Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಅಕ್ಟೋಬರ್ 27 ರಂದು ಬೆನ್ನೆಲುಬು ಮತ್ತು ಮೂಳೆ ತಪಾಸಣೆ

05:38 PM Oct 25, 2023 IST | suddionenews
Advertisement

ಸುದ್ದಿಒನ್, ಬೆಂಗಳೂರು, ಅಕ್ಟೋಬರ್.25 : ಪ್ರತಿಷ್ಠಿತ ಫೋರ್ಟಿಸ್ ಆಸ್ಪತ್ರೆ ಬೆಂಗಳೂರು ಇವರಿಂದ ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಬೆನ್ನೆಲುಬು ಮತ್ತು ಮೂಳೆ ತಪಾಸಣೆ ಶಿಬಿರವನ್ನು ಅಕ್ಟೋಬರ್ 27 ರಂದು ಏರ್ಪಡಿಸಿದೆ.

Advertisement

ಅಂತರಾಷ್ಟ್ರೀಯವಾಗಿ ಮಾನ್ಯತೆ ಪಡೆದ  ಮೂಳೆರೋಗ ತಜ್ಞರಾದ ಡಾ. ಸೋಮಶೇಖರ್ ಡಿ. ಗೌಡ ಅವರು ಈ ತಪಾಸಣಾ ಶಿಬಿರದಲ್ಲಿ ಬೆನ್ನೆಲುಬು ಮತ್ತು ಮೂಳೆ ತಪಾಸಣೆ ಮಾಡುತ್ತಾರೆ.

ಬೆನ್ನೆಲುಬಿನ ಆಘಾತ, ಡಿಸ್ಕ್ ಸಮಸ್ಯೆಗಳು, ಸಿಯಾಟಿಕಾ, ಕುತ್ತಿಗೆ ನೋವು, ಬೆನ್ನು ನೋವು, ಸ್ಕೊಲಿಯೋಸಿಸ್ ಸೇರಿದಂತೆ ಇನ್ನಿತರೆ ಸಮಸ್ಯೆ ಇರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದೆ.

Advertisement

ಚಿತ್ರದುರ್ಗದಲ್ಲಿ
ದಿನಾಂಕ: 27 ನೇ ಅಕ್ಟೋಬರ್ 2023 (ಶುಕ್ರವಾರ)
ಕೀರ್ತಿ ಆಸ್ಪತ್ರೆ, ವಿ.ಪಿ. ಬಡಾವಣೆ ಮುಖ್ಯ ರಸ್ತೆ, ಚಿತ್ರದುರ್ಗ
ಸಮಯ:  ಬೆಳಿಗ್ಗೆ 10 ರಿಂದ 12:00 ರವರೆಗೆ

ತುಮಕೂರಿನಲ್ಲಿ
ದಿನಾಂಕ: 27 ನೇ ಅಕ್ಟೋಬರ್ 2023 (ಶುಕ್ರವಾರ) ಸಿದ್ದಗಂಗಾ ಡಯಗ್ನೊಸ್ಟಿಕ್‌ ಸೆಂಟರ್ ಪ್ರೈವೇಟ್ ಲಿಮಿಟೆಡ್, ತುಮಕೂರು, ಸಮಯ: ಮಧ್ಯಾನ್ಹ 2 :00 ಗಂಟೆಯಿಂದ ಸಂಜೆ 4:00 ರ ವರೆಗೆ ತಪಾಸಣೆಗೆ ಲಭ್ಯರಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ನಿಗಧಿತ ಭೇಟಿಗಾಗಿ ಕರೆ ಮಾಡಿ:  ಸಂತೋಷ್ ಚೌಹಾಣ್ - 94496 96954,  75800 75866

Advertisement
Tags :
bonechitradurgaExaminationfeaturedOctoberSpinesuddioneTumkuruಚಿತ್ರದುರ್ಗತಪಾಸಣೆತುಮಕೂರುಬೆನ್ನೆಲುಬುಮೂಳೆಸುದ್ದಿಒನ್
Advertisement
Next Article