ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಸ್ಪರ್ಧೆ ಆಯೋಜನೆ : ನಿಮ್ಮ ಮಗುವಿನ ಹೆಸರು ನೊಂದಾಯಿಸಿ..!
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 21 : ಶ್ರಾವಣ ಶುರುವಾಯ್ತು.. ಹಬ್ಬಗಳು ಆರಂಭವಾದವೂ.. ತಾಯಂದಿರ ನೆಚ್ಚಿನ ಕೃಷ್ಣಜನ್ಮಾಷ್ಠಮಿಯೂ ಬಂದೇ ಬಿಡ್ತು. ಇದೇ ತಿಂಗಳ 26 ರಂದು ಕೃಷ್ಣ ಜನ್ಮಾಷ್ಠಮಿಯ ಹಬ್ಬ ಇದೆ. ಅಂದ್ರೆ ಇನ್ನು ಐದೇ ದಿನ ಉಳಿದಿರುವುದು. ಈ ಕೃಷ್ಣಜನ್ಮಾಷ್ಠಮಿ ಅಂದ್ರೆ ತಾಯಂದಿರಿಗೆ ಬಹಳ ಇಷ್ಟ. ಯಾಕಂದ್ರೆ ತಮ್ಮ ಮಕ್ಕಳಿಗೆ ಕೃಷ್ಣ-ರುಕ್ಮಿಣಿ-ರಾಧೆಯ ವೇಷ ಹಾಕಿ ಸಂಭ್ರಮಿಸುತ್ತಾರೆ. ಮಕ್ಕಳಲ್ಲಿಯೇ ದೇವರನ್ನು ಕಾಣುತ್ತಾರೆ. ಆ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇನ್ನು ಶಾಲೆಗಳಲ್ಲೂ ಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿರುತ್ತದೆ. ಸ್ಪರ್ಧೆಗಳು ನಡೆಯುತ್ತವೆ.
ಪ್ರತಿವರ್ಷದಂತೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಈ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಬಹುಮಾನವನ್ನು ಗೆಲ್ಲಬಹುದು. ಕೆಲವೊಂದು ನಿಯಮಗಳು ಕೂಡ ಇದ್ದು, ಇಲ್ಲಿ ನೀಡಿರುವ ನಿಯಮಗಳು ಈ ಕೆಳಗಿನಂತೆ ಇದೆ. ಹಾಗೇ ಸಂಪರ್ಕಿಸಬೇಕಾದ ನಂಬರ್ ಕೂಡ ಇದೆ.
1.ಶ್ರೀಕೃಷ್ಣ ವೇಷಭೂಷಣ ಸ್ಪರ್ಧೆ ವಯಸ್ಸು : 3 ರಿಂದ 7 ವರ್ಷದ ವಯಸ್ಸಿನ ಮಕ್ಕಳು
2.ಶ್ರೀಕೃಷ್ಣನ ಚಿತ್ರಕ್ಕೆ ಬಣ್ಣ ತುಂಬುವುದು ವಯಸ್ಸು : 8 ರಿಂದ 12 ವರ್ಷಗಳು. ನಾವು ಕೊಡುವ ಶ್ರೀ ಕೃಷ್ಣನ ಚಿತ್ರಕ್ಕೆ ಕ್ರೇಯಾನ್ಸ್/ ಸ್ಕೆಚ್ ಪೆನ್ ಬಳಿಸಿ ಬಣ್ಣ ತುಂಬಬೇಕು.
3.ಶ್ರೀಕೃಷ್ಣನ ಚಿತ್ರ ಬಿಡಿಸುವುದು.ವಿಷಯ : ಸ್ವರ್ಗದಲ್ಲಿ ಶ್ರೀ ಕೃಷ್ಣ
ವಯಸ್ಸು: 13 ರಿಂದ 15 ವರ್ಷಗಳು
ದಿನಾಂಕ:25/08/2024
ಸಮಯ ಸಂಜೆ05: 30ಗೆ
ತಮ್ಮ ಹೆಸರನ್ನು ನೋಂದಾಯಿಸಲು 9449266185 6362551302 ಗೆ ಕರೆ ಮಾಡಿರಿ. ಸ್ಥಳ ಸಭಾಂಗಣ, ಆಕಾಶವಾಣಿ ಹಿಂಭಾಗ, ಕೆಳಗೋಟೆ, ಚಿತ್ರದುರ್ಗ