For the best experience, open
https://m.suddione.com
on your mobile browser.
Advertisement

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು : ಮುಖ್ಯಮಂತ್ರಿ ತಡ ಮಾಡದೆ ಒಳ ಮೀಸಲಾತಿಗೆ ಆದೇಶಿಸಬೇಕು : ಹನುಮಂತಪ್ಪ ದುರ್ಗ ಒತ್ತಾಯ

06:56 PM Aug 02, 2024 IST | suddionenews
ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು   ಮುಖ್ಯಮಂತ್ರಿ ತಡ ಮಾಡದೆ ಒಳ ಮೀಸಲಾತಿಗೆ ಆದೇಶಿಸಬೇಕು   ಹನುಮಂತಪ್ಪ ದುರ್ಗ ಒತ್ತಾಯ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 02  : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಲ್ಲಿನ ಅಸ್ಪೃಶ್ಯರಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವುದನ್ನು ಸ್ವಾಗತಿಸಿರುವ ಮಾದಿಗ ಮಹಾಸಭಾದವರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಸಲ್ಲಿಸಿ ಸಂಭ್ರಮಿಸಿದರು.

Advertisement

ಪರಿಶಿಷ್ಟ ಜಾತಿಯಲ್ಲಿರುವ 101 ಉಪ ಜಾತಿಗಳಲ್ಲಿನ ನಿಜವಾಗಿಯೂ ತುಳಿತಕ್ಕೊಳಗಾಗಿರುವವರಿಗೆ ಹೊಲೆಯ, ಮಾದಿಗರಿಗೆ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿಯನ್ನು ಕಲ್ಪಿಸಿದರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ನೆರವಾಗಲಿದ್ದು, ಕಳೆದ ಮೂವತ್ತು ನಲವತ್ತು ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಡ ಮಾಡದೆ ಒಳ ಮೀಸಲಾತಿಗೆ ಆದೇಶ ಹೊರಡಿಸುವಂತೆ ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಒತ್ತಾಯಿಸಿದರು.

ದೇವರಾಜ್ ನಗರಂಗೆರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಲಕ್ಷ್ಮಣ್, ನ್ಯಾಯವಾದಿಗಳಾದ ಆರ್.ನಿಂಗಪ್ಪ, ಸುರೇಶ್ ಭಂಜಿಗೆರೆ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನಾಕಿಕೆರೆ ಹನುಮಂತಪ್ಪ, ಸೋಮಣ್ಣ ಓ.ಚಿಕ್ಕಪ್ಪನಹಳ್ಳಿ, ವೆಂಕಟೇಶ್ ದೊಡ್ಡೇರಿ, ನಾಗೇಂದ್ರಪ್ಪ, ಹೆಗ್ಗೆರೆ ಶಂಕರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.

Tags :
Advertisement