ವಿದ್ಯಾರ್ಥಿಗಳು ದೊಡ್ಡ ಗುರಿಯೊಂದಿಗೆ ದೊಡ್ಡ ಕನಸು ಕಾಣಬೇಕು : ಐ.ಎ.ಎಸ್. ಸಾಧಕಿ ಕುಮಾರಿ ಸೌಭಾಗ್ಯ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಓದಿನಿಂದ ಮಾತ್ರ ಜ್ಞಾನ ವೃದ್ದಿಯಾಗಲಿದೆ ಎಂದು ಐ.ಎ.ಎಸ್. ಸಾಧಕಿ ದಾವಣಗೆರೆಯ ಕುಮಾರಿ ಸೌಭಾಗ್ಯ ಎಸ್.ಬೀಳಗಿ ಮಠ ತಿಳಿಸಿದರು.
ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ರಾಜ್ಯ ಶಾಖೆ ಚಿತ್ರದುರ್ಗ, ಎಸ್ಸಿ. ಎಸ್ಟಿ. ನೌಕರರ ಸಮನ್ವಯ ಸಮಿತಿ, ಸಮತಾ ಸಾಹಿತ್ಯ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಐ.ಎ.ಎಸ್.ನಲ್ಲಿ ದ್ವಿತೀಯ ರ್ಯಾಂಕ್ ಪಡೆದಿರುವ ಸೌಭಾಗ್ಯ ಎಸ್.ಬೀಳಗಿಮಠ್ ಇವರಿಗೆ ಸನ್ಮಾನ, ಮುಂಗಾರು ಕವಿಗೋಷ್ಟಿ ಕಲಾ ಸಂಭ್ರಮ ಮತ್ತು ಆಯ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಒಂದೊಂದು ಶಕ್ತಿಯಿದೆ. ಯಾರಲ್ಲಿಯೂ ಕೀಳರಿಮೆ ಬೇಡ. ಜಾತಿ ಮುಖ್ಯವಲ್ಲ. ಮಾನವೀಯತೆ ದೊಡ್ಡದು. ಜೀವನದಲ್ಲಿ ವಿದ್ಯಾರ್ಥಿಗಳು ದೊಡ್ಡ ಗುರಿಯಿಟ್ಟುಕೊಂಡು ದೊಡ್ಡ ಕನಸು ಕಾಣಬೇಕು. ಐ.ಎ.ಎಸ್. ಐ.ಪಿ.ಎಸ್. ಅಧಿಕಾರಿಯೇ ಆಗಬೇಕೆಂದೇನಿಲ್ಲ. ದೊಡ್ಡ ಉದ್ಯಮಿಗಳಾಬಹುದು, ಕೃಷಿಕರಾಗಿ, ಸ್ವಾವಲಂಭಿಯಾಗಿ ಬದಲು ಸಾಕಷ್ಟು ದಾರಿಗಳಿವೆ. ಶ್ರದ್ದೆಯಿಟ್ಟು ಓದಬೇಕಷ್ಟೆ ಎಂದು ಕರೆ ನೀಡಿದರು,
ಎಂತಹ ಕಷ್ಟವಾದರೂ ಕಲೆ ಸಾಹಿತ್ಯವನ್ನು ಮಾತ್ರ ಕೈಬಿಡಬೇಡಿ ಎಂದರು.
ನೇಸರ ಚಾರಿಟಬಲ್ ಅಧ್ಯಕ್ಷ ನಿವೃತ್ತ ಡೀನ್ ಡಾ.ಹೆಚ್.ಶಿವಣ್ಣ ಸಮಾರಂಭ ಉದ್ಗಾಟಿಸಿ ಮಾತನಾಡುತ್ತ ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್‍ನ ರಾಜ್ಯಾಧ್ಯಕ್ಷ ಪರಶುರಾಮ್‍ಗೊರಪ್ಪರ್ ಪ್ರತಿ ವರ್ಷವೂ ಸಾಹಿತ್ಯ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ, ಕವಿಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ತೆರೆಮರೆಯಲ್ಲಿರುವ ಪ್ರತಿಭಾವಂತರನ್ನು ಹೊರತರುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ವಿದ್ಯಾರ್ಥಿ ದಸೆಯಿಂದಲೂ ಹೋರಾಟದ ಗುಣ ಬೆಳೆಸಿಕೊಂಡಿದ್ದರಿಂದ ಈಗಲೂ ಹೋರಾಟವೆ ನನ್ನ ಬದುಕಾಗಿದೆ. ದಲಿತ ಮುಖಂಡ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಇವರುಗಳ ಜೊತೆಗೂಡಿ ಸಾಕಷ್ಟು ಹೋರಾಟ ಮಾಡಿದ್ದೇನೆ. ವಿಧಿವಶಾತ್ ಇಬ್ಬರು ಹೋರಾಟಗಾರರು ಈಗ ಜೀವಂತವಾಗಿಲ್ಲ ಎಂದು ಸ್ಮರಿಸಿಕೊಂಡರು.
ಕೆಲವು ಐ.ಎ.ಎಸ್.ಅಧಿಕಾರಿಗಳು ದರ್ಪದಿಂದ ಮೆರೆಯುತ್ತಾರೆ. ನೀವು ಜಿಲ್ಲಾಧಿಕಾರಿಯಾದ ಮೇಲೆ ನಿಮ್ಮ ಬಳಿ ಯಾರೆ ಬಂದು ಕಷ್ಟ ಸಮಸ್ಯೆಗಳನ್ನು ಹೇಳಿಕೊಂಡರೆ ಸಮಾಧಾನದಿಂದ ಕೇಳಿ ಪರಿಹರಿಸಿ ಎಂದು ಐ.ಎ.ಎಸ್. ಸಾಧಕಿ ಸೌಭಾಗ್ಯ ಎಸ್.ಬೀಳಗಿಮಠ್‍ರವರಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ರಾಜ್ಯಾಧ್ಯಕ್ಷ ಕೆ.ಪರಶುರಾಮ್ ಗೊರಪ್ಪರ್ ಮಾತನಾಡಿ ಕಲೆ ಕಲಾವಿದರು ಉಳಿಯಬೇಕಾದರೆ ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ಕಲಾವಿದರ ಮಾಶಾಸನ ಹೆಚ್ಚಿಸಿ ಬಡ ಕಲಾವಿದರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನೀಡಬೇಕು. ಕಲಾವಿದರಿಗೆ ಸಾಹಿತಿಗಳಿಗೆ ಪ್ರಯಾಣಿಸಲು ಉಚಿತ ಬಸ್ ಪಾಸ್ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ನಿವೃತ್ತ ಯೋಧ ಕೂನಬೇವಿನ ಓ.ಜಯಣ್ಣ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಹಣ ಗಳಿಸಬೇಕೆಂಬ ಉದ್ದೇಶದಿಂದ ಸೈನಕ್ಕೆ ಸೇರಿಕೊಳ್ಳುತ್ತಾರೆಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ಯೋಧನಾಗುವುದೆಂದರೆ ಸುಲಭವಲ್ಲ ಹಗಲು-ರಾತ್ರಿ ಜೀವದ ಹಂಗು ತೊರೆದು ದೇಶ ಕಾಯಬೇಕು. ಪ್ರತಿ ಮನೆಯಲ್ಲಿಯೂ ಒಬ್ಬೊಬ್ಬ
ಸೈನ್ಯಕ್ಕೆ ಸೇರಿ ಯೋಧನಾಗಿ ದೇಶಭಕ್ತಿ ಮೈಗೂಡಿಸಿಕೊಳ್ಳುವಂತೆ ಹೇಳಿದರು.
ಮಳೆ ನೀರು ಕೊಯ್ಲು ತಜ್ಞ ಎನ್.ಜೆ.ದೇವರಾಜರೆಡ್ಡಿ, ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ಗೌರವಾಧ್ಯಕ್ಷ ಕೆ.ಬಿ.ಕೃಷ್ಣಪ್ಪ, ಗೌರವ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಯಲ್ಲೇಶ್, ಉಪಾಧ್ಯಕ್ಷ ತಂಬೂರಿ ಕೃಷ್ಣಪ್ಪ, ರಾಜ್ಯ ಸಹ ಸಂಚಾಲಕಿ ಶ್ರೀಮತಿ ವೈ.ಉಷಾದೇವಿ, ಸಾಹಿತಿ ಶ್ರೀಮತಿ ಜಯಲಕ್ಷ್ಮಿನಾಯ್ಕ, ಕಿರುತೆರೆ ನಟಿ ಶ್ರೀಮತಿ ಇಂದ್ರಾ ಸುಧಾ, ಶಂಕರ್‍ನಾಗ್ ಅಭಿಮಾನಿಗಳ ಕಲಾ ವೇದಿಕೆ ಅಧ್ಯಕ್ಷ ದಿವುಶಂಕರ್, ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಿತರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಓ.ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಎಚ್.ಶಫೀವುಲ್ಲಾ, ಸಾಹಿತಿ ಕೃಷಿ ಚಿಂತಕ ಶರಣಯ್ಯಸ್ವಾಮಿ ಬೀಳಗಿಮಠ್ ವೇದಿಕೆಯಲ್ಲಿದ್ದರು.