ಜಾತಿರಾಜಕಾರಣದಿಂದ ಚನ್ನಕೇಶವ ದೇವಸ್ಥಾನದ ಪ್ರವೇಶಕ್ಕೆ ಸ್ವಾಮೀಜಿಗೆ ಅನುಮತಿ ಇಲ್ಲವಾ..?
ಚಿತ್ರದುರ್ಗ: ಜಾತಿಕಾರಣಕ್ಕೆ ನಮಗೂ ಗರ್ಭಗುಡಿಗೆ ಬಿಟ್ಟಿಲ್ಲ ಎಂದು ಚಿತ್ರದುರ್ಗದ ಕನಕಪೀಠದ ಈಶ್ವರಾನಂದಪುರಿಶ್ರೀ ಹೇಳಿದ್ದಾರೆ. ಬಾಗೂರಿನ ಚನ್ನಕೇಶವ ದೇಗುಲದಲ್ಲಿ ಗರ್ಭಗುಡಿಗೆ ಬಿಟ್ಟಿಲ್ಲ ಎಂದು ಆರೋಪ ಮಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಈಶ್ವರಾನಂದಪುರಿ ಸ್ವಾಮೀಜಿ, ಇಲ್ಲೆ ಪಕ್ಕದಲ್ಲಿ ಒಂದು ದೇವಸ್ಥಾನವಿದೆ. ಬಾಗೂರು ಚನ್ನಕೇಶವ ದೇವಸ್ಥಾನ. ನಾನು ಅಲ್ಲಿಗೆ ಹೋದೆ ಅಂತ ಹೇಳಿ ಆ ದೇವಸ್ಥಾನವನ್ನೇ ತೊಳೆದು ಬಿಟ್ಟರು. ದೇವಸ್ಥಾನದಿಂದಾನೇ ಹೊರಗೆ ಹಾಕಿದ್ರು. ನನಗೆ ಗೊತ್ತಿಲ್ಲ. ಅದು ಮುಜರಾಯಿ ದೇವಸ್ಥಾನ. ನಾವೂ ಗೊತ್ತಾಗಿದ್ರೆ ಗಲಾಟೆ ಮಾಡ್ತಾ ಇದ್ವಿ. ಇದು ಮುಜರಾಯಿ ಇಲಾಖೆ ಸುಮ್ಮನೆ ಒಳಗೆ ಬಿಡಿ ಅಂತ. ಅದು ಗರ್ಭಗುಡಿ ಅದಕ್ಕೂ ಮೊದಲು ಒಂದು ಪ್ರಾಂಗಣ ಇದೆ. ನಾವೆಲ್ಲಾ ಅಲ್ಲಿ ನಿಂತುಕಿಂಡಿದ್ದೆವು. ನಮ್ಮನ್ನು ಮಾತ್ರ ಯಾರೂ ಒಳಗೆ ಬಿಟ್ಟುಕೊಳ್ಳಲಿಲ್ಲ. ವೈಕುಂಠ ಏಕಾದಶಿಯಂದು ನರಕ ಗೊತ್ತಾಗುತ್ತಿಲ್ಲ . ದೇವಸ್ಥಾನದೊಳಗೆ ಹೆಣ್ಣು ಮಕ್ಕಳನ್ನು ಬಿಟ್ಟಿದ್ದಾರೆ. ಆದರೆ ನಮ್ಮನ್ನು ಬಿಡಲೇ ಇಲ್ಲ. ಆದರೆ ಇಂಥ ಪೀಳಿಗೆಯಲ್ಲೂ ಈ ರೀತಿ ಮಾಡಿದರಲ್ಲ ಎಂಬ ಬೇಸರ ಇದೆ ಎಂದಿದ್ದಾರೆ.
ಈ ಸಂಬಂಧ ಚನ್ನಕೇಶವ ದೇಗುಲದ ಅರ್ಚಕರಾದ ಶ್ರೀನಿವಾಸ್ ಮಾತನಾಡಿ, ಅವತ್ತು ಸ್ವಾಮಿಗಳು ಬಂದಾಗ ಪ್ರತಿ ವರ್ಷ ಹೇಗೆ ಗೌರವ ಕೊಡಬೇಕೋ ಆ ರೀತಿ ಮಾಡಿ ಕಳುಹಿಸಿದ್ದೇವೆ. ಹಾಗೇ ದೇವಸ್ಥಾನದ ಸ್ವಚ್ಛತೆಯನ್ನೇನು ಮಾಡಿಲ್ಲ. ಗರ್ಭಗುಡಿಗೆ ಪ್ರವೇಶವನ್ನೇನು ನಿರಾಕರಣೆ ಮಾಡಿಲ್ಲ. ಅವೆಇಗೆ ಅವಮಾನ ಆಗುವಂತ ರೀತಿ ಏನು ನಡೆದುಕೊಂಡಿಲ್ಲ. ಗರ್ಭಗುಡಿಗೆ ಅವರು ಬಂದಿಲ್ಲ. ಪ್ರತಿವರ್ಷ ಎಲ್ಲಿಗೆ ಬಂದು ದರ್ಶನ ಮಾಡುತ್ತಿದ್ದರೋ ಅಲ್ಲಿಗೆ ಬಂದು ದರ್ಶನ ಮಾಡಿಕೊಂಡು ಹೋಗಿದ್ದಾರೆ. ಯಾಕೆ ಆ ರೀತಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.