಪಡೆಯಬಹುದಾಗಿದೆ ಎಂದು ಅವಿನಾಶ್ ತಿಳಿಸಿದರು.

ಸರ್ಕಾರಗಳು ಕಾರ್ಮೀಕರಿಗಾಗಿ ಸುಮಾರು 25 ಕಾಯ್ದೆಗಳನ್ನು ಜಾರಿ ಮಾಡಿದೆ ಇದರಲ್ಲಿ 21 ಕಾಯ್ದೆಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಾದರೆ ಉಳಿದ 4 ಕಾಯ್ದೆಗಳು ರಾಜ್ಯ ಸರ್ಕಾರಕ್ಕೆ ಸಂಭಂವಿಸಿದ್ದಾಗಿದೆ, 1936ರಿಂದಲೇ ಕಾರ್ಮಿಕರಿಗೆ ವೇತನ ಕಾಯ್ದೆ ಜಾರಿಯಾಗಿದೆ. ಅಂದಿನಿಂದ ಇಂದಿನ ದಿನದವರೆಗೆ ಇದರಲ್ಲಿ ವಿವಿಧ ರೀತಿಯ ಬದಲಾವಣೆಯನ್ನು ಮಾಡಲಾಗಿದೆ. ತಾವು ಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರಿಗೆ ಆಡಳಿತ ಮಂಡಳಿ ಅಥವಾ ಗುತ್ತಿಗೆದಾರರಿಂದ ಏನಾದರೂ ತೊಂದರೆಯಾದರೆ ಇಲಾಖೆ ಮಧ್ಯ ಪ್ರವೇಶ ಮಾಡುವುದರ ಮೂಲಕ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದ ಅವರು, ಇತ್ತಿಚಿನ ದಿನದಲ್ಲಿ ಸೋಲಾರ್ ಹಾಗೂ ವಿಂಡ್ ಎನರ್ಜಿ ತಯಾರಿಕೆ ಹೆಚ್ಚಾಗುತ್ತಿದ್ದು ಇದರಲ್ಲಿ ಕೆಲಸ ಮಾಡುವವರ ಸಂಖ್ಯೆಯೂ ಸಹಾ ಹೆಚ್ಚಾಗಿದೆ ಈ ಸಮಯದಲ್ಲಿ ಇವರ ಸಮಸ್ಯೆಗಳು ಹೆಚ್ಚಾಗಿದೆ ಈ ಹಿನ್ನಲೆಯಲ್ಲಿ ಇಲಾಖೆಯವತಿಯಿಂದ ಇದರ ಬಗ್ಗೆ ಸರ್ವೇಯನ್ನು ಮಾಡುವುದರ ಮೂಲಕ ವರದಿಯನ್ನು ತಯಾರು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದು ಅನುಮತಿ ಪಡೆದು ಕಾಯ್ದೆ ಜಾರಿಯಾದರೆ ನಿಮಗೆ ತುಂಬಾ ಅನುಕೂಲವಾಗಲಿದೆ ಎಂದು ಅವಿನಾಶ್ ತಿಳಿಸಿದರು.

ಜಿಲ್ಲಾ ಅಧ್ಯಕ್ಷರಾದ ವೀರೇಶ್ನಾಯಕ್ ಹಾರಕನಹಾಳ್ ಮಾತನಾಡಿ, ಇತ್ತೀಚಿನ ದಿನಮಾನದಲ್ಲಿ ಸೋಲಾರ್ ಹಾಗೂ ವಿಂಡ್ ಎನರ್ಜಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿದೆ ಈ ಹಿನ್ನಲೆಯಲ್ಲಿ ಇದರಲ್ಲಿ ಕೆಲಸ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ ಈಗ 10 ಸಾವಿರ ಕಾರ್ಮಿರಿದ್ದರೆ ಮುಂದಿನ ದಿನದಲ್ಲಿ 30 ಸಾವಿರ ಕಾರ್ಮಿಕರಾಗಲಿದ್ದಾರೆ. ಸೋಲಾರ್ ಹಾಗೂ ವಿಂಡ್ ಎನರ್ಜಿಯಿಂದ ಈ 10 ವೆ.ವ್ಯಾ ವಿದ್ಯುತ್ ಉತ್ಪಾದನೆಯಾದರೆ ಮುಂದಿನ ದಿನದಲ್ಲಿ ಸರ್ಕಾರ ರಾಜ್ಯ 4  ಕಡೆಗಳಲ್ಲಿ ಸೋಲಾರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಪ್ರಾರಂಭ ಮಾಡಲು ಮುಂದಾಗಿದೆ ಇದುವರೆವಿಗೂ ಸರ್ಕಾರ ಸಾಮ್ಯಕ್ಕೆ ಒಳಪಟ್ಟಿದ ಸೋಲಾರ್ ಹಾಗೂ ವಿಂಡ್ ಎನರ್ಜಿ ಕೈಗಾರಿಕೆಗಳು ಇನ್ನೂ ಮುಂದೆ ಖಾಸಗಿಯವರ ಆಡಳಿತಕ್ಕೆ ಒಳಪಡಲಿವೆ ಇದು ದುರಂತವಾಗಿದೆ ಎಂದರು.

ಕರ್ನಾಟಕ ರಾಜ್ಯ ಸೋಲಾರ್ ಎನರ್ಜಿ ಎಂಪ್ಲಾಯ್ಸ್ ಯೂನಿಯನ್‍ನ ಜಂಟಿ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ,  ರಾಜ್ಯದಾದ್ಯಂತ ಹರಡಿರುವ ನೂರಾರು ಸೋಲಾರ್ ಮತ್ತು ವಿಂಡ್ ಮಿಲ್‍ಗಳಲ್ಲಿರುವ ಗುತ್ತಿಗೆ ಮತ್ತು ಖಾಯಂ ನೌಕರರು ಅಸಂಘಟಿತರಾಗಿದ್ದು, ಅವರನ್ನು ಸಂಘಟಿಸುವ ಮತ್ತು ಹೋರಾಟವನ್ನು ವಿಸ್ತರಿಸುವ ಉದ್ದೇಶದಿಂದ ಈ ಸಮಾವೇಶವನ್ನು ಸಂಘಟಿಸುತ್ತಿರುವುದು ಅತ್ಯಂತ ಮಹತ್ವದ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಈ ನೌಕರರಿಗೆ ಸೇವಾಭದ್ರತೆ, ನೇಮಕಾತಿಪತ್ರ, ಗುರುತು ಚೀಟಿ, ವೇತನ ಚೀಟಿ, ಇಎಸ್‍ಐ-ಪಿಎಫ್, ಬೋನಸ್, ಶೂ-ಸಮವಸ್ತ್ರ, ಇತ್ಯಾದಿ ಬೇಡಿಕೆಗಳಿಗೆ ಧ್ವನಿಯೆತ್ತಲು ಈ ಸಮಾವೇಶವು ಸ್ಫೂರ್ತಿಯಾಗಲಿದೆ. ಒಟ್ಟಾರೆ ರಾಜ್ಯದಾದ್ಯಂತ ಹರಡಿರುವ ನೂರಾರು ಸೋಲಾರ್ ಮತ್ತು ವಿಂಡ್ ಮಿಲ್‍ಗಳಲ್ಲಿರುವ ಗುತ್ತಿಗೆ ಮತ್ತು ಖಾಯಂ ನೌಕರರು ಅಸಂಘಟಿತರಾಗಿದ್ದು, ಅವರನ್ನು ಸಂಘಟಿಸುವ ಮತ್ತು ಹೋರಾಟವನ್ನು ವಿಸ್ತರಿಸುವ ಉದ್ದೇಶದಿಂದ ಈ ಸಮಾವೇಶವನ್ನು ಸಂಘಟಿಸುತ್ತಿರುವುದು ಅತ್ಯಂತ ಮಹತ್ವದ ವಿಷಯವಾಗಿದೆ ಎಂದರು.

ಆಲ್ ಇಂಡಿಯಾ ಪವರ್‍ಮೆನ್ಸ್ ಫೆಡರೇಷನ ರಾಜ್ಯ ಕಾರ್ಯದರ್ಶಿ ಗಂಗಾಧರ ಬಡಿಗೇರ್, ಕರ್ನಾಟಕ ರಾಜ್ಯ ಸೋಲಾರ್ ಮತ್ತು ವಿಂಡ್ ಎನರ್ಜಿ ಎಂಪ್ಲಾಯಿಸ್ ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಕಾ| ಮಂಜುನಾಥ ಕೈದಾಳ್,  ಆಲ್ ಇಂಡಿಯಾ ಪವರಮೆನ್ ಫೆಡರೇಷನ್ ಅಖಿಲ ಭಾರತ ಅಧ್ಯಕ್ಷರಾದ ಕೆ ಸೋಮಶೇಖರ್, ಆಲ್ ಇಂಡಿಯಾ ಪವರ್‍ಮೆನ್ಸ್ ಫೆಡರೇಷನ್‍ನ ರಾಜ್ಯ ಅಧ್ಯಕ್ಷರಾದ ಕಾ.ವೀರೇಶ್ ಎನ್‍ಎಸ್,  ಕರ್ನಾಟಕ ರಾಜ್ಯ ವಿಂಡ್ ಎನರ್ಜಿ ಎಂಪ್ಲಾಯ್ಸ್ ಯೂನಿಯನ್ ಉಪಾಧ್ಯಕ್ಷರಾದ ರಂಗನಾಥ್ ಹಂಪನೂರು,  ಜಂಟಿ ಕಾರ್ಯದರ್ಶಿ ಲೋಕೇಶ್ ನೀರ್ತಡಿ ಭಾಗವಹಿಸಿದ್ದರು.

Tags :
Advertisement