For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಪ್ರವೇಶಿಸಿದ ಶ್ರೀ ಭಗೀರಥ ಭಾರತ ಜನ ಕಲ್ಯಾಣ ರಥ ಯಾತ್ರೆ : ಭವ್ಯ ಸ್ವಾಗತ ಕೋರಿದ ಉಪ್ಪಾರ ಸಮಾಜ

09:00 PM Dec 17, 2023 IST | suddionenews
ಚಿತ್ರದುರ್ಗ ಪ್ರವೇಶಿಸಿದ ಶ್ರೀ ಭಗೀರಥ ಭಾರತ ಜನ ಕಲ್ಯಾಣ ರಥ ಯಾತ್ರೆ   ಭವ್ಯ ಸ್ವಾಗತ ಕೋರಿದ ಉಪ್ಪಾರ ಸಮಾಜ
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ. ಡಿ.17 : ನಗರಕ್ಕೆ ಇಂದು ಆಗಮಿಸಿದ ಶ್ರೀ ಭಗೀರಥ ಭಾರತ ಜನ ಕಲ್ಯಾಣ ರಥ ಯಾತ್ರೆಗೆ ಉಪ್ಪಾರ ಸಮಾಜದವತಿಯಿಂದ ಭವ್ಯವಾದ ಸ್ವಾಗತವನ್ನು ಕೋರಲಾಯಿತು.

ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಪಕ್ಕದ ಯೂನಿಯನ್ ಪಾರ್ಕನಿಂದ ಪ್ರಾರಂಭವಾದ ರಥಯಾತ್ರೆ  ಸಂತೇಪೇಟೆ, ಬಿ.ಡಿ.ರಸ್ತೆ, ಕಿತ್ತೂರುರಾಣಿ ಚನ್ನಮ್ಮ ವೃತ್ತ, ಮಹಾವೀರ ವೃತ್ತ, ವಾಸವಿ ವೃತ್ತ, ಗಾಯತ್ರಿ ವೃತ್ತದ ಮೂಲಕ ಉಮಾಪತಿ ಕಲ್ಯಾಣ ಮಂಟಪ ತಲುಪಿತು. ಈ ಸಮಯದಲ್ಲಿ ವಿವಿಧ ಜಾನಪದ ಕಲಾಮೇಳಗಳು, ರಥಯಾತ್ರೆಯನ್ನು ಸ್ವಾಗತಿಸಿದವು.

Advertisement

ಹರೀಶ್ ಮೆಹತೊ ಚೌಹಾಣ್ ಮತ್ತು ತಂಡದ ನೇತೃತ್ವದಲ್ಲಿ ಈ ಯಾತ್ರೆ ಪ್ರಾರಂಭವಾಗಿದ್ದು, ಈಗಾಗಲೇ ನೆರೆ ರಾಜ್ಯಗಳಾದ ಆಂಧ್ರಪ್ರದೇಶ್, ತೆಲಂಗಾಣ, ಮಹಾರಾಷ್ಟ್ರ,ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಚಾರ ಮಾಡಿ ಡಿ.9 ರಂದು ಕರ್ನಾಟಕ ರಾಜ್ಯವನ್ನು ಪ್ರವೇಶ ಮಾಡಿದೆ ಅಲ್ಲಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚಾರ ಮಾಡಿ ಇಂದು ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಿದೆ. 2024ರ ಫೆಬ್ರವರಿ ಮಾಹೆಯಲ್ಲಿ ನವದೆಹಲಿಯ ರಾಮಲೀಲಾ ಮೈದಾನವನ್ನು ತಲುಪಲಿದೆ.

ರಥಯಾತ್ರೆಯಲ್ಲಿ ಉಪ್ಪಾರ ಸಮುದಾಯದ ಮಹಿಳೆಯರು ತಲೆಯ ಮೇಲೆ ಕುಂಭವನ್ನು ಹೊತ್ತು ರಥಯಾತ್ರೆಯನ್ನು ಸ್ವಾಗತಿಸಿದರು. ಯುವ ಜನತೆ ಕೂರಳಿಗೆ ಜೈ ಉಪ್ಪಾರ ಎಂಬ ನಾಮಫಲಕದ ಶಾಲನ್ನು ಹಾಕಿಕೊಂಡು ಜೈ ಉಪ್ಪಾರ, ಜೈ ಜೈ ಉಪ್ಪಾರ, ಡಾ.ಪುರೋಷತ್ತಮಾನಂದ ಶ್ರೀಗಳಿಗೆ ಜೈಕಾರವನ್ನು ಹಾಕುತ್ತಾ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

ಈ ರಥಯಾತ್ರೆಯ ಮೆರವಣಿಗೆಯ ನೇತೃತ್ವವನ್ನು ಹೊಸದುರ್ಗ ತಾಲ್ಲೂಕಿನ ಬಿ.ವಿ.ನಗರದ ಭಗೀರಥ ಪೀಠದ ಶ್ರೀ ಡಾ.ಪುರೋಷತ್ತಮಾನಂದ ಶ್ರೀಗಳು ವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಭಗೀರಥ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರಾದ ಎನ್.ವಿರೇಶ್, ಗೌರವಾಧ್ಯಕ್ಷರಾದ ಎಸ್.ನಾಗರಾಜ್ ಪ್ರದಾನ ಕಾರ್ಯದರ್ಶಿ ಎಲ್.ಮಹೇಶ್, ಮಾಜಿ ಅಧ್ಯಕ್ಷರಾದ ಆರ್, ಮೂರ್ತಿ, ಖಂಜಾಚಿ ಹೆಚ್.ಅಂಜಪ್ಪ, ಚಿತ್ರದುರ್ಗ ತಾ.ಅಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಬಾಯ್ಲರ್ ರವಿ, ಸಲಹೆಗಾರರಾದ ಬಸವರಾಜು ಮತ್ತು ವೆಂಕಟೇಶ್ ಹಾಜರಿದ್ದರು.

Tags :
Advertisement