For the best experience, open
https://m.suddione.com
on your mobile browser.
Advertisement

ಪಠ್ಯಗಳ ಜೊತೆಗೆ ದಿನಪತ್ರಿಕೆ ಓದುವ ಅಭ್ಯಾಸವಿದ್ದರೆ  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ : ಡಾ. ಜಿ. ಎನ್. ಸಂದೀಪ್

04:25 PM May 21, 2024 IST | suddionenews
ಪಠ್ಯಗಳ ಜೊತೆಗೆ ದಿನಪತ್ರಿಕೆ ಓದುವ ಅಭ್ಯಾಸವಿದ್ದರೆ  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ   ಡಾ  ಜಿ  ಎನ್  ಸಂದೀಪ್
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಮೇ. 21 : ಶಾಲಾ ಕಾಲೇಜುಗಳ ಪಠ್ಯಗಳ ಜೊತೆಗೆ ಸಾಮಾನ್ಯ ಜ್ಞಾನಕ್ಕಾಗಿ ದಿನಪತ್ರಿಕೆ ಹಾಗೂ ಮ್ಯಾಗ್ಜಿನ್‍ಗಳನ್ನು ಓದುವ ಅಭ್ಯಾಸ ಇಟ್ಟುಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು ಎಂದು ಸುನಿತಾ ನರ್ಸಿಂಗ್‍ಹೋಂ ಡಾ. ಜಿ. ಎನ್. ಸಂದೀಪ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Advertisement

ಕರ್ನಾಟಕ ಸಮಾಜ ಸೇವಾ ಸಂಘದ ವತಿಯಿಂದ ಅಗಸನಕಲ್ಲಿನಲ್ಲಿರುವ ಅಹಮದ್ ಪ್ಯಾಲೆಸ್‍ನಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Advertisement

ಪಠ್ಯಪುಸ್ತಕಕ್ಕು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ವ್ಯತ್ಯಾಸವಿದೆ. ಗ್ರೂಪ್ ಸ್ಟಡಿ ಮಾಡಲು ಆನ್‍ಲೈನ್‍ನಲ್ಲಿಯೂ ಅನೇಕ ಮಾಹಿತಿಗಳು ಸಿಗುತ್ತವೆ. ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧರಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

Advertisement
Advertisement

ಹಿರಿಯ ನ್ಯಾಯವಾದಿ ಹಾಗೂ ಮಸ್ಜಿದ್-ಎ-ಆಜಂ ಅಧ್ಯಕ್ಷರಾದ ಮಹಮದ್ ಸಾಧಿಕ್ ವುಲ್ಲಾ ಮಾತನಾಡಿ ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿ ಬೇಕು ಎಂದು ಪ್ರವಾದಿಗಳು ಹೇಳಿದ್ದಾರೆ. ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಜ್ಞಾನವೇ ಬೆಳಕು ಎನ್ನುವ ಸಂದೇಶವನ್ನು ನೀಡಿದ್ದಾರೆ. ಪಠ್ಯಪುಸ್ತಕಗಳ ಜೊತೆ ಕಠಿಣ ಪರಿಶ್ರಮ ಹಾಗೂ ಸತತ ಅಭ್ಯಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬಹುದು. ಒಮ್ಮೆ ಫೇಲ್ ಆದರೇ 2ನೇ ಬಾರಿಗೆ ಪ್ರಯತ್ನ ಮಾಡಿ ಯಾವುದೇ ಕಾರಣಕ್ಕೂ ಕೀಳರಿಮೆ ಸರಿಯಲ್ಲ ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೊದಲನೆ ಬಾರಿಗೆ ತೇರ್ಗಡೆಯಾಗುವುದು ಕಷ್ಟ. ಭಾಷೆ ಮೇಲೆ ಹಿಡಿತವಿರಬೇಕು. ನಿಮ್ಮ ಗುರಿ ದೊಡ್ಡದಾಗಿದ್ದಾಗ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಸಮಯಕ್ಕೆ ತುಂಬಾ ಮಹತ್ವವಿದೆ. ಹಾಗಾಗಿ ಕಾಲಹರಣ ಮಾಡುವ ಬದಲು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ಮೊಬೈಲ್‍ನಿಂದ ದೂರವಿದ್ದು, ಕೋಚಿಂಗ್ ಸೆಂಟರ್‍ಗಳಲ್ಲಿ ತರಬೇತಿ ಪಡೆದುಕೊಳ್ಳುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗಲಿದೆ ಎಂದರು.

ಕರ್ನಾಟಕ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಮದ್ ಸೈಫುಲ್ಲಾ ಅಧ್ಯಕ್ಷತೆ ವಹಿಸಿದ್ದರು.
ಫಾತಿಮಾ ಮಸೀದಿ ಅಧ್ಯಕ್ಷ ಜಿಕ್ರಿಯಾ ಸಾಬ್, ಜಾಮಿಯಾ ಮಸೀದಿ ಮಾಜಿ ಉಪಾಧ್ಯಕ್ಷ ಮಹಮದ್ ವಜೀರ್ ಸಾಬ್, ಬಡಾಮಕಾನ್ ದರ್ಗಾ ಕಮಿಟಿ ಅಧ್ಯಕ್ಷ ಸೈಯದ್ ಮುಜೀಬ್, ಸಿಟಿ ಆರ್ಥೋಪೆಡಿಕ್ ಕ್ಲಿನಿಕ್‍ನ ಡಾ. ಮಹಮದ್ ಖಲೀಲ್ ಖಾನ್ ವೇದಿಕೆಯಲ್ಲಿದ್ದರು. ಎಂ. ಹನೀಫ್ ನಿರೂಪಿಸಿದರು.

Advertisement
Tags :
Advertisement