ಶ್ರೀ ಗುರು ತಿಪ್ಪೇರುದ್ರಸ್ವಾಮಿ ರತೋತ್ಸವ | ಚಿತ್ರದುರ್ಗದಲ್ಲಿ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ಹಾಗೂ ಅನ್ನ ಸಂತರ್ಪಣೆ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಮಾ. 26 : ನಗರದ ಕೆಳಗೋಟೆಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಟ್ರಸ್ಟ್ ವತಿಯಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರತೋತ್ಸವ ಪ್ರಯುಕ್ತ ಸ್ವಾಮಿಗೆ ಪೂಜಾ ಮಹೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಸೋಮವಾರ ಗಂಗಾಪೂಜೆ, ಧ್ವಜಾರೋಹಣ ಕಾರ್ಯಕ್ರಮ ನಡೆದಿದ್ದು, ರಾತ್ರಿ ಭಕ್ತರಿಂದ ಸ್ವಾಮಿಯ ಭಜನಾ ಕಾರ್ಯಕ್ರಮ ನಡೆಸಲಾಯಿತು. ಇಂದು ಬೆಳಿಗ್ಗೆ ಸ್ವಾಮಿಗೆ ರುದ್ರಾಭೀಷೇಕ, ನಡೆಸಿದ್ದು ಸ್ವಾಮಿಯ ಪ್ರತಿಮೆಗೆ ವಿವಿಧ ರೀತಿಯ ಹೂಗಳ ಅಲಂಕಾರ ಮಾಡಿದ್ದು, ಮಧ್ಯಾಹ್ನ ಸ್ವಾಮಿಯ ಪಲ್ಲಕ್ಕಿ ಉತ್ಸವನ್ನು ನಡೆಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಗರದ ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ವಹಿಸಿದ್ದು, ಕೆಳಗೋಟೆಯ ದೇವಾಲಯಕ್ಕೆ ಆಗಮಿಸುವುದರ ಮೂಲಕ ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಪೋಲಿಸ್ ತರಬೇತಿ ರಕ್ಷಣಾಧಿಕಾರಿಗಳಾದ ಪಾಪಣ್ಣ, ಹೊಂಡ ಷೊ ರೂಂನ ಮಾಲಿಕರಾದ ವಿಶ್ವನಾಥ್, ಕಬೀರಾನಂದಾಶ್ರಮದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್, ನಾಗರಾಜ್ ಸಂಗಂ, ಮಂಜುನಾಥ್ ಗುಪ್ತ, ಪ್ರವೀಣ್, ತಿಪ್ಪೇಸ್ವಾಮಿ, ನಿರಂಜನ, ಜ್ಞಾನಮೂರ್ತಿ, ರಾಮಣ್ಣ, ಸೇರಿದಂತೆ ಭಕ್ತ ವೃಂದ ಭಾಗವಹಿಸಿದ್ದರು.