For the best experience, open
https://m.suddione.com
on your mobile browser.
Advertisement

ವಿದೇಶಗಳಲ್ಲಿ ಭಾರತದ ಹಿರಿಮೆಯನ್ನು ಪ್ರಖ್ಯಾತಿಗೊಳಿಸಿದ ಕೀರ್ತಿ ಸ್ವಾಮಿ ವಿವೇಕಾನಂದರದ್ದು : ಎನ್.ನರಸಿಂಹಮೂರ್ತಿ

04:09 PM Jan 12, 2024 IST | suddionenews
ವಿದೇಶಗಳಲ್ಲಿ ಭಾರತದ ಹಿರಿಮೆಯನ್ನು ಪ್ರಖ್ಯಾತಿಗೊಳಿಸಿದ ಕೀರ್ತಿ ಸ್ವಾಮಿ ವಿವೇಕಾನಂದರದ್ದು   ಎನ್ ನರಸಿಂಹಮೂರ್ತಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 12 :  ಭೂಪಟದಲ್ಲಿ ಭಾರತ ದೇಶವನ್ನು ಎಂದು ಕಾಣುವಂತೆ ಮಾಡಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದು ನಿವೃತ್ತ ಪ್ರಾಂಶುಪಾಲರಾದ ಎನ್.ನರಸಿಂಹಮೂರ್ತಿ ಅಭೀಪ್ರಾಯಪಟ್ಟಿದ್ದಾರೆ.

Advertisement

ನಗರದ ಬಸವೇಶ್ವರ ಟಾಕೀಸ್ ಬಳಿಯಲ್ಲಿನ ಸಿಲಿಕಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂದು ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವೇಕಾನಂದರು ಬಾಲ್ಯದಿಂದಲೇ ವೇದ, ಉಪನಿಷತ್ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಆಸಕ್ತಿಯನ್ನು ಹೊಂದಿದ್ದರು. ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯನ್ನು ಸಹಾ ಹೊಂದಿದ್ದು ಇದಕ್ಕಾಗಿ ಗುರುಗಳನ್ನು ಸಹಾ ಹುಡುಕಿಕೊಂಡು ಹೊರಟಿದ್ದರು. ಭಾರತದ ಸಂಸ್ಕೃತಿಯನ್ನು ಬೇರೆ ದೇಶಗಳಲ್ಲಿ ಹರಡುವುದರ ಮೂಲಕ ನಮ್ಮ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

ನಮ್ಮ ದೇಶದ ಹಿರಿಮೆಯನ್ನು ಬೇರೆ ದೇಶದಲ್ಲಿ ಪ್ರಖ್ಯಾತಿಗೊಳಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗಿದೆ. ಹಲವಾರು ವರ್ಷಗಳ ಹಿಂದೆ ನಮ್ಮ ದೇಶವನ್ನು ಬೇರೆ ದೇಶಗಳು ಕೀಳಾಗಿ ಕಾಣುತ್ತಿದ್ದರು ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ ಮೇಲೆ ನಮ್ಮ ದೇಶವನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಚಿಕಾಗೂ ಸಮ್ಮೇಳನದಲ್ಲಿ ಕೇವಲ 5 ನಿಮಿಷ ಬಾಷಣ ಮಾಡಲು ಸಿದ್ದರಾಗಿದ್ದ ಸ್ವಾಮಿ ವಿವೇಕಾನಂದರ ಭಾಷಣದಿಂದ ಅಲ್ಲಿನ ಜನತೆ ಮತ್ತೇ ಮಾತನಾಡಲು ಹೇಳುವುದರ ಮೂಲಕ ವಿವೇಕಾನಂದ ಮಾತುಗಳಿಂದ ಪ್ರರೇಪಿತರಾದರು.

ಈ ಮಾತುಗಳನ್ನು ಹಾಡುವುದರ ಮೂಲಕ ಭೂಪಟದಲ್ಲಿ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಇಂದಿನ ದಿನಮಾನದಲ್ಲಿ ಯುವ ಜನತೆ ದೇಶ ಭಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.

ಸಿಲಿಕಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಸ್ಥಾಪಕರಾದ ಗೋಪಾಲಸ್ವಾಮಿ ನಾಯಕ್ ಮಾತನಾಡಿ, ಭಾರತ ದೇಶದಲ್ಲಿ ಯುವ ಪ್ರತಿಭೆಗಳು ಹೆಚ್ಚಾಗಿದ್ದಾರೆ. ಅವರಿಗೆ ಪ್ರೋತ್ಸಾಹ ಬೇಕಿದೆ. ಸ್ವಾಮಿ ವಿವೇಕಾನಂದರ ವಾಣಿಯಂತೆ ನಮ್ಮ ಗುರಿಯನ್ನು ಮುಟ್ಟುವವರೆಗೂ ವಿಶ್ರಾಂತಿಯನ್ನು ಪಡೆಯಬಾರದು. ವಿವೇಕಾನಂದರು ಹೂರ ದೇಶದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವುದರ ಮೂಲಕ ದೇಶದ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಅವರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಲಿಕಾನ್ ಇನ್ಸೂಟೂಟ್ ಆಫ್ ಟೆಕ್ನಾಲಜಿಯ ವ್ಯವಸ್ಥಾಪಕರಾದ ಸೋಮಶೇಖರ್, ಶಿಕ್ಷಕಿ ನಂದಿನಿ, ವಿದ್ಯಾರ್ಥಿಗಳಾದ ಅನುಪಮ, ಐಶ್ಚರ್ಯ, ಮೇಘ, ದೀಪ, ಪವನಕುಮಾರ್, ಹರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Tags :
Advertisement