Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗೆ ಎಐಡಿಎಸ್ಓ ವತಿಯಿಂದ ಪ್ರಣಾಳಿಕೆ ಸಲ್ಲಿಕೆ

07:32 PM Apr 24, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : ದುಡಿಯುವ ಜನರ ಹೋರಾಟದ ಧ್ವನಿಯಾಗಿರುವ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಜಾತ.ಡಿ ಅವರಿಗೆ ಎಐಡಿಎಸ್ಓ ವತಿಯಿಂದ ವಿದ್ಯಾರ್ಥಿಗಳ ಬೇಡಿಕೆಯ ಪ್ರಣಾಳಿಕೆಯನ್ನು ಸಲ್ಲಿಸಲಾಯಿತು.

Advertisement

ಸ್ವಾತಂತ್ರ್ಯ ಬಂದು 76ವರ್ಷಗಳು ಕಳೆದರೂ, ಎಲ್ಲಾ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದಿರೂ ಕೂಡ ವಿದ್ಯಾರ್ಥಿಗಳು ಸಮಸ್ಯೆಗಳು ಕೊನೆಗಾಣುತ್ತಿಲ್ಲ. ಎಲ್ಲಾ ಪಕ್ಷಗಳು ಕೂಡ ಶಿಕ್ಷಣವನ್ನು ಖಾಸಗೀಕರಣ ಮಾಡಿ ಬಡವರಿಗೆ ಶಿಕ್ಷಣ ಇಲ್ಲ ಅನ್ನುವಂತೆ ಆಗಿದೆ.

ಆದ್ದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್ ನಲ್ಲಿ 10% ಮತ್ತು ರಾಜ್ಯ ಬಜೆಟ್ 30%ರಷ್ಟು ಮೀಸಲಿಡಬೇಕು, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ದೊರೆಯಬೇಕು.  ವಿದ್ಯಾರ್ಥಿ ವೇತನ ಸರಿಯಾದ ಸಮಯಕ್ಕೆ ನೀಡಬೇಕು ಮತ್ತು ಮುಖ್ಯವಾಗಿ ಬಡವರಿಂದ ಶಿಕ್ಷಣ ಕಸಿದುಕೊಳ್ಳುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ-2020) ಅನ್ನು ಹಿಂಪಡೆಯಬೇಕು ಎಂದು ಎಐಡಿಎಸ್ಓ ಜಿಲ್ಲಾ ಮುಖಂಡರು ಕೆ.ಈರಣ್ಣ ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಎಐಡಿಎಸ್ಓ ಸದಸ್ಯರು ಮಂಜುನಾಥ, ಎಂ.ಶಾಂತಿ, ಅಭಿಲಾಷ, ನಾಗರಾಜ್.ಹೆಚ್.ಎಮ್ ಮತ್ತು ಇತರರು ಭಾಗವಹಿಸಿದ್ದರು.

Advertisement
Tags :
16 candidatesAIDSObengaluruchitradurgaSubmission of ManifestoSUCI Communist Partysuddionesuddione newsಅಭ್ಯರ್ಥಿಎಐಡಿಎಸ್ಓಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷಚಿತ್ರದುರ್ಗಪ್ರಣಾಳಿಕೆ ಸಲ್ಲಿಕೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article