For the best experience, open
https://m.suddione.com
on your mobile browser.
Advertisement

ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಕೊಡುವ ಸ್ಥಿತಿ ನಿರ್ಮಾಣವಾಗಿದೆ : ಚಿತ್ರದುರ್ಗದಲ್ಲಿ ಭಾಸ್ಕರ್ ರಾವ್ ಕಿಡಿ..!

01:10 PM Aug 06, 2024 IST | suddionenews
ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಕೊಡುವ ಸ್ಥಿತಿ ನಿರ್ಮಾಣವಾಗಿದೆ   ಚಿತ್ರದುರ್ಗದಲ್ಲಿ ಭಾಸ್ಕರ್ ರಾವ್ ಕಿಡಿ
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 06 : ಲೂಟಿ ಹೊಡೆಯಿರಿ ಎಂದು ಸರ್ಕಾರವೇ ಒತ್ತಡ ಹೇರುತ್ತಿದೆ. ಪೊಲೀಸ್ ಇಲಾಖೆ ಸಂಪೂರ್ಣ ವೀಕ್ ಆಗುತ್ತಿದೆ. ಪೊಲೀಸರಿಗೆ ರಕ್ಷಣೆ ಕೊಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಕಿಡಿಕಾರಿದ್ದಾರೆ.

Advertisement
Advertisement

ಚಿತ್ರದುರ್ಗದಲ್ಲಿ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಬಾಸ್ಕರ್ ರಾವ್, ರಾಜ್ಯ ಸರ್ಕಾರ ರಕ್ಷಕರನ್ನು ಭಕ್ಷಕರನ್ನಾಗಿ ಮಾಡಿದೆ. ಲಕ್ಷಾಂತರ ರೂ. ಕೊಡುವವರೆಗೂ ಪೋಸ್ಟಿಂಗ್ ಕೊಡುವುದಿಲ್ಲ. ಸಮವಸ್ತ್ರಧಾರಿಗಳು ಭಕ್ಷಕರು ಮಾತ್ರವಲ್ಲ ಭೀಕಾರಿಗಳಾಗಿದ್ದಾರೆ. ನೇರವಾಗಿ ಜನರ ಮೇಲೆ ಪರಿಣಾಮ ಬೀರುತ್ತಿದೆ.

ಬೇರೆ ಇಲಾಖೆಗಳಲ್ಲಿ ಗುತ್ತಿಗೆ, ಟೆಂಡರ್, ಪರ್ಸೆಂಟೇಜ್ ನಡೆಯುತ್ತದೆ. ಪೊಲೀಸರು ಜನಸಾಮಾನ್ಯರಿಂದ ವಸೂಲಿ ಮಾಡಬೇಕಾಗುತ್ತದೆ. ಲೂಟಿ ಹೊಡೆಯಿರಿ ಎಂದು ಸರ್ಕಾರವೇ ಒತ್ತಡ ಹೇರುತ್ತಿದೆ. ಪೊಲೀಸ್ ಇಲಾಖೆ ಸಂಪೂರ್ಣ ವೀಕ್ ಆಗುತ್ತಿದೆ. ಪೊಲೀಸರಿಗೆ ರಕ್ಷಣೆ ಕೊಡುವ ಸ್ಥಿತಿ ನಿರ್ಮಾಣ ಆಗಿದೆ
ಪ್ರಾಮಣಿಕತೆ ಇರುವುದರಿಂದ ಪರಶುರಾಮ್ ಆತ್ಮಹತ್ಯೆ
ಬೆಂಗಳೂರಲ್ಲಿ ಪೊಲೀಸ್ ಠಾಣೆಗೆ ಪೋಸ್ಟಿಂಗ್ ಪಡೆಯಲು ಕೋಟಿಗಟ್ಟಲೆ ಹಣ ಕೊಡಬೇಕು.

Advertisement

ಜಿಲ್ಲೆಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಕೊಡಬೇಕಿದೆ
ಜನಪ್ರತಿನಿಧಿಗಳು, ಹೋಂ ಮಿನಿಸ್ಟರ್, ಚೀಫ್ ಮಿನಿಸ್ಟರ್ ಗೆ ಹಣ ಕೊಡಬೇಕು. ಸ್ಟ್ರಾಂಗ್ ಚೀಫ್ ಮಿನಿಸ್ಟರ್ ಇದ್ದರೆ ಈರೀತಿ ಆಗಲ್ಲ
ವೀಕ್ ಚೀಫ್‌ಮಿನಿಸ್ಟರ್ ಇದ್ದಾಗ ಈರೀತಿ ಆಗುತ್ತದೆ
ಎಂಎಲ್‌ಎ ಗಳಿಗೆ ತೋಳಗಳಂತೆ ಹಣ ಕೀಳಲು ಬಿಟ್ಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

ರಾಯಚೂರಿನಲ್ಲಿ ಪಿಎಸ್ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅಲ್ಲಿನ ಶಾಸಕ ಹಾಗೂ ಮಗ ಮೂವತ್ತು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.

Tags :
Advertisement