For the best experience, open
https://m.suddione.com
on your mobile browser.
Advertisement

ಆಸಕ್ತಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದರೆ ಉದ್ಯೋಗದಲ್ಲಿ ಯಶಸ್ಸು ಸಾಧ್ಯ : ಡಾ. ರಂಗಸ್ವಾಮಿ

03:30 PM Jan 12, 2024 IST | suddionenews
ಆಸಕ್ತಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದರೆ ಉದ್ಯೋಗದಲ್ಲಿ ಯಶಸ್ಸು ಸಾಧ್ಯ   ಡಾ  ರಂಗಸ್ವಾಮಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
                         ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 12 :  ಯಾವುದೇ ಕೆಲಸವನ್ನು ಆಸಕ್ತಿ ಮತ್ತು ಶ್ರದ್ಧೆಯಿಂದ ಮಾಡಿದರೆ ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಬಹುದು ಎಂದು ಜಿಲ್ಲಾ ಪಂಚಾಯತ್‍ನ ಯೋಜನಾ ನಿರ್ದೇಶಕರಾದ ಡಾ. ರಂಗಸ್ವಾಮಿ ಕರೆ ನೀಡಿದರು.

Advertisement

ರುಡ್‍ಸೆಟ್ ಸಂಸ್ಥೆಯು ಜಿಲ್ಲಾ ಪಂಚಾಯತ, ಚಿತ್ರದುರ್ಗ ಇವರ ಪ್ರಾಯೋಜಿಕತ್ವದಲ್ಲಿ ಎನ್‍ಆರ್‍ಎಲ್‍ಎಂ ಯೋಜನೆ ಯಡಿಯಲ್ಲಿ ಗ್ರಾಮೀಣ ಮಹಿಳೆಯರಿಗೆ ಉದ್ಯಮಶೀಲತಾಭಿವೃದ್ಧಿ (ಇ.ಡಿ.ಪಿ.)ಲಘು ವಾಹನ ಚಾಲನಾ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ  ಭಾಗವಹಿಸಿ ಶಿಬಿರಾರ್ಥಿಗಳಿಗೆ  ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಮನಸ್ಸಿದರೆ ಮಾರ್ಗ ಎನ್ನುವಂತೆ ಯಾವುದೇ ಕೆಲಸವನ್ನು ಆಸಕ್ತಿ ಮತ್ತು ಶ್ರದ್ಧೆಯಿಂದ ಮಾಡಿದರೆ ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಬಹುದು. ಈ ಚಾಲನಾ ವೃತ್ತಿಯು ಮಹತ್ವಪೂರ್ಣವಾದದ್ದು. ಈ ವೃತ್ತಿಯಲ್ಲಿ ಯಾವುದೇ ತಪ್ಪನ್ನು ಎಸಗಿದರು ಅಪಾಯಕಾರಿ, ಆದ್ದರಿಂದ ಜಾಗರುಕತೆಯಿಂದ ಚಾಲನೆಯನ್ನು ಮಾಡಿ. ರಸ್ತೆ ನಿಯಮಗಳನ್ನು ಸಾರಿಗೆ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿರಿ. ಗ್ರಾಮೀಣ ಮಹಿಳೆಯರ ಸ್ವಾವಲಂಬನೆ ಬದುಕು ಸಾಧಿಸಲು ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಲಿಸಿದೆ. ಅದರ ಬಾಗವಾಗಿ ಘನ ತ್ಯಾಜ್ಯವಸ್ತುಗಳ ಸಂಗ್ರಹ ಮತ್ತು ವಿಲೇವಾರಿಯ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಒಕ್ಕೂಟಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ರಾಧಮ್ಮ ಹೆಚ್.ಆರ್. ಶಿಬಿರಾರ್ಥಿಗಳಿಗೆ ನೀವು ಪಡೆದ ತರಬೇತಿಯನ್ನು ಸದುಪಯೋಗ ಪಡೆಸಿಕೊಂಡು ಸ್ವ ಉದ್ಯೋಗಿಗಳಾಗಿ ಹಾಗೂ ಉತ್ತಮ ಜೀವನ ನಡೆಸಿ ನಿಮ್ಮ ಗ್ರಾಮದಲ್ಲಿರುವ ಇತರ ನಿರುದ್ಯೋಗಿ ಯುವಕ ಯುವತಿಯರಿಗೆ ಸಂಸ್ಥೆಯ ಬಗ್ಗೆ ತಿಳಿಸಿ ಹಾಗೂ ಅವರಿಗೂ ತರಬೇತಿ ಪಡೆದು ಸ್ವ ಉದ್ಯೋಗ ಮಾಡುವ ಅವಕಾಶ ಕಲ್ಪಿಸಲು ಸಹಕರಿಸಿ ಎಂದರು.

ಕಾರ್ಯಕ್ರಮದಲ್ಲಿ ಎನ್‍ಆರ್‍ಎಲ್‍ಎಂ,ನ ಕಾರ್ಯಕ್ರಮ ವ್ಯವಸ್ಥಾಪಕ ರಮೇಶ ನಾಯ್ಕ್, ಮತ್ತು ಅತಿಥಿ ಉಪನ್ಯಾಸಕರಾದ ಮಹಮ್ಮದ ತಾಜ್‍ಬಾóಷಾ, ಉಪಸ್ಥಿತರಿದ್ದರು ಸಂಸ್ಥೆಯ ಉಪನ್ಯಾಸಕರಾದ  ತೋಟಪ್ಪ ಎಸ್. ಗಾಣಿಗೇರ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Tags :
Advertisement