For the best experience, open
https://m.suddione.com
on your mobile browser.
Advertisement

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತ ಮಹೋತ್ಸವ | ಚಿತ್ರದುರ್ಗ ಭಾವೈಕ್ಯತೆಯ ಊರು, ಶಾಂತಿಯ ತೋಟ : ಎಂ.ಕೆ.ತಾಜ್‍ಪೀರ್

05:19 PM Jul 07, 2024 IST | suddionenews
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತ ಮಹೋತ್ಸವ   ಚಿತ್ರದುರ್ಗ ಭಾವೈಕ್ಯತೆಯ ಊರು  ಶಾಂತಿಯ ತೋಟ   ಎಂ ಕೆ ತಾಜ್‍ಪೀರ್
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 7 :  ಚಿತ್ರದುರ್ಗ ಎಂದರೆ ಭಾವ್ಯಕತ್ಯೆಯ ಶಕ್ತಿಯನ್ನು ಹೊಂದಿದ ಊರಾಗಿದೆ ಇಲ್ಲಿ ಮಠಗಳು, ಮಸೀದಿಗಳು, ಚರ್ಚಗಳು, ದರ್ಗಾಗಳನ್ನು ಹೊಂದಿದ ಊರಾಗಿದೆ ಎಂದು ಡಿಸಿಸಿ ಅಧ್ಯಕ್ಷರು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಜು. 5 ರಿಂದ 11ವರೆಗೆ ಹಮ್ಮಿಕೊಂಡಿದ್ದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವದ ಶನಿವಾರ ರಾತ್ರಿಯ ಪ್ರಥಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಿತ್ರದುರ್ಗ ಭಾರತ ದೇಶದ ಶಾಂತಿಯ ತೋಟವಾಗಿದೆ. ಎಲ್ಲಾ ಜಾತಿ, ಧರ್ಮ, ವಿವಿಧ ಸಮಾಜದವರು ಕೂಡಿ ಬಾಳುತ್ತಿದ್ದಾರೆ. ಇಲ್ಲಿ ಜಗ ಜನನಿ ಭಾರತವಾಗಿದೆ. ಪ್ರಪಂಚದಲ್ಲಿ ಇರುವ ವಿವಿಧ ರೀತಿಯ ಧರ್ಮಗಳು ಈಗ ಭಾರತದ ಕಡೆಗೆ ಬರುತ್ತಿವೆ. ಇಲ್ಲಿವ ವಾತಾವರಣ ಕಂಡು ಇಲ್ಲಿಯೇ ನೆಲೆ ಊರಿ ಶಾಂತಿಯನ್ನು ಪಡೆಯುತ್ತಿದ್ದಾರೆ ಎಂದರು.

ಭಾರತ ದೇಶ ಸೂಫಿ, ಸಂತ, ಶರಣ, ಸನ್ಯಾಸಗಳ ಬೀಡಾಗಿದೆ. ಚಿತ್ರದುರ್ಗದಲ್ಲಿ ಬೇರೆ ಬೇರೆ ಧರ್ಮದವರು ಜಾತಿಯವರು ವಾಸ ಮಾಡುತ್ತಿದ್ದು, ಇಲ್ಲಿನ ಜನತೆ ಸಹಬಾಳ್ವೆಯಿಂದ ಬದುಕನ್ನು ನಡೆಸುವುದರ ಮೂಲಕ ದೇಶಕ್ಕೆ ಸಂದೇಶವನ್ನು ನೀಡುತ್ತಿದ್ದಾರೆ. ಇಲ್ಲಿ ಮಠಗಳು, ಮಸೀದಿಗಳು, ಚರ್ಚುಗಳು, ದರ್ಗಾಗಳು ಇವೆ. ಇಲ್ಲಿ ಎಲ್ಲಾ ಜನತೆ ಸಹಬಾಳ್ವೆಯಿಂದ ಬದುಕನ್ನು ನಡೆಸುವುದರ ಮೂಲಕ ಶಾಂತಿಯ ನೆಲೆ ಬೀಡಾಗಿದ್ದು ಭಾವೈಕತ್ಯೆ ಶಕ್ತಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ದೇವಾಲಯದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಜನಾಂಗದವರನ್ನು ಕರೆಯಿಸುವುದರ ಮೂಲಕ ಭಾವೈಕತೆಯನ್ನು ಸಮಿತಿಯವರು ಮರೆದಿದ್ದಾರೆ ಎಂದು ತಿಳಿಸಿದರು.

ಶ್ರೀ ಅಯ್ಯಪ್ಪ ಸ್ವಾಮಿ ಸಮಿತಿಯವರು ನಗರದಲ್ಲಿನ ವಿವಿಧ ಪಾರ್ಕ್ ಗಳಲ್ಲಿ ತೆಂಗಿನ ಸಸಿಗಳನ್ನು ನೆಡುವ ಕಾರ್ಯವನ್ನು ಮಾಡುವುದರ ಮೂಲಕ ಕಲ್ಪವೃಕ್ಷವನ್ನು ಬೇರೆಯವರಿಗೂ ನೀಡಬೇಕಿದೆ, ಬೇರೆ ಬೇರೆ ಸಸಿಗಳನ್ನು ಅರಣ್ಯ ಇಲಾಖೆಯವರು ಹಾಕುತ್ತಾರೆ ನಿಮ್ಮ ಸಮಿತಿಯಿಂದ ಕಲ್ಪವೃಕ್ಷ ಸಸಿಗಳನ್ನು ನೆಡುವಂತೆ ಮನವಿ ಮಾಡಿದ್ದು, ಇದು 25ನೇ ವರ್ಷದ ಸವಿನೆನಪಿಗಾಗಿ ಈ ಕಾರ್ಯವನ್ನು ಮಾಡಬೇಕು ಎಂದ ಅವರು, ಇದಕ್ಕೆ ನಗರಸಭೆ, ನಗರಾಭಿವೃದ್ದಿ ಪ್ರಾಧಿಕಾರದಿಂದ ಸಹಾಯವನ್ನು ಮಾಡುವುದಾಗಿ ಭರವಸೆಯನ್ನು ತಾಜ್‍ಪೀರ್ ನೀಡಿದರು.

ನ್ಯಾಯವಾದಿ ಫಾತ್ಯರಾಜನ್ ಮಾತನಾಡಿ, ಸಮಿತಿಯವರು ಈ ಕಾರ್ಯಕ್ರಮದಲ್ಲಿ ಎಲ್ಲಾ ಜನಾಂಗದವರನ್ನು ಕರೆಯಿಸುವುದರ ಮೂಲಕ ಉತ್ತಮವಾದ ಕಾರ್ಯಕ್ರಮವನ್ನು ಮಾಡಿದ್ದಾರೆ. ದೇವರ ಕಾರ್ಯಕ್ರಮವನ್ನು ಮಾಡುವಾಗ ಜಾತಿಯನ್ನು ನೋಡಬಾರದು, ಈ ದೇವಾಲಯ ನಿರ್ಮಾಣ ಮಾಡಲು ಡಾ.ರಾಜಕುಮಾರ್ ರವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಹಣವನ್ನು ಸಂಗ್ರಹ ಮಾಡಲಾಯಿತು. ಅಂದು ಹಾಕಿದ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ. ಇಲ್ಲಿ ಉತ್ತಮವಾದ ದೇವಾಲಯ ನಿರ್ಮಾಣ ಮಾಡಲಾಗಿದೆ. ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇವಾಲಯ ದೇಶದಲ್ಲಿಯೇ ಎರಡನೇ ದೇವಾಲಯವಾಗಿದೆ ಎಂದರು.

ಬಸವೇಶ್ವರ ಟ್ರೇಡಿಂಗ್ ಕಂಪನಿಯ ಹೆಚ್.ಕೋಟ್ರೇಶ್ ಶ್ರೇಷ್ಟಿ ಮಾತನಾಡಿ, ಇಂದಿನ  ದಿನಮಾನದಲ್ಲಿ ಜಾತಿಯ ಹಾವಳಿ ಹೆಚ್ಚಾಗಿದೆ. ಇದನ್ನು ತೆಗೆದುಹಾಕಬೇಕಿದೆ ಮನೆಯಲ್ಲಿ ಇದ್ದಾಗ ಮಾತ್ರ ಜಾತಿಯಿರಬೇಕು ಹೂರಗಡೆ ಬಂದಾಗ ಜಾತಿ ಇರಬಾರದು ಇಲ್ಲ ಗಂಡು-ಹೆಣ್ಣು ಎಂದು ಮಾತ್ರ ಇರಬೇಕು, ಇತ್ತಿಚೆಗೆ ಜಾತಿಯ ಹಾವಳಿ ಹೆಚ್ಚಾಗಿದೆ. ಎಲ್ಲದರಲಗ್ಲೂ ಸಹಾ ಜಾತಿಯನ್ನು ಹುಡುಕುತ್ತಿದ್ದಾರೆ. ಜಾತಿಯನ್ನು ತೆಗೆದು ನಾವುಗಳು ಹಿಂದೂ ಎಂದು ಮಾತ್ರ ಹೇಳಬೇಕಿದೆ ಎಂದರು.

ಕರುನಾಡ ವಿಜಯಸೇನೆಯ ಅಧ್ಯಕ್ಷರಾದ ಕೆ.ಟಿ.ಶಿವಕುಮಾರ್ ಮಾತನಾಡಿ ಈ ದೇವಾಲಯ ಭಕ್ತಾಧಿಗಳಿಂದ ನಡೆಯುತ್ತಿದೆ, ದಾನಿಗಳಿಂದ ಪ್ರತಿ ದಿನ ಅನ್ನದಾನ ಮಾಡುವುದರ ಮೂಲಕ ಅಯ್ಯಪ್ಪಸ್ವಾಮಿ ಭಕ್ತಾಧಿಗಳಿಗೆ ನೆರವಾಗುತ್ತಿದೆ. ಸರ್ಕಾರ ಈ ಸಮಿತಿಗೆ ಸಹಾಯವನ್ನು ಮಾಡಬೇಕಿದೆ ಅನ್ನದಾನಕ್ಕೆ ಕಟ್ಟಡವನ್ನು ನಿರ್ಮಾಣ ಮಾಡಿಕೊಡಬೇಕಿದೆ. ಇದಕ್ಕೆ ಸಹಾಯವನ್ನು ಮಾಡಬೇಕಿದೆ. ಚಿತ್ರದುರ್ಗದ ನಗರಾಭಿವೃದ್ದಿ ಪ್ರಾಧಿಕಾರ ದೇವಾಲಯಕ್ಕೆ ಸಹಾಯವಾಗುವ ಹಾಗೇ ದೀಪದ ವ್ಯವಸ್ಥೆ ಹಾಗೂ ಸಿಮೆಂಟಿನ ಕುರ್ಚಿಗಳನ್ನು ಹಾಕಿಸಬೇಕಿದೆ ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶರಣ್ ಕುಮಾರ್ ಮಾತನಾಡಿ, ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ 20-6-1999ರಲ್ಲಿ  ಶ್ರೀ ಅಯ್ಯಪ್ಪ ಸ್ವಾಮಿ ಪಂಚಲೋಹ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಪ್ರತಿ ವರ್ಷವೂ ಸನ್ನಿಧಾನದಲ್ಲಿ ವಿಶೇಷವಾಗಿ ವಾರ್ಷಿಕೋತ್ಸವ, ಬ್ರಹ್ಮೋತ್ಸವ ಹಾಗೂ ಅಯ್ಯಪ್ಪ ಮಾಲಾಧಾರಿಗಳಿಗೆ ಉಚಿತ ಅನ್ನದಾನ ಕಾರ್ಯಕ್ರಮ ಮತ್ತು ದೀಪೋತ್ಸವ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನೆರವೇರಿಸುತ್ತಾ ಬರಲಾಗಿದೆ. ಮೊದಲನೇ ಕುಂಭಾಭಿಷೇಕವು 2012ನೇ ಸಾಲಿನಲ್ಲಿ ನೆರವೇರಿಸಲಾಯಿತು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಿ 25 ಸಂವತ್ಸರಗಳನ್ನು ಪೂರೈಸಿದ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಗರ್ಭಗುಡಿಯ ಸುತ್ತಲೂ ತಾಮ್ರದ ಹೊದಿಕೆ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲನ್ನು ಬೆಳ್ಳಿಯ ಕವಚದಿಂದಲೂ ನಿರ್ಮಾಣ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಜಿಲ್ಲಾ ಆಸ್ಪತ್ರೆಯ ಬ್ರದರ್ ಮಲ್ಲಣ್ಣ, ವಿದ್ಯಾನಗರದ ಎಂ.ಸಿ.ಶಂಕರ್ ಮಾತನಾಡಿದರು.  ಸಭಾ ಕಾರ್ಯಕ್ರಮದಲ್ಲಿ ಜ್ಯೋತಿಯನ್ನು ವರ್ತಕರಾದ ಉದಯಶೆಟ್ಟಿ ಬೆಳಗಿಸಿದರು. ಬಾಲಾಜಿ ಜ್ಯೂಯಲರ್ಸ್ ನ ಲಕ್ಷ್ಮಣ್ ಸೋನಿ, ಗುತ್ತಿಗೆದಾರರಾದ ಮಂಜುನಾಥ್, ಆರ್ಯ ಈಡಿಗರ ಸಂಘದ ಅಧ್ಯಕ್ಷರಾದ ಜೀವನ್, ಕಂಠೇಶ್ವರ ಗ್ರೂಪ್ಸ್‌ ನ ಸುರೇಶ್ ಬಾಬು, ಭಾಗವಹಿಸಿದ್ದರು.

ಬೆಳಿಗ್ಗೆ 6ಕ್ಕೆ ಬಿಂಬಶುದ್ದಿ, ಪ್ರೋಕ್ತಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮಗಳು, ಅರ್ಬುದ ಶಾಂತಿ ಹೋಮ, ಶ್ವಶಾಂತಿ ಹೋಮ, ಅಂಕುರ ಪೂಜೆ ಕಲಶಾಭೀಷೇಕ ಗಣಪತಿ ಅಥರ್ವ ಶಿಷ್ಯ ಹೋಮ, ಪೂರ್ಣಾವತಿ ಮಹಾ ಮಂಗಳಾರತಿ ಪೂಜೆ ನೆರವೇರಿದ್ದು, ಸಂಜೆ ಶ್ರೀ ಗಣಪತಿ ಅಥರ್ವಶೀರ್ಷ ಹೋಮ, ಪೂರ್ಣಾಹಿತಿ ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಿತು.

ಸವಿತಕ್ಕ ಬ್ಯಾಂಡ್ ಮತ್ತು ಸಂಗಡಿಗರಿಂದ ಭಕ್ತಿ ಕುಸುಮಾಂಜಲಿ ಕಾರ್ಯಕ್ರಮ ನಡೆಯಿತು. ಯಶವಂತ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ದಿನಾಂಕ 8-7-2024ರ ಬೆಳಿಗ್ಗೆ 6ಕ್ಕೆ ಆದಿವಾಸಹೋಮ, ವಲಿಯ ಪಾಣಿ, ಮಹಾಕಳಶಾಭೀಷೇಕ ಪರಿಕಳಶಾ ಭಿಷೇಕ ಸ್ಕಂದ ಹೋಮ ಹಾಗೂ ಅಶ್ಲೇಷ ಬಲಿ ಪೂಜೆ ಮಹಾ ಮಂಗಳಾರತಿ  ಹೋಮ ನೆರವೇರುವುದು.ಸಂಜೆ 6.30ಕ್ಕೆ ನಡೆಯುವ ಸಮಾರಂಭವನ್ನು ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಜ್ಯೋತಿಯನ್ನು ಸಂಸದರಾಧ ಗೋವಿಂದ ಕಾರಜೋಳ ಬೆಳಗಲಿದ್ದಾರೆ. ಗುತ್ತಿಗೆದಾರರಾದ ಬಲರಾಮ ರೆಡ್ಡಿ, ಐಶ್ವರ್ಯ ಪೋರ್ಟ್‍ನ ಆರುಣ್ ಕುಮಾರ್, ಮೇದೇಹಳ್ಳಿಯ ಎಂ.ರವಿಶಂಕರ್, ಬಿಜೆಪಿಯ ನಗರಾಧ್ಯಕ್ಷರಾದ ನವೀನ್ ಚಾಲುಕ್ಯ, ಎ.ವಿ.ಓ.ಪಿ.ಎಯ ಉಪಾಧ್ಯಕ್ಷರಾದ ಪಿ.ಎಲ್.ಸುರೇಶ್ ಬಾಬು, ಆದಶ್ ಟ್ರೇಡರ್ಸ್‍ನ ಪಟೇಲ್ ಶಿವಕುಮಾರ್, ಹೋಟೇಲ್ ಮಾಲಿಕರ ಸಂಘದ ಅಧ್ಯಕ್ಷರಾದ ಕೆ.ಎಸ್ ಆರುಣ್ ಕುಮಾರ್, ಭಜರಂಗದಳದ ದಕ್ಷಿಣ ಪ್ರಾಂತೀಯ ಸಂಚಾಲಕರಾಧ ಪ್ರಬಂಜನ್, ಜಯರಾಂ ಗ್ರೂಪ್ಸ್‍ನ ಮಾರುತಿ ಪ್ರಸನ್ನ, ಕ್ರೀಡಾ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಜಿ.ಎಂ.ಸುರೇಶ್, ಮಾಜಿ ಅಧ್ಯಕ್ಷರಾದ ಉಜ್ಜಿನಿಸ್ವಾಮಿ ಕಾವೇರಿ ಟ್ರೇಡರ್ಸ್ ನ ಟಿ.ರಾಮರೆಡ್ಡಿ ಭಾಗವಹಿಸಲಿದ್ದಾರೆ. ಸಂಗೀತಗಾರರಾದ ಮಹೇಂದ್ರದಾಸ್, ರಮೇಶ್‍ಚಂದ್ರ, ಸುನೀತ್‍ಜೋಗಿರವರಿಂದ ಭಕ್ತಿ ಕುಸುಮಾಂಜಲಿ ಕಾರ್ಯಕ್ರಮ ನೆರವೇರುವುದು

Tags :
Advertisement