For the best experience, open
https://m.suddione.com
on your mobile browser.
Advertisement

SC/ST ಒಳಮೀಸಲಾತಿ ಸಮಾನತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ : ಚಿತ್ರದುರ್ಗದಲ್ಲಿ ದಲಿತ ಮುಖಂಡರ ಸಂಭ್ರಮಾಚರಣೆ

04:20 PM Aug 01, 2024 IST | suddionenews
sc st ಒಳಮೀಸಲಾತಿ ಸಮಾನತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌   ಚಿತ್ರದುರ್ಗದಲ್ಲಿ ದಲಿತ ಮುಖಂಡರ ಸಂಭ್ರಮಾಚರಣೆ
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 01 : ಪರಿಶಿಷ್ಣ ಜಾತಿ/ಪಂಗಡಗಳ ಮೀಸಲಾತಿಯಡಿ ರಾಜ್ಯ ಸರ್ಕಾರಗಳಿಗೆ ಒಳಮೀಸಲು ನೀಡುವ ಅಧಿಕಾರವಿದೆಯಾ ಎಂಬ ಸೂಕ್ಷ್ಮ ಸಂಗತಿಯ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯದ ಏಳು ಸದಸ್ಯರ ಪೀಠ ಕಳೆದ ವರ್ಷ ಆರಂಭಿಸಿತ್ತು. ಕರ್ನಾಟಕವೂ ಸೇರಿದಂತೆ ಇಡೀ ದೇಶದ ಮೇಲೆ ಪರಿಣಾಮ ಬೀರುವಂತ ಅರ್ಜಿ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿದ್ದ ಪೀಠ ಕೈಗೊಂಡಿತ್ತು. ಇದೀಗ ರಾಜ್ಯ ಸರ್ಕಾರಗಳಿಗೆ ಈ ಹೊಣೆ ಹೊರಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

Advertisement
Advertisement

ಒಳ ಮೀಸಲಾತಿ ಪರ ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿದ್ದಂತೆ ಚಿತ್ರದುರ್ಗದಲ್ಲಿ ದಲಿತ ಮುಖಂಡರು ಸಂಭ್ರಮಿಸಿದ್ದಾರೆ. ನಗರದ ಡಾ.ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಪ್ರತಿಮೆಯ ಪಾದಕ್ಕೆ ನಮಿಸಿದ ಮುಖಂಡರು, ಜೈಕಾರ ಹಾಕಿದ್ದಾರೆ.

ಸಿಜೆಐ ಚಂದ್ರಚೂಢ ನೇತೃತ್ವದ ಪೀಠದಿಂದ ಮಹತ್ವದ ತೀರ್ಪು ಬಂದಿದೆ. ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿಯವರು ಮಾತ್ರ ಭಿನ್ನ ತೀರ್ಪು ನೀಡಿದ್ದಾರೆ. ಉಳಿದ ಆರು ನ್ಯಾಯಮೂರ್ತಿಗಳು ಒಳಮೀಸಲಾತಿ ಸಮಾನತೆ ಉಲ್ಲಂಘಿಸುವುದಿಲ್ಲ ಎಂದು ತೀರ್ಪು ನೀಡಿದ್ದಾರೆ.

Advertisement

ಕರ್ನಾಟಕದಲ್ಲಿಯೂ ಈ ಹಿಂದೆ ಇದ್ದ ಬಸವರಾಜ್ ಬೊಮ್ಮಾಯಿ ಸರ್ಕಾರ ಎಸ್ಸಿ/ಎಸ್ಟಿ ಒಳಮೀಸಲಾತಿ ಘೋಷಣೆ ಮಾಡಿತ್ತು. ಎಸ್ಸಿ/ಎಸ್ಟಿ ಒಳಮೀಸಲಾತಿ ವಿಚಾರವನ್ನು ವಿಚಾರಣೆ‌ ನಡೆಸಿದ ಸುಪ್ರೀಂ ಕೋರ್ಟ್, ಕ್ರಿಮಿಲೇಯರ್ ವರ್ಗವನ್ನು ಎಸ್ಸಿ/ಎಸ್ಟಿ ಮೀಸಲಾತಿಯಿಂದ ಹೊರಗಿಡಬೇಕು. ರಾಜ್ಯ ಸರ್ಕಾರಗಳು ಕ್ರಿಮಿಲೇಯರ್ ವರ್ಗಗಳನ್ನು ಗುರುತಿಸಲು ನೀತಿ ರೂಪಿಸಬೇಕು. ಸಮಾನತೆ ಸಾಧಿಸಲು ಇರುವುದು ಇದೊಂದೆ ಮಾರ್ಗ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ, ಕ್ರಿಮಿಲೇಯರ್ ಒಬಿಸಿಗೆ ಅನ್ವಯವಾಗುತ್ತದೆ. ಎಸ್ಸಿ/ಎಸ್ಟಿಗೂ ಅನ್ವಯವಾಗುತ್ತದೆ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ. ತನ್ನ ಮಹತ್ವದ ತೀರ್ಪಿನಲ್ಲಿ ಎಸ್ಸಿ/ಎಸ್ಡಿ ಉಪ ವರ್ಗೀಕರಣಕ್ಕೆ ಅಸ್ತು ಎಂದಿದೆ. ರಾಜ್ಯಗಳಿಗೆ ಉಪವರ್ಗೀಕರಣ ಮಾಡಲು ಅಧಿಕಾರವಿದೆಯೆಂದು ಸಿಜೆಐ ಚಂದ್ರಚೂಢ ನೇತೃತ್ವದ ಪೀಠ ತೀರ್ಪು ನೀಡಿದೆ.

Advertisement

Tags :
Advertisement