Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪದೇ ಪದೇ ರಂಗೇನಹಳ್ಳಿ ಶಾಲೆಯಲ್ಲಿ ಶಿಕ್ಷಕರ ಜಗಳ : ಶಾಲೆಗೆ ಬೀಗ ಹಾಕಿದ ಪೋಷಕರು..!

09:08 PM Feb 06, 2024 IST | suddionenews
Advertisement

 

Advertisement

ಸುದ್ದಿಒನ್, ಹಿರಿಯೂರು, ಫೆಬ್ರವರಿ.06  : ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಎಂದರೆ ಒಂದು ಮನೆಯಲ್ಲಿ ತಂದೆ ತಾಯಿಯ ಪಾತ್ರ, ಶಾಲೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗುತ್ತದೆ. ಮಕ್ಕಳು ಬೆಳೆಯುವಾಗ ವಾತಾವರಣ ಯಾವ ರೀತಿ ಇರುತ್ತದೆಯೋ ಅದನ್ನೇ ನೋಡಿಯೇ ಬೆಳೆಯುವುದು. ಇದು ಶಿಕ್ಷಕರಾದವರೇ ಪೋಷಕರಿಗೆ ಹೇಳುತ್ತಾರೆ. ಆದರೆ ಅದೇ ಶಿಕ್ಷಕರು ತಪ್ಪು ಮಾಡಿದರೆ ಹೇಗೆ..? ರಂಗೇನಹಳ್ಳಿ ಶಾಲೆಯಲ್ಲಿ ಅಂಥದ್ದೊಂದು ಘಟನೆ ನಡೆದಿದೆ.

ಶಿಕ್ಷಕಿಯರಿಬ್ಬರ ಒಳ ಜಗಳಕ್ಕೆ ಬೇಸತ್ತ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ರಂಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ಜನ ಶಿಕ್ಷಕರಿದ್ದು ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಸುಮಾರು 149 ಮಕ್ಕಳಿದ್ದು ಈ ಹಿಂದೆಯೂ ಶಿಕ್ಷಕರ ಕಿತ್ತಾಟದಿಂದ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. ಪ್ರತಿಷ್ಠೆಗೆ ಬಿದ್ದು ಮಕ್ಕಳಿಂದ ಎರಡೆರಡು ಬಾರಿ ಪ್ರಾರ್ಥನೆ ಮಾಡಿಸಿ ಒಳಜಗಳದ ಆಕ್ರೋಶವನ್ನು ಇಲ್ಲಿನ ಶಿಕ್ಷಕರು ಹೊರ ಹಾಕಿಕೊಂಡ ಉದಾಹರಣೆಗಳು ಇವೆ ಎನ್ನುತ್ತಾರೆ ಗ್ರಾಮಸ್ಥರು.

Advertisement

ಮಕ್ಕಳ ಎದುರು ಸೌಜನ್ಯ, ಶಿಸ್ತು, ಸಂಯಮ ಪ್ರದರ್ಶಿಸಬೇಕಾದ ಶಿಕ್ಷಕರೇ ಹೀಗೆ ಪರಸ್ಪರ ಜಗಳವಾಡಿದರೆ ಹೇಗೆಂದು ಎಸ್ ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ, ಈಗಾಗಲೇ ಒಮ್ಮೆ ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ಆದರೆ ಮಂಗಳವಾರ ಪೋಷಕರು ಇವರದು ನಿಲ್ಲದ ಜಗಳ ಎಂದು ನಿರ್ಧರಿಸಿ ಶಾಲಾ ಆವರಣದಲ್ಲಿ ಜಮಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬರುವವರೆಗೂ ಶಾಲೆ ನಡೆಯಲು ಬಿಡುವುದಿಲ್ಲ ಎಂದು ಹಠ ಹಿಡಿದಾಗ ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೋಷಕರನ್ನು ಸಮಾಧಾನಿಸಿ ಶಿಕ್ಷಕಿಯರನ್ನು ಬದಲಾವಣೆ ಮಾಡುವ ಭರವಸೆ ನೀಡಿದ ಮೇಲೆ ಆಕ್ರೋಶಗೊಂಡಿದ್ದ ಪೋಷಕರು ಸಮಾಧಾನಗೊಂಡರು. ಈಗಾಗಲೇ ಶಾಲೆಯಲ್ಲಿನ ಶಿಕ್ಷಕಿಯರ ಕಿತ್ತಾಟ ಹಳೆಯ ವಿಷಯವಾಗಿದ್ದು ಮಕ್ಕಳ ಮನಸಿನ ಮೇಲೆ ಇವರ ಜಗಳಗಳು ಪ್ರಭಾವ ಬೀರುವುದರಿಂದ ಆದಷ್ಟು ಬೇಗ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರ ಮನಸ್ತಾಪದಿಂದ ಪದೇಪದೇ ಜಗಳವಾಗುತ್ತಿದ್ದು ಇದರಿಂದ ಮಕ್ಕಳ ಕಲಿಕೆಗೆ ಅನ್ಯಾಯವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಶಿಕ್ಷಕಿಯರಿಬ್ಬರಿಗೂ ಒಂದೆರಡು ಬಾರಿ ತಿಳಿ ಹೇಳಿದ್ದರೂ ಕೂಡ ಪದೇ ಪದೇ ಜಗಳ ಮುಂದುವರಿಸಿಕೊಂಡು ಬಂದಿದ್ದಾರೆ. ಗ್ರಾಮಸ್ಥರು ಶಾಲೆಗೆ ಬೀಗ ಜಡಿಯಲು ಮುಂದಾದರು ಎಂಬ ವಿಷಯ ತಿಳಿದ ತಕ್ಷಣ ನಾನು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರು, ಶಾಲಾ ಆಡಳಿತ ಸಮಿತಿ ಸದಸ್ಯರ ಜೊತೆ ಚರ್ಚಿಸಿ ಶಿಕ್ಷಕಿಯರಿಬ್ಬರ ಬದಲಾವಣೆಯ ಭರವಸೆ ನೀಡಿದ್ದೇನೆ ಎಂದು ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ
ಸಿಎಂ ತಿಪ್ಪೇಸ್ವಾಮಿ ತಿಳಿಸಿದರು.

Advertisement
Tags :
chitradurgafighthiriyurulockedRangenahallirepeatedlyschoolsuddionesuddione newsteachersVillagersಗ್ರಾಮಸ್ಥರುಚಿತ್ರದುರ್ಗಜಗಳಪೋಷಕರುಬೀಗರಂಗೇನಹಳ್ಳಿ ಶಾಲೆಶಾಲೆಶಿಕ್ಷಕರುಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article