Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಶಿಕ್ಷಣ ಅಗತ್ಯ : ಉಮೇಶ್ ವಿ. ತುಪ್ಪದ

07:48 PM Jun 02, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, (ಜೂ, 2) : ವಿದ್ಯಾರ್ಥಿಗಳ ಮನೋಭೂಮಿಕೆಯನ್ನು ಹದ ಮಾಡಿ ಅದರಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡಗೆ ಗಮನ ಹರಿಸಿ ಪಾಠವನ್ನು ಮಾಡುವಂತಹ ಯಾವುದೇ ಅಧ್ಯಾಪಕ ಅವರ ಮನಸ್ಸಲ್ಲಿ ಸದಾ ಉಳಿಯುತ್ತಾರೆ ಎಂದು ಎಸ್.ಜೆ.ಎಮ್ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಚಾರ್ಯ ಉಮೇಶ್ ವಿ. ತುಪ್ಪದ ಅವರು ಅಭಿಪ್ರಾಯಪಟ್ಟರು.

ಅವರು ನಗರದ ಎಸ್.ಜೆ.ಎಂ. ಪಾಲಿಟೆಕ್ ನಲ್ಲಿ ಮೇ 31ರಂದು ನಿವೃತ್ತಿ ಹೊಂದಿದ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಚನ್ನಕೇಶವ ಅವರಿಗೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಬಿಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

Advertisement

ನಂತರ  ನಿವೃತ್ತ ಪ್ರಾಚಾರ್ಯರುಗಳಾದ ಸಿ.ಜಿ. ರೇವಣಸಿದ್ದಪ್ಪ  ಮತ್ತು ಡಿ.ವಿ .ಮುರುಗೇಶ್ ಅವರುಗಳು ಮಾತನಾಡಿ ಖಡಕ್ ಮಾತು ಮತ್ತು ಹಿಡಿದ ಕೆಲಸವನ್ನು ಮಾಡದೆ ಬಿಡದ ಛಲ ಹೊಂದಿದ್ದವರು ನಮ್ಮ ಚನ್ನಕೇಶವ ಅವರು ಎಂದು ಹೇಳಿದರು. ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಮಮ್ತಾಜ್ ಬೇಗಂ, ನಳಿನಾಕ್ಷಿ, ಮೋಹನ್.ಎಸ್. ಪಿ.ಡಿ.ಧರ್ಮೇಂದ್ರ ಮತ್ತಿತರರು ಮಾತನಾಡಿದರು.

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಚನ್ನಕೇಶವ ಅವರು ನನಗೆ ಮೂರು ದಶಕಗಳ ಕಾಲ ಈ ಸಂಸ್ಥೆಯು ಕರ್ತವ್ಯ ಮಾಡಲು ಅವಕಾಶ ಮಾಡಿಕೊಟ್ಟಿದೆ  ಅದಕ್ಕೆ ನಾನು ಋಣಿ. ಸಹದ್ಯೋಗಿಗಳ ಒಡನಾಟ ಉತ್ತಮ ಸೇವೆ ಸಲ್ಲಿಸಲು ಅವಕಾಶವಾಯಿತು ಎಂದು ಹೇಳಿದರು.

ಚನ್ನಕೇಶವ ಅವರ ಶ್ರೀಮತಿ ಶಶಿಕಲಾ ಎಂ.ಎಸ್ ಅವರು ಸಹ ಮಾತನಾಡಿದರು. ಸಿವಿಲ್ ವಿಭಾಗದಲ್ಲಿ ಸಹ ಬೋಧಕರಾಗಿ ಕರ್ತವ್ಯ ನಿರ್ವಹಿಸಿದ ಎಂ.ಮುರುಗೇಶ್ ಮತ್ತು ದಂಪತಿಯನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎಸ್. ವಿ. ರವಿಶಂಕರ್ ಅವರು ವಹಿಸಿ ಮಾತನಾಡಿದರು. ಸಮಾರಂಭದ ಆರಂಭಕ್ಕೆ ಟಿ .ಎನ್. ಲಿಂಗರಾಜು ಪ್ರಾರ್ಥನೆ ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಬೋಧಕರಾದ ಕೆ. ಸುರೇಶ್ ಸ್ವಾಗತಿಸಿದರು.

Advertisement
Tags :
bengaluruchitradurgacurriculumeducationextra curricular activitiesstudentssuddionesuddione newsUmesh V. Tuppadaಉಮೇಶ್ ವಿ. ತುಪ್ಪದಚಿತ್ರದುರ್ಗಪಠ್ಯಪಠ್ಯೇತರ ಚಟುವಟಿಕೆಗಳುಬೆಂಗಳೂರುವಿದ್ಯಾರ್ಥಿಗಳುಶಿಕ್ಷಣಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article