For the best experience, open
https://m.suddione.com
on your mobile browser.
Advertisement

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ : 620 ಅಂಕಗಳೊಂದಿಗೆ ನಾಲ್ವರು ವಿದ್ಯಾರ್ಥಿಗಳು ಪ್ರಥಮ : ಜಿಲ್ಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ....!

06:50 PM May 09, 2024 IST | suddionenews
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ   620 ಅಂಕಗಳೊಂದಿಗೆ ನಾಲ್ವರು ವಿದ್ಯಾರ್ಥಿಗಳು ಪ್ರಥಮ   ಜಿಲ್ಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ
Advertisement

ಚಿತ್ರದುರ್ಗ. ಮೇ.09: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಶೇ.72.85 ಫಲಿತಾಂಶ ಲಭಿಸಿದೆ. ಜಿಲ್ಲೆಯ 14 ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.

Advertisement

ಚಿತ್ರದುರ್ಗ ನಗರದ ವಿದ್ಯಾವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಭಯ್.ಸಿ.ಐ, ಹಿರಿಯೂರಿನ ರಾಷ್ಟೀಯ ಅಕಾಡೆಮಿ ಇಂಗ್ಲೀಷ್ ಶಾಲೆಯ ಹಿರಣ್ಯಮಯೈ.ಎಂ.ಎಸ್, ತನುಶ್ರೀ.ಟಿ. ಮೊಳಕಾಲ್ಮೂರಿನ ಸರ್.ಎಂ.ವಿ ಆಂಗ್ಲ ಮಾಧ್ಯಮ ಶಾಲೆಯ ಅಸರ್ ಮಹೀನ್.ಎಂ 625 ಅಂಕಗಳಿಗೆ 620 ಅಂಕ ಗಳಿಸಿದ್ದಾರೆ.

ಚಿತ್ರದುರ್ಗ ನಗರದ ಡಾನ್ ಬಾಸ್ಕೋ ಶಾಲೆಯ ಭುವನೇಶ್ವರಿ ಜಿ.ಎಸ್. ಹಿರಿಯೂರಿನ ರಾಷ್ಟೀಯ ಅಕಾಡೆಮಿ ಇಂಗ್ಲೀಷ್ ಶಾಲೆಯ ಪೂಜಿತಾ.ಎಸ್, ಶ್ರೀ ಮೋಕ್ಷಗುಂಡ ವಿಶ್ವೇಶ್ವರಯ್ಯ ಶಾಲೆಯ ಎಸ್.ಪ್ರೀತಿ, ಹೊಳಲ್ಕೆರೆಯ ಎಸ್.ಜೆ.ಎಂ.ಇಂಗ್ಲೀಷ್ ಮೀಡಿಯಂ ಶಾಲೆಯ ನಂದನ್.ಸಿ.ಕೆ 625 ಅಂಕಗಳಿಗೆ 618 ಅಂಕ ಗಳಿಸಿದ್ದಾರೆ.

Advertisement

ಚಿತ್ರದುರ್ಗ ನಗರದ ವಿದ್ಯಾ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಅಭಿನವ್.ಕೆ.ಆರ್, ಭರಮಸಾಗರದ ಡಿ.ವಿ.ಎಸ್ ಇಂಗ್ಲೀಷ್ ಮೀಡಯಂ ಶಾಲೆಯ ಭಾವನ.ಹೆಚ್.ಎಂ, ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಅಕಾಡಮಿ ಶಾಲೆಯ ಸೃಜನ್ ಸಾಗರ್ ಆರ್.ಕೆ., ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ನವ್ಯಶ್ರೀ.ಆರ್. ಮೊರಾರ್ಜಿ ದೇಸಾಯಿ ಶಾಲೆಯ ಸಂಜಯ್.ಎಸ್ ಹಾಗೂ ಹಿರಿಯೂರು ನಗರದ ಪ್ರೆಸಿಡೆನ್ಸಿ ಇಂಗ್ಲೀಷ್ ಶಾಲೆಯ ಮನೋಜ್ಞ.ಜಿ.ಪಿ 625 ಅಂಕಗಳಿಗೆ 616 ಅಂಕ ಗಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ 22,275 ವಿದ್ಯಾರ್ಥಿಗಳಲ್ಲಿ 16,227 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.72.85 ಫಲಿತಾಂಶದೊAದಿಗೆ ಚಿತ್ರದುರ್ಗ ಜಿಲ್ಲೆಯು 21ನೇ ಸ್ಥಾನ ಪಡೆದುಕೊಂಡಿದೆ. 11107 ಬಾಲಕರು, 11168 ಬಾಲಕಿಯರು ಸೇರಿದಂತೆ ಒಟ್ಟು 22, 275 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು.

ಈ ಪೈಕಿ 7207 ಬಾಲಕರು, 9020 ಬಾಲಕಿಯರು ಸೇರಿದಂತೆ ಒಟ್ಟು 16,227 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಪಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದು, ಚಿತ್ರದುರ್ಗ ಜಿಲ್ಲೆಯು ಈ ಬಾರಿ ರಾಜ್ಯದ ಜಿಲ್ಲೆಗಳ ಪೈಕಿ 21ನೇ ಸ್ಥಾನ ಪಡೆದಿದೆ.

ಚಳ್ಳಕೆರೆ ತಾಲ್ಲೂಕಿನಲ್ಲಿ 1753 ಬಾಲಕರು, 1932 ಬಾಲಕಿಯರು ಸೇರಿದಂತೆ ಒಟ್ಟು 3685 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 1830 ಬಾಲಕರು, 2349 ಬಾಲಕಿಯರು ಸೇರಿದಂತೆ ಒಟ್ಟು 4179 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಿರಿಯೂರು ತಾಲ್ಲೂಕಿನಲ್ಲಿ 1140 ಬಾಲಕರು, 1496 ಬಾಲಕಿಯರು ಸೇರಿದಂತೆ ಒಟ್ಟು 2636 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 900 ಬಾಲಕರು, 1174 ಬಾಲಕಿಯರು ಸೇರಿದಂತೆ ಒಟ್ಟು 2074 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹೊಸದುರ್ಗ ತಾಲ್ಲೂಕಿನಲ್ಲಿ 917 ಬಾಲಕರು, 1231 ಬಾಲಕಿಯರು ಸೇರಿದಂತೆ ಒಟ್ಟು 2148 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 667 ಬಾಲಕರು, 838 ಬಾಲಕಿಯರು ಸೇರಿದಂತೆ 1505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಹೊಳಲ್ಕೆರೆ ಫಸ್ಟ್: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಹೊಳಲ್ಕೆರೆ ತಾಲ್ಲೂಕು ಶೇ.81.21 ಫಲಿತಾಂಶ ಪಡೆಯುವ ಮೂಲಕ ಮೊದಲ ಸ್ಥಾನಗಳಿಸಿದೆ. ಉಳಿದಂತೆ ಚಿತ್ರದುರ್ಗ ಶೇ.68.27, ಹಿರಿಯೂರು-75.04, ಹೊಸದುರ್ಗ-70.06, ಮೊಳಕಾಲ್ಮುರು ತಾಲ್ಲೂಕು ಶೇ.71.91ರಷ್ಟು ಫಲಿತಾಂಶ ಪಡೆದಿದೆ.

ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ : ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ಮೇಲುಗೈ ಸಾಧಿಸಿದ್ದಾರೆ. ಒಟ್ಟು 15927 ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಈ ಪೈಕಿ 11900 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.74.71 ರಷ್ಟು ಉತ್ತೀರ್ಣತೆಯ ಸಾಧನೆ ಮೆರೆದಿದ್ದಾರೆ.
ನಗರ ಪ್ರದೇಶದಲ್ಲಿ 6348 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, 4327 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.68.16 ರಷ್ಟು ಸಾಧನೆ ತೋರಿದ್ದಾರೆ.

ಜಿಲ್ಲೆಯ 157 ಸರ್ಕಾರಿ ಶಾಲೆಯ 8377 ವಿದ್ಯಾರ್ಥಿಗಳ ಪೈಕಿ 6174 ವಿದ್ಯಾರ್ಥಿಗಳು, 180 ಅನುದಾನಿತ ಶಾಲೆಗಳ 8860 ವಿದ್ಯಾರ್ಥಿಗಳ ಪೈಕಿ 5866 ವಿದ್ಯಾರ್ಥಿಗಳು, 137 ಅನುದಾನರಹಿತ ಶಾಲೆಗಳ 5038 ವಿದ್ಯಾರ್ಥಿಗಳ ಪೈಕಿ 4187 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ನಾಸಿರುದ್ದೀನ್ ತಿಳಿಸಿದ್ದಾರೆ.

Tags :
Advertisement