Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸರ್ಕಾರ ನೀತಿ ನಿರೂಪಣೆಗೆ ಸಾಂಖ್ಯಿಕ ಇಲಾಖೆ ದತ್ತಾಂಶಗಳೇ ಆಧಾರ : ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್

04:05 PM Nov 08, 2024 IST | suddionenews
Advertisement

 

Advertisement

ಚಿತ್ರದುರ್ಗ. ನ.08: ಸರ್ಕಾರದ ನೀತಿ ನಿರೂಪಣೆಗೆ ಸಾಂಖ್ಯಿಕ ಇಲಾಖೆ ದತ್ತಾಂಶಗಳೇ ಆಧಾರವಾಗಿವೆ. ಸಾಂಖ್ಯಿಕ ಇಲಾಖೆ ಸಂಗ್ರಹಿಸುವ ದತ್ತಾಂಶಗಳು ಹೆಚ್ಚಿನ ಮಹತ್ವ ಹೊಂದಿವೆ ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ 2024-25ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಗಳಾದ ಸಕಾಲಿಕ ವರದಿ ಯೋಜನೆ ಮತ್ತು ಬೆಳೆ ಅಂಕಿ-ಅAಶಗಳ ಸುಧಾರಣೆ ಯೋಜನೆಗಳಿಗೆ ಸಂಬAಧಿಸಿದಂತೆ ವಿಭಾಗಮಟ್ಟದ ಪುನರ್‌ಮನನ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

Advertisement

ಸಾರ್ವಜನಿರಿಂದ ಹೆಚ್ಚಿನ ಪ್ರಶಂಸೆಗೆ ಒಳಗಾಗದೆ ಇದ್ದರೂ ಸಹ, ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನವರತ ಕೆಲಸ ಮಾಡುತ್ತಿರುತ್ತಾರೆ. ಸರ್ಕಾರಕ್ಕೆ ಅಗತ್ಯವಾದ ಮೂಲ ದತ್ತಾಂಶಗಳನ್ನು ಮುತುವರ್ಜಿಯಿಂದ ಸಂಗ್ರಹಿಸುತ್ತಾರೆ. ಆದರೆ ಈ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ಯಾವುದೇ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದರೆ ಅದಕ್ಕೆ ಸಾಂಖ್ಯಿಕ ಇಲಾಖೆ ಮೂಲ ದತ್ತಾಂಶಗಳೇ ಆಧಾರವಾಗಿರುತ್ತವೆ ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ತಿಳಿಸಿದರು.

ಜಿಲ್ಲೆ ಸಂಪೂರ್ಣ ಮಾಹಿತಿ ಸಿದ್ದಪಡಿಸಿ, ಅದರ ಚಿತ್ರಣ ನೀಡುವಲ್ಲಿ ಸಾಂಖ್ಯಿಕ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ. ಹಲವಾರು ದತ್ತಾಂಶ ಸಂಗ್ರಹಿಸಲು ಕ್ಷೇತ್ರದಲ್ಲಿ ಸಾಂಖ್ಯಿಕ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಾರೆ. ಈ ವೇಳೆ ಅನೇಕ ತಾಂತ್ರಿಕ ಅಡಚಣೆಗಳು ಎದುರಾಗುತ್ತವೆ. ಕಾರ್ಯಾಗಾರದಲ್ಲಿ ಅಕ್ಕಪಕ್ಕದ 6 ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದು, ಆರೋಗ್ಯಕರ ಚರ್ಚೆ ಮೂಲಕ ಈ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ತಂತ್ರಾAಶ ಆಧಾರಿತ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಬೆಂಗಳೂರಿನ ನಿರ್ದೇಶನಾಲಯದ ಅಧಿಕಾರಿಗಳು ಉಪನ್ಯಾಸದಲ್ಲಿ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ನಿರ್ದೇಶಕ ಚಂದ್ರಶೇಖರ್ ಗುಡಿ ಮಾತನಾಡಿ, ಸಾಂಖ್ಯಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪುನರ್‌ಮನನ ತರಬೇತಿ ಕಾರ್ಯಾಗಾರವನ್ನು ಈಗಾಗಲೇ ಎರಡು ಕಡೆ ಯಶಸ್ವಿಯಾಗಿ ನಡೆಸಲಾಗಿದ್ದು, ವಿಷಯಗಳನ್ನು ತಿಳಿದು, ಸಂದೇಹಗಳನ್ನು ಬಗೆಹರಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃಷಿ-ಅಂಕಿ ಅಂಶಗಳ ಮಾಹಿತಿ, ಬೆಳೆ ಸಮೀಕ್ಷೆ ಸೇರಿದಂತೆ ಮಾಹಿತಿ ಸಂಗ್ರಹಣೆಯ ಕಾರ್ಯದಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಹಾಗಾಗಿ ಮಾಹಿತಿ ಸಂಗ್ರಹಣೆ ಕಾರ್ಯವು ಅತ್ಯಂತ ನಿಖರವಾಗಿರುವುದು ಬಹಳ ಮುಖ್ಯವಾಗಿದೆ ಎಂದರು.

ಕಳೆದ ಬಾರಿ 1.35 ಲಕ್ಷ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಲಾಗಿದ್ದು, ವಿವಿಧ ಕಾರಣಗಳಿಂದಾಗಿ 35 ಸಾವಿರ ಬೆಳೆ ಕಟಾವು ಪ್ರಯೋಗಗಳು ಸಮರ್ಪಕವಾಗಿ ನಡೆದಿಲ್ಲ ಎಂದು ತಿಳಿಸಿದ ಅವರು, ಬೆಳೆ ಕಟಾವು ಪ್ರಯೋಗಗಳನ್ನು ಗಂಭೀರವಾಗಿ ನಡೆಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

 

ಶೇ.100ರಷ್ಟು ಜನನ-ಮರಣ ನೋಂದಣಿ ಆಗಲಿ:
ಪ್ರಸ್ತುತ ಆರೋಗ್ಯ ಇಲಾಖೆ ದತ್ತಾಂಶಗಳ ಪ್ರಕಾರ ಶೇ.100 ರಷ್ಟು ಸಾಂಸ್ಥಿಕ ಹೆರಿಗೆಗಳು ಆಗುತ್ತಿವೆ. ಆದರೂ ಜನನ ನೊಂದಣಿಯಲ್ಲಿ ವಿಳಂಭವಾಗುತ್ತಿವೆ. ಈ ವೇಳೆ ಮನೆಯಲ್ಲಿಯೇ ಹೆರಿಗೆ ಆಗಿವೆ ಎಂದು ನೊಂದಣಿ ಮಾಡಿಸಲಾಗುತ್ತದೆ. ಈ ವೈರುದ್ಯದಿಂದ ಈಗಲೂ ಶೇ.80 ರಷ್ಟು ಜನನ ಮನೆಯಲ್ಲಿಯೇ ಎಂದು ದಂತ್ತಾಂಶದಲ್ಲಿ ಬಿಂಬಿತವಾಗುತ್ತಿದೆ. ಗ್ರಾಮ ಮಟ್ಟದಲ್ಲಿ ಜನನ ಮತ್ತು ಮರಣ ನೊಂದಣಿಯನ್ನು ಸುಲಭಗೊಳಿಸುವ ದೃಷ್ಠಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ-ಮರಣ ನೊಂದಣಿ ಅಧಿಕಾರಿಯನ್ನಾಗಿ ಸರ್ಕಾರ ನೇಮಿಸಿದೆ. ತ್ವರಿತವಾಗಿ ಹಾಗೂ ಶೇ.100 ರಷ್ಟು ಜನನ-ಮರಣ ನೋಂದಣಿಯಾಗಬೇಕು ಎಂದು ನಿರ್ದೇಶಕ ಚಂದ್ರಶೇಖರ್ ಗುಡಿ ಹೇಳಿದರು.

ಇದೇ ಸಂದರ್ಭದಲ್ಲಿ ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ಜನನ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಕೃಷಿ ಅಂಕಿ-ಅಂಶ ಮತ್ತು ಬೆಳೆ ವಿಮಾ ವಿಭಾಗದ ಅಪರ ನಿರ್ದೇಶಕ ಗುರುರಾಜ್ ರಾವ್, ಸಿ.ಎನ್.ಎಲ್ ವಿಭಾಗದ ಅಪರ ನಿರ್ದೇಶಕ ಬಸನಗೌಡ, ಕೃಷಿ ಅಂಕಿ-ಅಂಶ ವಿಭಾಗದ ಜಂಟಿ ನಿರ್ದೇಶಕ ಟಿ.ಶಶಿಧರ್, ಬೆಳೆ ವಿಮಾ ವಿಭಾಗದ ಜಂಟಿ ನಿರ್ದೇಶಕಿ ಲಲಿತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಸಹಾಯಕ ನಿರ್ದೇಶಕರಾದ ಚಂದ್ರಕಲಾ, ಪುಷ್ಪ, ಸುಮಾ ಸೇರಿದಂತೆ ಚಿತ್ರದುರ್ಗ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್ ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿನ ಎಲ್ಲಾ ಸಾಂಖ್ಯಿಕ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

Advertisement
Tags :
bengaluruchitradurgaGovernmentpolicyS. J. SomashekharaStatistics Departmentsuddionesuddione newsZ.P. CEOಆಧಾರಚಿತ್ರದುರ್ಗಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ದತ್ತಾಂಶಬೆಂಗಳೂರುಸರ್ಕಾರಸಾಂಖ್ಯಿಕ ಇಲಾಖೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article