For the best experience, open
https://m.suddione.com
on your mobile browser.
Advertisement

ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು: ಪ್ರೊ.ಬಿ.ಎಸ್.ಮಂಜುನಾಥ್

08:19 PM May 21, 2024 IST | suddionenews
ವಿದ್ಯಾರ್ಥಿಗಳು ಕಲೆ  ಸಾಹಿತ್ಯ  ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು  ಪ್ರೊ ಬಿ ಎಸ್ ಮಂಜುನಾಥ್
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಮೇ.21  :  ಪದವಿ ಶಿಕ್ಷಣ ಕಲಿಕೆಯ ಹಂತದಲ್ಲೆ ಕಲೆ, ಸಾಹಿತ್ಯ ಹಾಗೂ ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಪ್ರೊ.ಬಿ.ಎಸ್.ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Advertisement

ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ಕಲಿಕೆ ಜೊತೆ ಕೌಶಲ್ಯ ಕಾರ‍್ಯಕ್ರಮದಡಿಯಲ್ಲಿ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮಾಧ್ಯಮ ಮತ್ತು ಸಿನಿಮಾ’ ತಯಾರಿಕೆ ಕುರಿತ ತರಬೇತಿ ಕಾರ‍್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಲಿಕೆ ಜೊತೆ ನಾಟಕ, ಚಲನಚಿತ್ರ, ದಾರವಾಹಿ, ಕಿರು ಚಿತ್ರ ನಿರ್ಮಾಣ ಸೇರಿದಂತೆ ವಿವಿಧ ಕೌಶಲ್ಯ ವೃದ್ಧಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಮಾದರಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರೊಫೆಸರ್ ಕೆ.ಚಿತ್ತಯ್ಯ ಮಾತನಾಡಿನಾನು ಸಹ ವಿದ್ಯಾರ್ಥಿ ಆಗಿನಿಂದಲೂ ನೀನಾಸಂ ತರಬೇತಿಗೆ ಹೋಗಲು ಪ್ರಯತ್ನ ಪಡುತ್ತಿದ್ದೇನೆ ಅಲ್ಲಿಂದ ಇಲ್ಲಿವರೆಗೂ ಆಗುತ್ತಿಲ್ಲ ಆ ಸಂದರ್ಭದಲ್ಲಿ ಹೋಗಲಿಕ್ಕೆ ಹಣ ಇರಲಿಲ್ಲ ಈಗ ಸಮಯ ಸಿಗುತ್ತಿಲ್ಲ.
ಆದರೆ ನಿಮಗೀಗ ಇಂತಹ ಸುವರ್ಣಾವಕಾಶ ದೊರೆತು ಬಂದಿದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಪ್ರೊ.ಕೃಷ್ಣಮೂರ್ತಿ, ಮಾತನಾಡಿ ಕಥೆ ಹೇಳುವ ಕಲೆ ಉತ್ಸಾಹ ಮತ್ತು ಸೃಜನಶೀಲತೆಯಿಂದ ಬರುತ್ತದೆ. ಆದರೆ ಚಲನಚಿತ್ರ ತಯಾರಿಕಾ ಕಲೆ ತರಬೇತಿಯಿಂದಲೇ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಮಾಜಶಾಸ್ರ್ತ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಕೆ.ದೇವಪ್ಪ, ಮಾತನಾಡಿ ,ಮನುಷ್ಯ ತನ್ನ ಬದುಕಿನಲ್ಲಿ ರೂಢಿಸಿಕೊಂಡ ಕಲೆಗಳು ಕೆಲವೊಮ್ಮೆ ಅವನ ಜೀವನೋಪಾಯಕ್ಕೂ ನೆರವಾಗುತ್ತವೆ. ಹಾಗಾಗಿ ನಾಟಕ, ಸಿನಿಮಾ ಕಲೆ ಕಲಿಕೆಯಲ್ಲಿ ವಿದ್ಯಾರ್ಥಿಗಳು ನಿರಾಸಕ್ತಿ ತೋರಬಾರದು ಎಂದು ಹೇಳಿದರು.

ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ರಾಜಕುಮಾರ್ ಮಾತನಾಡಿದರು. ಚಲನಚಿತ್ರ ತರಬೇತುದಾರ ದಾವಣಗೆರೆ ಮಹೇಶ್, ಮಂಜುನಾಥ್, ವೆಂಕಟೇಶ್, ಐಕ್ಯೂಎಸಿ ಸಂಚಾಲಕ ಪ್ರೊ.ಎಚ್.ತಿಪ್ಪೇಸ್ವಾಮಿ,  ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಚನ್ನಕೇಶ, ಎ.ಪವನ್‌ಕುಮಾರ್ ಇದ್ದರು.

Tags :
Advertisement