Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.95.83ರಷ್ಟು ಮತದಾನ : ತಾಲ್ಲೂಕುವಾರು ಮಾಹಿತಿ ಇಲ್ಲಿದೆ...!

06:59 PM Jun 03, 2024 IST | suddionenews
Advertisement

ಚಿತ್ರದುರ್ಗ : ಜೂನ್03: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್‍ಗೆ ಸೋಮವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.95.83ರಷ್ಟು ಮತದಾನವಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

Advertisement

 

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 7 ಮತಗಟ್ಟೆ ಸ್ಥಾಪಿಸಲಾಗಿದ್ದು, ಒಟ್ಟು 4913 ಶಿಕ್ಷಕ ಮತದಾರರಲ್ಲಿ 3303 ಪುರುಷರು ಹಾಗೂ 1405 ಮಹಿಳೆಯರು ಸೇರಿ 4708 ಶಿಕ್ಷಕ ಮತದಾರರು ಮತ ಚಲಾಯಿಸಿದ್ದಾರೆ.

Advertisement

 

ಮತಗಟ್ಟೆವಾರು ಮತದಾನದ ವಿವರ: ಮೊಳಕಾಲ್ಮುರು ತಾಲ್ಲೂಕಿನ ತಾಲ್ಲೂಕು ಆಡಳಿತ ಸೌಧದ ಮತಗಟ್ಟೆಯಲ್ಲಿ 222 ಪುರುಷರು ಹಾಗೂ 46 ಮಹಿಳಾ ಮತದಾರರು ಸೇರಿದಂತೆ ಒಟ್ಟು 268 ಶಿಕ್ಷಕ ಮತದಾರರು ಇದ್ದು, ಇದರಲ್ಲಿ 214 ಪುರುಷರು 44 ಮಹಿಳೆಯರು ಸೇರಿ ಒಟ್ಟು 258 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.96.27ರಷ್ಟು ಮತದಾನವಾಗಿದೆ.

 

ಚಳ್ಳಕೆರೆ ನಗರದ ಬಿಎಂಜಿಹೆಚ್‍ಎಸ್ ಶಾಲೆಯ ಮತಗಟ್ಟೆಯಲ್ಲಿ 754 ಪುರುಷರು ಹಾಗೂ 265 ಮಹಿಳಾ ಮತದಾರರು ಸೇರಿದಂತೆ ಒಟ್ಟು 1019 ಶಿಕ್ಷಕ ಮತದಾರರು ಇದ್ದು, ಇದರಲ್ಲಿ 710 ಪುರುಷರು 253 ಮಹಿಳೆಯರು ಸೇರಿ ಒಟ್ಟು 963 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.94.50ರಷ್ಟು ಮತದಾನವಾಗಿದೆ.

 

ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ-1ರ ಮತಗಟ್ಟೆಯಲ್ಲಿ 489 ಪುರುಷರು ಹಾಗೂ 292 ಮಹಿಳಾ ಮತದಾರರು ಸೇರಿದಂತೆ ಒಟ್ಟು 781 ಶಿಕ್ಷಕ ಮತದಾರರು ಇದ್ದು, ಇದರಲ್ಲಿ 462 ಪುರುಷರು 288 ಮಹಿಳೆಯರು ಸೇರಿ ಒಟ್ಟು 750 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.96.03ರಷ್ಟು ಮತದಾನವಾಗಿದೆ.

ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ-2ರ ಮತಗಟ್ಟೆಯಲ್ಲಿ 501 ಪುರುಷರು ಹಾಗೂ 322 ಮಹಿಳಾ ಮತದಾರರು ಸೇರಿದಂತೆ ಒಟ್ಟು 823 ಶಿಕ್ಷಕ ಮತದಾರರು ಇದ್ದು, ಇದರಲ್ಲಿ 485 ಪುರುಷರು 295 ಮಹಿಳೆಯರು ಸೇರಿ ಒಟ್ಟು 780 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.94.78ರಷ್ಟು ಮತದಾನವಾಗಿದೆ.

ಹಿರಿಯೂರು ತಾಲ್ಲೂಕಿನ ತಾಲ್ಲೂಕು ಆಡಳತ ಸೌಧದ ಮತಗಟ್ಟೆಯಲ್ಲಿ 601 ಪುರುಷರು ಹಾಗೂ 264 ಮಹಿಳಾ ಮತದಾರರು ಸೇರಿದಂತೆ ಒಟ್ಟು 865 ಶಿಕ್ಷಕ ಮತದಾರರು ಇದ್ದು, ಇದರಲ್ಲಿ 589 ಪುರುಷರು 258 ಮಹಿಳೆಯರು ಸೇರಿ ಒಟ್ಟು 847 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.92ರಷ್ಟು ಮತದಾನವಾಗಿದೆ.

ಹೊಸದುರ್ಗ ತಾಲ್ಲೂಕಿನ ತಾಲ್ಲೂಕು ಕಚೇರಿ ಸಭಾಂಗಣದ ಮತಗಟ್ಟೆಯಲ್ಲಿ 508 ಪುರುಷರು ಹಾಗೂ 172 ಮಹಿಳಾ ಮತದಾರರು ಸೇರಿದಂತೆ ಒಟ್ಟು 680 ಶಿಕ್ಷಕ ಮತದಾರರು ಇದ್ದು, ಇದರಲ್ಲಿ 492 ಪುರುಷರು 162 ಮಹಿಳೆಯರು ಸೇರಿ ಒಟ್ಟು 654 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.96.18ರಷ್ಟು ಮತದಾನವಾಗಿದೆ.

ಹೊಳಲ್ಕೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಯ ಮತಗಟ್ಟೆಯಲ್ಲಿ 367 ಪುರುಷರು ಹಾಗೂ 110 ಮಹಿಳಾ ಮತದಾರರು ಸೇರಿದಂತೆ ಒಟ್ಟು 477 ಶಿಕ್ಷಕ ಮತದಾರರು ಇದ್ದು, ಇದರಲ್ಲಿ 351 ಪುರುಷರು 105 ಮಹಿಳೆಯರು ಸೇರಿ ಒಟ್ಟು 456 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.95.60ರಷ್ಟು ಮತದಾನವಾಗಿದೆ ಎಂದು  ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

Advertisement
Tags :
95.83% Voting in the DistrictbengaluruchitradurgaSouth East Teachers Constituency Electionsuddionesuddione newstaluk wise informationಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಚಿತ್ರದುರ್ಗತಾಲ್ಲೂಕುವಾರು ಮಾಹಿತಿಬೆಂಗಳೂರುಶೇ.95.83ರಷ್ಟು ಮತದಾನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article