Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಇಂದಿನಿಂದ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ಮಿಂಚೇರಿ ಮಹೋತ್ಸವ : ಮಧ್ಯ ಕರ್ನಾಟಕದ ಹೆಮ್ಮೆಯ ಹಬ್ಬ  : ಮಾದಾರ ಚನ್ನಯ್ಯ ಸ್ವಾಮೀಜಿ

03:01 PM Dec 23, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 23 :  ಬುಡಕಟ್ಟು ಜನಾಂಗದ ಜನಕ, ಗೋರಕ್ಷಕ, ದಾಸರ ದಂಡಿನ ಒಡೆಯ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ಸಾಲು ಎತ್ತಿನ ಗಾಡಿಗಳ 2023ರ ಮಿಂಚೇರಿ ಮಹೋತ್ಸವಕ್ಕೆ ಇಂದು ನಗರದ ತುರುವನೂರು ರಸ್ತೆಯಲ್ಲಿನ ವೆಂಕಟರಮಣ ದೇವಾಲಯದ ಬಳಿ ಮಠಾಧೀಶರು, ಸಮಾಜದ ಮುಖಂಡರು ಪುಷ್ಟ ವೃಷ್ಟಿಯನ್ನು ಮಾಡುವುದರ ಮೂಲಕ ಸ್ವಾಗತ ಮಾಡಿದರು.

Advertisement

ಡಿಸೆಂಬರ್. 23ರ ಇಂದಿನಿಂದ ಪ್ರಾರಂಭವಾದ  2023ರ ಮಿಂಚೇರಿ ಮಹೋತ್ಸವ ಡಿ.28ರವರೆಗೆ ನಡೆಯಲಿದೆ. ಹಲವಾರು ವರ್ಷಗಳಿಂದ ಈ ಮಿಂಚೇರಿ ಉತ್ಸವವೂ ನಡೆಯುತ್ತಾ ಬಂದಿದೆ ಇದು ಬುಡಕಟ್ಟು ಜನಾಂಗದ ಸಂಸ್ಕøತಿಯಾಗಿದೆ. ಇಂದು ಬಚ್ಚಬೋರಯ್ಯಹಟ್ಟಿಯಿಂದ ನಿರ್ಗಮಿಸಿ, ಕಕ್ಕಲು ಬೆಂಚಿಲ್ಲಿ ಪೂಜೆಯನ್ನು ಸಲ್ಲಿಸಿ ಸಂಜೆ 7 ಗಂಟೆಗೆ ಕ್ಯಾಸಪುರದ ಬಯಲಿನಲ್ಲಿ ಬೀಡು ಬೀಡಲಾಗುವುದು.

ಡಿಸೆಂಬರ್.24 ರಂದು ಯಾತ್ರೆ ಮುಂದುವರೆದು ಮಧ್ಯಾಹ್ನ 12ಕ್ಕೆ ಸಿರಿಗೆರೆ ಡಿ.ಮದಕರಿಪುರ ವರತಿನಾಯಕ ಕರೆಯ ದಂಡೆಯಲ್ಲಿ ವಿಶ್ರಾಂತಿ ಪಡೆದು, ಅಲ್ಲಿಂದ ಮಿಚೇರಿಗೆ ಪಯಣ ಸಂಜೆ 5 ಗಂಟೆಗೆ ಸ್ವಾಮಿಯ ಮೀಸಲು ಹಾಲಿನ ಕಂಬಿಯ ಪೂಜೆ ನಡೆಯಲಿದೆ.

ಡಿಸೆಂಬರ್.25 ರಂದು ಬೆಳಿಗ್ಗೆ 5 ಕ್ಕೆ ಹುಲಿರಾಯನ ಮತ್ತು ನಾಯಕರ ಸಮಾದಿಗೆ ಪೂಜೆ, ಮದ್ಯಾಹ್ನ 2ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಬಸವಂತರಿಗೆ ಹಾಗೂ ಚೌಕು ಮಣಿವು ಕಾರ್ಯಕ್ರಮ, ಸಂಜೆ 4ಕ್ಕೆ ಕಣಿವೆ ಮಾರಮ್ಮ ಮಲ್ಲಿಯಮ್ಮ ಹಾಗೂ ಕೊಲ್ಲಪುರದಮ್ಮನವರ ಗಂಗಾಪೂಜೆ, .

ಡಿಸೆಂಬರ್.26ರಂದು ಬೆಳಿಗ್ಗೆ 7ಕ್ಕೆ ಭಿಕ್ಷೆ ಸ್ವೀಕಾರ, 11ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಪ್ರಸಾದ ಸ್ವೀಕಾರ, ಮದ್ಯಾಹ್ನ 2ಕ್ಕೆ ಮೀಚೇರಿಯಿಂದ ಸುಕ್ಷೇತ್ರದಿಂದ ನಿರ್ಗಮನ, ರಾತ್ರಿ 7ಕ್ಕೆ ಕಡ್ಲೇಗುದ್ದು ಬಿಳಿಯ ಸಿದ್ದರ ಗುಂಡಿಗೆ ಆಗಮನ

ಡಿಸೆಂಬರ್. 27 ರಂದು ಕ್ಯಾಸಾಪುರದ ಬಳಿಯ ಜನಿಗಿ ಹಳ್ಳಕ್ಕೆ ಗಂಗಾಪೂಜೆ, ಮಧ್ಯಾಹ್ನ 2ಕ್ಕೆ ಚಿತ್ರದುರ್ಗಕ್ಕೆ ಮಿಂಚೇರಿ ಯಾತ್ರೆಯ ಆಗಮನ ರಾಜಾ ಬೀದಿಗಳಲ್ಲಿ ಮೆರವಣಿಗೆ, ಸಂಜೆ ಕಕ್ಕಲು ಬೆಂಚಿಯಲ್ಲಿ ಬೀಡು ಬಿಡಲಾಗುವುದು. ಡಿ.28ರಂದು ಸಂಜೆ 7ಕ್ಕೆ ಗ್ರಾಮದ ಹೊಸ್ತಿಲು ಪೂಜೆಯೊಂದಿಗೆ ಸ್ವಸ್ಥಾನಕ್ಕೆ ಮರಳಲಾಗುವುದು, ಗುರು-ಹಿರಿಯರೊಂದಿಗೆ ದೇವರು ಮುತ್ತಯ್ಯಗಳ ಬೀಳ್ಕೂಡುಗೆ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು,ಗಾದ್ರಿಪಾಲ ನಾಯಕರು ನಮ್ಮ ಬುಡಕಟ್ಟು ಸಂಸ್ಕøತಿಯ ನಾಯಕರಾಗಿದ್ದಾರೆ. ಅವರ ಸ್ಮರಣೆಯನ್ನು ಪ್ರತಿ ಐದು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಇದು ಈ ಭಾಗದ ಸಾಂಸ್ಕøತಿಕ ಹಬ್ಬವಾಗಿ ಭಾವಿಸಿಕೊಂಡು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ನೂರಾರು ಜನತೆ ಸಹಕಾರವನ್ನು ನೀಡಿದ್ದಾರೆ. ಇದರಲ್ಲಿ ಎಲ್ಲರು ಭಾಗವಹಿಸಿ ಸಂಭ್ರಮ ಪಡಲಾಗುತ್ತಿದೆ ಇದು ಮಧ್ಯ ಕರ್ನಾಟಕದ ಹೆಮ್ಮೆಯ ಹಬ್ಬವಾಗಿದೆ ಎಂದರು.

ಡಿ. 27ರಂದು ಚಿತ್ರದುರ್ಗವನ್ನು ಪ್ರವೇಶ ಮಾಡಲಿರುವ ಮಿಂಚೇರಿ ಯಾತ್ರೆಯಲ್ಲಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು, ಬಸವಪ್ರಭು ಶ್ರೀಗಳು, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಯಾದಾವನಂದ ಶ್ರೀಗಳು, ಶಿವಲಿಂಗಾನಂದ ಶ್ರೀಗಳು, ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಕೇತೇಶ್ವರ ಶ್ರೀಗಳು, ಬಸವ ಮಾಚಿದೇವ ಶ್ರೀಗಳು, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಬಿ.ನಾಗೇಂದ್ರ, ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮಾಜಿ ಶಾಸಕರುಗಳು, ಅಧಿಕಾರಿಗಳು, ಭಾಗವಹಿಸಲಿದ್ದಾರೆ.

ಮೆರವಣಿಗೆಯಲ್ಲಿ ನೂರಾರು ಎತ್ತಿನಗಾಡಿಗಳು ಟ್ರಾಕ್ಟರ್ ಹಾಗೂ ಟಾಟಾ ಎಸಿಗಳಲ್ಲಿ ಜನತೆ ದಿನ ನಿತ್ಯದ ಬಳಕೆಯ ಸಾಮಾನುಗಳೊಂದಿಗೆ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿ ಎತ್ತುಗಳಿಗೆ ಶೃಂಗಾರವನ್ನು ಮಾಡುವುದರ ಮೂಲಕ ಅತಿ ಉತ್ಸಾಹದಿಂದ ಗಾಡಿಗಳನ್ನು ಓಡಿಸಿಕೊಂಡು ಹೋಗುತ್ತಿದ್ದು ಮತ್ತೇ ಕೆಲವರು ತಮ್ಮ ಮಕ್ಕಳ, ಹಿರಿಯರ ಭಾವಚಿತ್ರಗಳನ್ನು ಹಾಕಿ ಫ್ಲಕ್ಸ್‍ಗಳನ್ನು ಮಾಡಿಸಿ ಹಾಕಿದ್ದರು.

ಈ ಯಾತ್ರೆಯೂ ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಪುರ, ಕಡ್ಲೇಗುದ್ದು, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ದಡ್ಡಿಗೆನಹಾಳ್, ಮದಕರಿಪುರ, ಮೀಂಚೇರಿಪುರ ತಲುಪಲಿದೆ.
ಗೋಷ್ಟಿಯಲ್ಲಿ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷರಾದ ಹೆಚ್.ಜೆ.ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ, ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್, ಸಮಾಜದ ಮುಖಂಡರಾದ ಗೋಪಾಲಸ್ವಾಮಿ ನಾಯಕ್, ಅಂಜನಪ್ಪ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಬೋರಯ್ಯ, ನೆಲಗೆತನ ಬೋರಯ್ಯ, ಬಿ.ಬೋರಯ್ಯ, ಸಣ್ಣ ಬೋರಯ್ಯ, ರಮೇಶ್, ಬಸವರಾಜು, ಪಾಲಯ್ಯ, ಪ್ರಹ್ಲಾದ್, ಪಾಪಣ್ಣ, ಮೂರ್ತಿ, ದೀಪು, ಕಾಟಹಳ್ಳಿ ಕರಿಯಣ್ಣ, ಸಣ್ಣ ಹನುಮಂತಸ್ವಾಮಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Tags :
chitradurgaMadara Channaiah SwamijiMincheri MahotsavaSri Gadripalanayak SwamiThe Pride of Central Karnatakaಚಿತ್ರದುರ್ಗಮಧ್ಯ ಕರ್ನಾಟಕಮಾದಾರ ಚನ್ನಯ್ಯ ಸ್ವಾಮೀಜಿಮಿಂಚೇರಿ ಮಹೋತ್ಸವಶ್ರೀ ಗಾದ್ರಿಪಾಲನಾಯಕ ಸ್ವಾಮಿಹೆಮ್ಮೆಯ ಹಬ್ಬ
Advertisement
Next Article