Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ ಫಿಲ್ಟರ್ ನೀರಿನ ಬೆಲೆಯನ್ನು ದಿಢೀರನೇ ಏರಿಕೆ : ಜೈಹಿಂದ್ ರಕ್ಷಣಾ ವೇದಿಕೆ ವಿರೋಧ

04:19 PM Dec 01, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.01  : ನಗರದಲ್ಲಿ ಫಿಲ್ಟರ್ ನೀರಿನ ಬೆಲೆಯನ್ನು ದಿಢೀರನೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಜೈಹಿಂದ್ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಈ ಹಿಂದೆ ಹಿರಿಯೂರಿನ ವಾಣಿವಿಲಾಸಸಾಗರ ಹಾಗೂ ಶಾಂತಿಸಾಗರದಿಂದ ನಗರಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಕೆಲವೊಮ್ಮೆ ಕಲುಷಿತ ನೀರು ಕುಡಿದು ಜನ ಜ್ವರ, ಕೆಮ್ಮ, ನೆಗಡಿಯಿಂದ ಬಳಲುತ್ತಿದ್ದುದನ್ನು ಗಮನಿಸಿ ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಸಿಗಲಿ ಎನ್ನುವ ಉದ್ದೇಶದಿಂದ ಐದು ರೂ.ಗಳಿಗೆ ಇಪ್ಪತ್ತು ಲೀಟರ್ ಫಿಲ್ಟರ್ ನೀರು ಪೂರೈಕೆಯಾಗುತ್ತಿದ್ದುದು ಈಗ ಇಪ್ಪತ್ತು ಲೀಟರ್‍ಗೆ ಹತ್ತು ರೂ.ಗಳನ್ನು ನಿಗಧಿಪಡಿಸಿರುವುದು ಯಾವ ನ್ಯಾಯ? ಎಂದು ಜೈಹಿಂದ್ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರಶ್ನಿಸಿದರು.

ಫಿಲ್ಟರ್ ನೀರಿಗೆ ಬೆಲೆ ಏರಿಕೆ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಯವರಲ್ಲಿ ಜೈಹಿಂದ್ ರಕ್ಷಣಾ ವೇದಿಕೆ ಅಧ್ಯಕ್ಷ ಸೈಯದ್ ಅಖ್ತರ್ ಆಗ್ರಹಿಸಿದರು.

ಚಂದ್ರಪ್ಪ, ರಹಮತ್, ಜಬೀವುಲ್ಲಾ, ಬರ್ಕತ್, ಮುಹೀಬ್ ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Tags :
chitradurgaFilter waterJaihind Rakshasa vedhikeopposesprice of filtered waterSudden increaseಚಿತ್ರದುರ್ಗಜೈಹಿಂದ್ ರಕ್ಷಣಾ ವೇದಿಕೆಫಿಲ್ಟರ್ ನೀರುಬೆಲೆಯನ್ನು ದಿಢೀರನೇ ಏರಿಕೆವಿರೋಧ
Advertisement
Next Article