ಪಾರ್ಶ್ವನಾಥ ಶಾಲೆಯಲ್ಲಿ ಕ್ರೀಡಾ ಹಬ್ಬ : ಕ್ರೀಡೆ ಸಾಧನೆಗೆ ಹಾದಿ : ಚಿದಾನಂದಸ್ವಾಮಿ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಡಿ. 21 : ಇಂದಿನ ದಿನಮಾನದಲ್ಲಿ ಮಕ್ಕಳು ಮೊಬೈಲ್, ಟಿ.ವಿ,ಗೆ ಒಳಪಟ್ಟು ಆಟವಾಡುವುದನ್ನು ಮರೆತ್ತಿದ್ದಾರೆ, ನಮ್ಮ ಕಾಲದಲ್ಲಿ ಅಟದ ಮೈದಾನಗಳು ಬೆಳಿಗ್ಗೆ ಮತ್ತು ಸಂಜೆ ತುಂಬಿರುತ್ತಿದ್ದವು ಆದರೆ ಇಂದು ಖಾಲಿಯಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ನಿರ್ದೇಶಕರಾದ ಚಿದಾನಂದಸ್ವಾಮಿ ವಿಷಾಧಿಸಿದರು.
ನಗರದ ಪಾರ್ಶ್ವನಾಥ ವಿದ್ಯಾ ಸಂಸ್ಥೆಯವತಯಿಂದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ರೀಡಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಮಾನವನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ, ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ದೇಹ ಮತ್ತು ಮನಸ್ಸು ಪ್ರತಿ ದಿನ ಉಲ್ಲಾಸವಾಗಿರುತ್ತದೆ. ಚಿಕ್ಕ ವಯಸ್ಸಿನಿಂದಲೇ ಯಾವುದಾದರೊಂದು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಮುಂದಿನ ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಜೀವನದಲ್ಲಿ ಶ್ರದ್ದೆ, ಶಿಸ್ತು ಅಳವಡಿಕೆಯಾಗುತ್ತದೆ. ಪಠ್ಯದ ಜೊತೆಗೆ ಕ್ರೀಡೆಯನ್ನು ಸಹಾ ಆಳವಡಿಸಿಕೊಳ್ಳುವುದರಿಂದ ನಿಮ್ಮ ಬದುಕಿನಲ್ಲಿ ಉತ್ತಮವಾದ ಸಾಧನೆಯನ್ನು ಮುಂದಿನ ದಿನಮಾನದಲ್ಲಿ ಮಾಡಬಹುದಾಗಿದೆ. ಇಂದಿನ ದಿನಮಾನದಲ್ಲಿ ಮಕ್ಕಳ ಕೈಯಲ್ಲಿ ಪೋಷಕರು ಮೊಬೈಲ್ ನೀಡುವುದರಿಂದ ಮಕ್ಕಳು ಮೈದಾನದಲ್ಲಿ ಬಂದು ಆಡುವ ಪದ್ದತಿ ಕಡಿಮೆಯಾಗುತ್ತಿದೆ, ಇದ್ದಲ್ಲದೆ ಮನೆಯಲ್ಲಿ ಪೋಷಕರು ಟಿ.ವಿ.ಯನ್ನು ನೋಡುವುದರಿಂದ ಅದನ್ನು ಮಕ್ಕಳು ಸಹಾ ನೋಡುತ್ತಾರೆ ಹೊರಗಡೆ ಬರುವುದಿಲ್ಲ, ನಮ್ಮ ಆರೋಗ್ಯದ ಕಡೆ ಗಮನವನ್ನು ನೀಡಬೇಕಿದೆ ನಮಗೆ ವಯಸ್ಸಾದರು ಸಹಾ ನಮ್ಮ ಆರೋಗ್ಯ ಚನ್ನಾಗಿ ಇರಬೇಕಾದರೆ ಚಿಕ್ಕ ವಯಸ್ಸಿನಿಂದಲೇ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಚಿದಾನಂದಸ್ವಾಮಿ ಕರೆ ನೀಡಿದರು.
ನಿವೃತ್ತ ದೈಹಿಕ ನಿರ್ದೆಶಕರಾದ ಜಯ್ಯಣ್ಣ ಮಾತನಾಡಿ, ಕ್ರೀಡೆಯಲ್ಲಿ ತೊಡಗಿರುವುದರಿಂದ ನಮ್ಮ ಆರೋಗ್ಯ ಚನ್ನಾಗಿ ಇರುತ್ತದೆ ಸಣ್ಣ-ಪುಟ್ಟ ಖಾಯಿಲೆಗಳಿಂದ ದೂರ ಇರಬಹುದಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸು ಹಗುರವಾಗುತ್ತದೆ. ಈ ಶಾಲೆಯಲ್ಲಿ ಶಿಕ್ಷಕರು ಚನ್ನಾಗಿ ಇದ್ದಾರೆ ಉತ್ತಮವಾದ ಭೋಧನೆಯ ಜೊತೆಗೆ ಮಕ್ಕಳಲ್ಲಿ ಉತ್ತಮವಾದ ಕ್ರೀಡೆಯಲ್ಲಿ ಆಸಕ್ತಿಯನ್ನು ಮೂಡಿಸುವಮತ ಕಾರ್ಯವನ್ನು ಮಾಡುತ್ತಿದ್ದಾರೆ, ಮಕ್ಕಳ ಪ್ರಗತಿಯಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ಶಿಕ್ಷಕರ ಪಾತ್ರವೂ ಸಹಾ ಮುಖ್ಯವಾಗಿದೆ ಎಂದರು.
ಪಾಶ್ರ್ವನಾಥ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಾಬುಲಾಲ್ ಜೀ ಮಾತನಾಡಿ ನಮ್ಮ ಶಾಲೆ ಪಠ್ಯದಷ್ಠೇ ಮಹತ್ವನ್ನು ಕ್ರೀಡೆಗೂ ಸಹಾ ನೀಡುತ್ತಿದೆ ಪ್ರತಿ ವರ್ಷವೂ ಸಹಾ ಈ ರೀತಿಯಾದ ಕ್ರೀಡಾಕೂಟವನ್ನು ನಡೆಸುವುದರ ಮೂಲಕ ಮಕ್ಕಳಲ್ಲಿನ ಕ್ರೀಡಾ ಪ್ರತಿಭೆಯನ್ನು ಹೊರ ತೆಗೆಯವ ಕಾರ್ಯವನ್ನು ಮಾಡಲಾಗುತ್ತದೆ. ಇಂದಿನ ಮಕ್ಕಳೇ ನಾಡಿನ ಸಂಪತ್ತು ದೇಶಕ್ಕೆ ಉತ್ತಮವಾದ ಆರೋಗ್ಯವಂತರಾಧ ಮಕ್ಕಳನ್ನು ಕೊಡುಗೆಯಾಗಿ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಶ್ರ್ವನಾಥ್ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರಾದ ಉತ್ತಮ ಚಂದ್, ಕಾರ್ಯದರ್ಶಿ ಸುರೇಶ್ ಕುಮಾರ್, ಖಜಾಂಚಿ ರಾಜೇಂದ್ರ ಕುಮಾರ್, ನಿರ್ದೆಶಕರಾದ ಸುರೇಶ್ ಪಟ್ಟಿಯಾರ್, ಮುಕೇಶ್ ಕುಮಾರ್,ಮ ಮುಖ್ಯ ಶಿಕ್ಷಕರಾದ ನಾಜಿಮ್, ವಿಜಯಲಕ್ಮೀ, ಶಾಂತಕುಮಾರಿ ಭಾಗವಹಿಸಿದ್ದರು.
ಚೈತ್ರಾ ಪ್ರಾರ್ಥಿಸಿದರೆ, ಆಶ್ವಿನಿ ಕ್ರೀಡಾ ವಾರ್ಷಿಕ ವರದಿಯನ್ನು ವಾಚನ ಮಾಡಿದರೆ, ಸಂಗೀತ ಕ್ರೀಡಾ ಪಟುಗಳಿಗೆ ಕ್ರೀಡಾ ಪ್ರತಿಜ್ಞೆಯನ್ನು ಭೋಧಿಸಿದರು.