Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಧ್ಯಯನ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ : ಎಸ್.ಸಂದೀಪ್

02:55 PM Oct 22, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 22 : ತಕ್ಷಣದ ನಿರ್ಧಾರಗಳು ಶಿಕ್ಷಣದ ಬದುಕಿಗೆ ಹಾನಿಕಾರಕ. ವಿಷಯಕ್ಕೆ ಅನುಗುಣವಾಗಿ ಆಕರ ಗ್ರಂಥಗಳನ್ನು ಪರಾಮರ್ಶಿಸಬೇಕು. ದಾರ್ಶನಿಕರ ನುಡಿಮುತ್ತುಗಳನ್ನು ಅವಲೋಕಿಸಬೇಕು ಆಗಮಾತ್ರ ತೆಗೆದುಕೊಂಡ ನಿರ್ಧಾರಗಳಿಗೆ ಅರ್ಥ ಸಿಗುತ್ತದೆ. ಆಳವಾದ ಅಧ್ಯಯನ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್ ತಿಳಿಸಿದರು.

ನಗರದ ಕಾಮನಬಾವಿ ಬಡಾವಣೆಯಲ್ಲಿರುವ ಬಾಪೂಜಿ ವಿದ್ಯಾಸಂಸ್ಥೆಯ ಶ್ರೀಮತಿ ಹೇಮಾವತಿ ಕುವೆಂಪು ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ ವಾಕ್ಯದೊಂದಿಗೆ ರಂಗಸೌರಭ ರಂಗೋತ್ಸವ -2024 ನಾಡಗೀತೆ, ರಾಷ್ಟ್ರಗೀತೆ, ರೈತಗೀತೆ ಪ್ರಾಯೋಗಿಕ ತರಬೇತಿ ಕನ್ನಡ ಗೀತಗಾಯನ, ಯೋಗ ತರಬೇತಿ ಮತ್ತು ಕವಿಕಾವ್ಯ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಕನ್ನಡ ಭಾಷೆ ಅನ್ನದ ಭಾಷೆಯಾಗಿದೆ. ಪ್ರಶಿಕ್ಷಣಾರ್ಥಿಗಳು ಸಾಹಿತ್ಯದ ಒಲವನ್ನು ಬೆಳೆಸಿಕೊಳ್ಳಬೇಕು. ನೈಜ ಇತಿಹಾಸವನ್ನು ಅಧ್ಯಯನ ಮಾಡಿ ಪಠ್ಯದಲ್ಲಿ ಅಳವಡಿಸಿಕೊಂಡು ಪಠ್ಯಾಧಾರಿತ ವಿಷಯಗಳ ಬಗ್ಗೆ ಅರಿವನ್ನು ಮೂಡಿಸಿಕೊಳ್ಳಬೇಕು. ಸ್ಪಷ್ಟ ಓದು ಹಾಗೂ ಶುದ್ಧ ಬರವಣಿಗೆಯ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ರೂಪಿಸಬೇಕು ಎಂದರು.

ಚಲನಚಿತ್ರ ಹಾಸ್ಯನಟ ಮೈಸೂರು ರಮಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿತ್ರದುರ್ಗ ಜಿಲ್ಲೆಯು ಡಾ.ರಾಜ್‍ಕುಮಾರ್‍ರವರು ಚಿತ್ರದುರ್ಗದಲ್ಲಿ ಇದ್ದಾಗಲೇ ಚಲನಚಿತ್ರ ಪ್ರವೇಶಕ್ಕೆ ಕರೆಬಂದ ವಿಷಯವನ್ನು ಮೆಲುಕು ಹಾಕಿದರು. ಸಾಹಸಸಿಂಹ ವಿಷ್ನುವರ್ಧನ್, ದತ್ತಣ್ಣ, ಅಶೋಕ ಬಾದರದಿನ್ನಿ ಮುಂತಾದ ಸಿನಿಮಾ ಹಾಗೂ ರಂಗಭೂಮಿ ಕಲಾವಿದರಿಗೆ ಬದುಕನ್ನು ಕಲ್ಪಿಸಿದೆ. ರಂಗಸೌರಭ ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ನನ್ನಂತಹ ಅನೇಕ ಕಲಾವಿದರು, ಸಾಹಿತಿಗಳು, ಚಿಂತಕರು ಭಾಗವಹಿಸಿದ್ದಾರೆ.

ರಂಗಸೌರಭ ಕಲಾ ಸಂಘದ ಅಧ್ಯಕ್ಷ ಡಾ.ಕೆ.ಮೋಹನ್‍ಕುಮಾರ್ ಮಾತನಾಡಿ ಸಂಘವು ಹದಿನೈದು ವರ್ಷಗಳಿಂದ ನಿರಂತರವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ರಾಜ್ಯಾದ್ಯಂತ ರಂಗಭೂಮಿ ತರಬೇತಿ ಕಾರ್ಯಗಾರ, ಶಿಕ್ಷಣದಲ್ಲಿ ರಂಗಕಲೆ ಕಾರ್ಯಕ್ರಮಗಳನ್ನು ನಡೆಸಿದೆ. ಅನೇಕ ಹಿರಿಯ ರಂಗಭೂಮಿ ಕಲಾವಿದರನ್ನು, ಸಾಹಿತಿಗಳನ್ನು ಹಾಗೂ ರಂಗತಂತ್ರಜ್ಞರನ್ನು ಗೌರವಿಸಿದೆ. ಉಪನ್ಯಾಸಕರಾದ ಡಾ.ಪಿ.ರಾಧಮ್ಮ, ಡಾ.ಎಂ.ಎಸ್.ಲಕ್ಷ್ಮೀದೇವಿ, ಟಿ.ತಿಪ್ಪೇರುದ್ರಯ್ಯ, ಬಿ.ಪಾತಲಿಂಗಪ್ಪ, ಬಿ.ಹೇಮಲತ, ಎಂ.ಉಷಾಕಿರಣ, ರಂಗನಟ ಅಮಿತಾನಂದ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು.

ಕಂಡಕ್ಟರ್ ಗಂಗರಾಜು ವಿರಚಿತ ಮೈಸೂರು ರಮಾನಂದ ನಿರ್ದೇಶನದಲ್ಲಿ ಬೆಂಗಳೂರಿನ ಗೆಜ್ಜೆಹೆಜ್ಜೆ ರಂಗತಂಡದವರು ರಂಗಯ್ಯನ ರಾದ್ಧಾಂತ ಹಾಸ್ಯನಾಟಕ ಪ್ರದರ್ಶನಗೊಂಡಿತು. ಶಾಲಾಮಕ್ಕಳಿಗೆ ಸರ್ಕಾರ ನಿಗಧಿಪಡಿಸಿದ ನಾಡಗೀತೆ, ರಾಷ್ಟ್ರಗೀತೆ, ರೈತಗೀತೆ, ಹುಯಿಲುಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ವಿರಚಿತ ಎಲ್ಲಾದರು ಇರು ಎಂತಾದರು ಇರು, ದ.ರಾ.ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ಧಯ್ಯ ಪುರಾಣಿಕ್ ಬರೆದ ಹೊತ್ತಿತೋ ಹೊತ್ತಿತೂ ಕನ್ನಡದ ದೀಪ, ಚನ್ನವೀರ ಕಣವಿಯವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡದ ಧ್ವನಿಮುದ್ರಿತ ಗೀತೆಗಳೊಂದಿಗೆ ಯೋಗಚಿಕಿತ್ಸಕ ಎಂ.ಬಿ.ಮುರುಳಿ ಹಾಗೂ ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ತರಬೇತಿ ನೀಡಿದರು. ಪ್ರಶಿಕ್ಷಣಾರ್ಥಿ ಸಂತೋಷ ಡಿ ಕಲಕಭಂಡಿ ಇವರು ಚಿತ್ರಸಾಹಿತ್ಯ ಕ್ಷೇತ್ರದ ಕಾದಂಬರಿಕಾರ ಡಾ.ಬಿಎಲ್.ವೇಣುರವರ ಕವಿಕಾವ್ಯ ವಾಚನ ಮಾಡಿದರು. ಪ್ರಾಚಾರ್ಯ ಡಾ.ಜಿ.ದಾಸಯ್ಯ ಸ್ವಾಗತಿಸಿದರು. ಉಪನ್ಯಾಸಕಿ ವಂದಿಸಿದರು. ಪ್ರಶಿಕ್ಷಣಾರ್ಥಿಳಾದ ಸೌಮ್ಯ, ಐಶ್ವರ್ಯ, ಪಲ್ಲವಿ ಪಾರ್ತೀಸಿದರು. ಪೂಜಾ ರಜಪೂತ ವಂದಿಸಿದರು. ಆರ್.ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
bengaluruchitradurgaPersonalityS.Sandeepsuddionesuddione newsಅಧ್ಯಯನಎಸ್.ಸಂದೀಪ್ಚಿತ್ರದುರ್ಗಬೆಂಗಳೂರುವ್ಯಕ್ತಿತ್ವಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article