Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಂಗಭೂಮಿಯ ಹಲವು  ಕಸರತ್ತುಗಳಿಂದ ಕೂಡಿದ ಬೋಧನೆ ಪರಿಣಾಮಕಾರಿಯಾಗಿರುತ್ತದೆ :  ಕೆಪಿಎಂ.ಗಣೇಶಯ್ಯ

07:07 PM Apr 05, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 05 : ವಿದ್ಯೆ ಕಲಿಸುವ ಪ್ರಶಿಕ್ಷಣಾರ್ಥಿಗಳಿಗೆ ರಂಗಭೂಮಿಯ ಆಯಾಮಗಳ ಬಗ್ಗೆ ಅರಿತಿರಬೇಕು. ದೇಹದ ನಿಲುವು, ಮಾತಿನ ಏರಿಳಿತ, ಪಾಠೋಪಕರಣ ಹಾಗೂ ಪೀಠೋಪಕರಣಗಳ ಬಳಕೆ, ಸತ್ವಪೂರ್ಣವಾದ ಅಭಿವ್ಯಕ್ತಿಯನ್ನು ಕರಗತ ಮಾಡಿಕೊಳ್ಳಬೇಕು. ರಂಗಭೂಮಿಯ ಹಲವು ಕಸರತ್ತುಗಳಿಂದ ಕೂಡಿದ ಬೋಧನೆ ಪರಿಣಾಮಕಾರಿಯಾಗಿರುತ್ತದೆ ಎಂದು ರಂಗ ನಿರ್ದೇಶಕ ಕೆಪಿಎಂ.ಗಣೇಶಯ್ಯ ತಿಳಿಸಿದರು.

Advertisement

ನಗರದ ಸಮೀಪವಿರುವ ಮಲ್ಲಾಪುರ ಗ್ರಾಮದಲ್ಲಿ ಬಾಪೂಜಿ ಸಮೂಹ ಸಂಸ್ಥೆಯ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಬಾಪೂಜಿ ಬಿ.ಇಡಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರ -2024 ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕೆ ಮತ್ತು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ನೀಡುವಲ್ಲಿ ವಿದ್ಯಾರ್ಥಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು. ಸ್ಥಾಯೀಭಾವಗಳಾದ ರತಿ, ವಿನೋದ, ಶೋಕ, ಕ್ರೋಧ, ಉತ್ಸಾಹ, ಭಯ, ಜಿಗುಪ್ಸೆ, ಆಶ್ಚರ್ಯ, ಶಾಂತಿ ಇವುಗಳಿಗೆ ಅನುಕ್ರಮವಾಗಿ ಶೃಂಗಾರ, ಹಾಸ್ಯ, ಕರುಣಾ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತ ಹೀಗೆ ನವರಸಗಳು ಹುಟ್ಟುತ್ತವೆ. ಈ ಕುರಿತು ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ಪಡೆದುಕೊಂಡು ಪಾಠಬೋಧನೆಗೆ ಪ್ರಶಿಕ್ಷಣಾರ್ಥಿಗಳು ಮಾನಸಿಕ ಮತ್ತು ದೈಹಿಕವಾಗಿ ಶ್ರಮವಹಿಸಬೇಕಾಗುತ್ತದೆ. ಕಲಿಕೆಯ ಹಂತದಲ್ಲೇ ರಂಗಭೂಮಿಯ ಕುರಿತು ಅರಿವು ಮೂಡಿಸುವ ಅಗತ್ಯತೆಗೆ ರಂಗಶಿಕ್ಷಕರ ಅವಶ್ಯಕತೆಯಿದೆ ಎಂದರು.

Advertisement

ಬಾಪೂಜಿ ಸಮೂಹ ಸಂಸ್ಥೆಗಳ ನಿರ್ದೇಶಕ ಕೆ.ಎಂ.ಚೈತನ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಪೌರತ್ವ ತರಬೇತಿಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಪರಸ್ಪರ ಸಹಕಾರ ತಿಳುವಳಿಕೆ ಮೂಲಕ ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಬಿರದ ನಿಯಮ ಹಾಗೂ ಶಿಸ್ತಿಗೆ ಬದ್ಧರಾಗಿರಬೇಕು, ಶ್ರಮದಾನದ ಮೂಲಕ ಶ್ರಮದ ಮಹತ್ವವನ್ನು ತಿಳಿಯಬೇಕು ಎಂದರು.

 

ಕೆಎಂಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಕೆ.ಮಂಜುಳ ಮಾತನಾಡಿ ಮೂರು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಪ್ರಶಿಕ್ಷಣಾರ್ಥಿಗಳು ಸಂಘಟನೆಗಳ ಸಹಭಾಗಿತ್ವ, ಸಮಾನತೆ ಮತ್ತು ನಾಯಕ ಗುಣಗಳನ್ನು ಬೆಳೆಸುವುದರ ಜೊತೆಗೆ ಸಾಮಾಜಿಕ ಶಿಸ್ತು ಮತ್ತು ಜವಾಬ್ದಾರಿಗಳನ್ನು ಪ್ರಶಿಕ್ಷಣಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

 

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್, ಮೇಘನಾಚೇತನ್, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ.ಎಂಆರ್.ಜಯಲಕ್ಷ್ಮಿ, ಹಿರಿಯ ರಂಗ ನಿರ್ದೇಶಕ ವೈ.ಡಿ ಬದಾಮಿ, ಉಪಪ್ರಾಚಾರ್ಯ ಹೆಚ್.ಎನ್. ಶಿವಕುಮಾರ್, ಸಹಾಯಕ ಪ್ರಾಧ್ಯಾಪಕ ಹಾಗೂ ಶಿಬಿರಾಧಿಕಾರಿ ಡಾ,ಹನುಮಂತರೆಡ್ಡಿ, ಉಪನ್ಯಾಸಕಿಯರಾದ ಎಸ್.ಟಿ.ಪದ್ಮಶ್ರೀ, ಎ.ಅರ್ಚನ, ಟಿ.ವೈ.ಗೀತ, ಉಪನ್ಯಾಸಕರಾದ ಎಸ್.ಮಂಜುನಾಥಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಟಿ.ಈಶ್ವರಪ್ಪ, ರಂಗ ನಿರ್ದೇಶಕಿ ಮಂಜುಳಬದಾಮಿ, ಶಿಬಿರಾಧಿಕಾರಿ ಓ.ಎಮ್. ಮಂಜುನಾಥ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಆರ್. ಗಿರೀಶ್ ಮುಂತಾದದವರು ಉಪಸ್ಥಿರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಶಿಕ್ಷಣಾರ್ಥಿಗಳು ವಚನ ನೃತ್ಯ ರೂಪಕಗಳು, ಜಾನಪದ ನೃತ್ಯಗಳು, ಗೀತಗಾಯನ ನಡೆಸಿಕೊಟ್ಟರು.

Advertisement
Tags :
chitradurgaeffectiveKPM.Ganeshaiahlots of theatrical exercisesTeachingಕೆಪಿಎಂ.ಗಣೇಶಯ್ಯಚಿತ್ರದುರ್ಗಬೋಧನೆರಂಗಭೂಮಿ
Advertisement
Next Article