Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೆಲವರು ನಮ್ಮಿಂದಲೇ ಕಲಿತು ನಮ್ಮ ತಲೆ ಮೇಲೆ ಭಸ್ಮಾಸುರರಂತೆ ಕೈಯಿಡಲು ಮುಂದಾಗಿದ್ದಾರೆ : ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

05:35 PM Sep 24, 2024 IST | suddionenews
Advertisement

ಸುದ್ದಿಒನ್, ಸಿರಿಗೆರೆ, ಸೆಪ್ಟೆಂಬರ್. 24 :
ಶಿಷ್ಯರಿಗೆ ಗುರುಗಳ ಮೇಲೆ ಭಕ್ತಿಭಾವವಿರಬೇಕು. ಶಿಷ್ಯರ ಭಕ್ತಿಭಾವಗಳನ್ನು ಗುರುಗಳು ಗೌರವಿಸಬೇಕೆಂಬುದು ಶ್ರೀಗಳ ಆತ್ಮನಿವೇದನೆಯಲ್ಲಿ ಅಚ್ಚಾಗಿದೆ ಎಂದು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.

Advertisement

ಸಿರಿಗೆರೆಯಲ್ಲಿ ಮಂಗಳವಾರ ಜರುಗಿದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 32ನೇ ಶ್ರದ್ಧಾಂಜಲಿಯ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭಸ್ಮಾಸುರರಂತೆ ಕೆಲವು ಜನರು ನಮ್ಮಿದಲೇ ಕಲಿತು ನಮ್ಮ ತಲೆ ಮೇಲೆ ಕೈಯಿಡಲು ಮುಂದಾಗಿದ್ದಾರೆ. ನೀವು ಅಂಜುಬುರುಕರಾದರೆ, ದುರ್ಬಲರಾದರೆ ನಿಮ್ಮ ತಲೆ ಮೇಲೆ ಕಾಲಿಡುತ್ತಾರೆ. ನೀವು ಧೈರ್ಯಶಾಲಿಗಳಾದರೆ ನಿಮ್ಮ ಬೂಟು ನೆಕ್ಕುತ್ತಾರೆ ನೆನಪಿರಲಿ ಎಂದು ಹಿರಿಯ ಶ್ರೀಗಳವರು ನಮಗೆ ಖಾಸಗಿಯಾಗಿ ನಮ್ಮ ಪಟ್ಟವಾದ ಕಾಲದಲ್ಲಿಯೇ ಹೇಳಿದ್ದರು.

Advertisement

ಶಿವಕುಮಾರ ಶ್ರೀಗಳು ತಮ್ಮ ಆತ್ಮನಿವೇದನೆಯಲ್ಲಿ ಬರೆದಿರುವ ಗುರುವಿಗಂಜಿ ಶಿಷ್ಯರು, ಶಿಷ್ಯರಿಗಂಜಿ ಗುರುವು ಇರಬೇಕೆಂಬುದು ಶ್ರೀಮಠದ ಧ್ಯೇಯವಾಗಿದೆ. ಮಠದ ವಿರುದ್ಧ ಅಪವಾದ ಮಾಡುವ ಶನಿಸಂತಾನದ ಜನರು ಹಿರಿಯ ಗುರುಗಳ ಕಾಲದಿಂದಲೂ ಇದ್ದಾರೆ. ಜನರ ಅಪವಾದಗಳಿಗೆ ಅಂಜಬೇಡ ಎಂಬುದು ನಮ್ಮ ಶ್ರೀಗಳ ಮಾತಾಗಿತ್ತು. ವ್ಯಕ್ತಿ ಸರಿ ದಾರಿಯಲ್ಲಿ ನಡೆಯಲು ಸಮಾಜ, ಕಾನೂನು, ಆತ್ಮದ ಭಯ ಬೇಕು. ಸತ್ಯವಂತರು ಹೆದರಬೇಕಿಲ್ಲ. ಸುಳ್ಳಿಗೆ ಅನೇಕ ಬಣ್ಣಗಳಿವೆ. ಸತ್ಯಕ್ಕೆ ಒಂದೇ ಬಣ್ಣ ಎಂದರು.

ಬೆಂಗಳೂರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಮಾತನಾಡಿ, ಸಮಾಜಕ್ಕೆ ಶಿವಕುಮಾರ ಶ್ರೀಗಳ ಪ್ರೇರಣೆ, ಸ್ಪೂರ್ತಿ ಅಧಿಕ. ಬದುಕಿನಲ್ಲಿ ಬಂದ ಸವಾಲುಗಳ ವಿರುದ್ಧ ದಿಟ್ಟವಾಗಿ ನಿಂತು ಬಡಜನರಿಗೆ ದಾರಿದೀಪವಾಗಿದ್ದಾರೆ. ಶ್ರೀಮಠವು ಧರ್ಮಪೀಠ, ನ್ಯಾಯಪೀಠ, ಜ್ಞಾನಪೀಠಗಳ ತ್ರಿವೇಣಿ ಸಂಗಮವಾಗಿದೆ. ಸಿರಿಗೆರೆ ಸದ್ಧರ್ಮ ನ್ಯಾಯಪೀಠವು ಸುಪ್ರೀಂ ಕೋರ್ಟ್‍ನ ಮಾದರಿಯಾಗಿದೆ. ಒಳ್ಳೆಯ ವಿಚಾರಗಳನ್ನು ಹೃದಯದ ಆಳದಲ್ಲಿ ಬೆಳಸಿಕೊಳ್ಳಬೇಕಾಗಿದೆ. ರೈತರಿಗೆ ನೀರೇ ಬಂಗಾರ ಆದ್ದರಿಂದ ಶ್ರೀಗಳು ರೈತರಿಗೆ ನೀರಿನ ಗ್ಯಾರಂಟಿ ಕೊಡಿ ಎಂದು ಸರ್ಕಾರಕ್ಕೆ ಕಿವಿಮಾತನ್ನು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘ ಅಧ್ಯಕ್ಷರಾದ ಎಚ್.ಆರ್.ಬಸವರಾಜಪ್ಪ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಶಾಲೆಗಳನ್ನು ತೆರೆದು ಬಡ ಮಕ್ಕಳಿಗೆ ಶಿಕ್ಷಣ ನೀಡಿ ಹರಿಜನರೊಡನೆ ಸಹಪಂಕ್ತಿಬೋಜನಾ ನಡೆಸಿ ವೈಚಾರಿಕಾ ಕ್ರಾಂತಿ ಮಾಡಿದ ಧೀರ ಸನ್ಯಾಸಿ ಶಿವಕುಮಾರ ಶ್ರೀಗಳವರು. ಡಾ.ಶ್ರೀಗಳವರು ಫಸಲ್ ಭೀಮಾ ಯೋಜನೆ ಹಣ ಜಮೆ ಆಗದ ರೈತರಿಗೆ ಶ್ರೀಘ್ರದಲ್ಲಿ ಬಗೆಹರಿಸಿದರು. ಯಶಸ್ವಿನಿ ಯೋಜನೆ ಮರುಜಾರಿಗೆ ತಂದವರು. ರೈತರು ಅಡಿಕೆ ತೋಟಗಳನ್ನು ನಿರ್ಮಿಸಿ ಆರ್ಥಿಕವಾಗಿ ಸಬಲರಾಗಲು ಶ್ರೀಗಳು ತಂದ ಏತನೀರಾವರಿ ಯೋಜನೆಗಳೇ ಕಾರಣ. ಮಠದ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡುತ್ತಿರುವ ಕೆಲವರಿಗೆ ಉತ್ತರ ಕೊಡುವ ಕೆಲಸವನ್ನು ಶ್ರೀಗಳವರು ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುತ್ತಿರುವವರಿಗೆ ದೇವರು ಒಳ್ಳೆಯ ಬುದ್ಧಿಯನ್ನು ನೀಡಲಿ ಎಂದರು.

ದಾವಣಗೆರೆ ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ಧೇಶ್ವರ ಮಾತನಾಡಿ, ಗ್ರಾಮೀಣ ಬಾಗದಲ್ಲಿ ಶಿಕ್ಷಣ ಕ್ರಾಂತಿಯನ್ನು ನಡೆಸಿದ ಅಗೋಚರ ಶಕ್ತಿ. ಶಿವಕುಮಾರ ಶ್ರೀಗಳು. ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹಕ್ಕೆ ಹೆಸರಾದ ಮಠ ಸಿರಿಗೆರೆ ಮಠ. ಮೂಢನಂಬಿಕೆಗಳ ವಿರುದ್ದ ಹೋರಾಟ, ವಿಧವಾ ವಿವಾಹ ಸಾಮಾಜಿಕ ಪಿಡುಗುಗಳ ನಿವಾರಣೆ ಸೇರಿದಂತೆ ವಚನಗಳನ್ನು ಸಾಗರೋತ್ತರ ಕಡೆಗೆ ಮುಟ್ಟಿಸಿದವರು ಲಿಂ. ಶ್ರೀಗಳು. ಡಾ.ಶ್ರೀಗಳವರು ಉಬ್ರಾಣಿ, ಸಾಸ್ವಿಹಳ್ಳಿ, ಭರಮಸಾಗರ, ಜಗಳೂರು ಏತನೀರಾವರಿ ಯೋಜನೆಗಳನ್ನು ಜಾರಿಗೆ ತಂದು ರೈತರ ಬದುಕನ್ನು ಹಸನುಗೊಳಿಸಿದ್ದಾರೆ. ಶ್ರೀಮಠ ಬೆಳೆಯಲು ಭಕ್ತರೇ ಕಾರಣ. ಜೀವ ಇರುವರೆಗೂ ಶ್ರೀಗಳೇ ಜಗದ್ಗುರುಗಳಾಗಿರಬೇಕು ಎಂದರು.

ಬೆಂಗಳೂರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷರಾದ ಶಂಕರ ಎಂ. ಬಿದರಿ ಮಾತನಾಡಿ, ಮಠದ ಬಗ್ಗೆ ಭಿನ್ನಾಭಿಪ್ರಾಯಗಳು ಹೆಚ್ಚಾದಂತೆ ನಮ್ಮ ಮಠದ ಭಕ್ತರ ಸಂಘಟನೆ, ಸಂಕಲ್ಪ, ವೈಚಾರಿಕ ಚಿಂತನೆ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ. ಭಕ್ತರೇ ಮಠದ ಆಸ್ತಿ. ಮಠದ ಎಲ್ಲಾ ಭಿನ್ನಾಭಿಪ್ರಾಯಗಳು ದೂರಾಗಿ ಮುಂದಿನ 33ನೇ ಶ್ರೀಗಳ ಶ್ರದ್ದಾಂಜಲಿಗೆ ಎಲ್ಲರೂ ಒಂದಾಗಿ ಸೇರಿ ಕಾರ್ಯಕ್ರಮ ಆಚರಿಸುವಂತಾಗಲಿ ಎಂದರು.

ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆ ಮಾತನಾಡಿ, ಲಿಂ.ಶಿವಕುಮಾರ ಶ್ರೀಗಳ ಪ್ರತಿ ಶ್ರದ್ಧಾಂಜಲಿಗೂ ಒಂದೊಂದು ಏತನೀರಾವರಿ ಯೋಜನೆಗಳನ್ನು ಲೋಕಾರ್ಪಣೆ ಮಾಡುವ ಸಂಕಲ್ಪವಾಗಬೇಕು. ಶ್ರೀಗಳ ಉದ್ಧೇಶ ಧ್ಯೇಯ ರೈತರ ಕಲ್ಯಾಣಕ್ಕಾಗಿ ಹಾಗೂ ಏತನೀರಾವರಿ ಯೋಜನೆಗಳ ಅನುಷ್ಠಾನವಾಗಿದೆ. ರೈತರಿಗೆ ಕೃಷಿ ದಾಸೋಹ ನೀಡಿದ ಮೊದಲ ಶ್ರೀಗಳು ತರಳಬಾಳು ಶ್ರೀಗಳವರು. ಏತನೀರಾವರಿ ಯೋಜನೆಗಳಲ್ಲಿ ಸಾಸ್ವೆಹಳ್ಳಿ ಬಾಗಶಃ ಮುಗಿದಿದೆ. ಜಗಳೂರು ಭಾಗದ 57 ಕೆರೆಗಳಲ್ಲಿ 33 ಕೆರೆಗಳಿಗೆ ನೀರು ಬಂದಿದೆ. ಹಣಕಾಸಿನ ಸಮಸ್ಯೆಯಿಂದ ಈ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಮುಂದಿನ ಶ್ರೀಗಳವರ ಶ್ರದ್ಧಾಂಜಲಿಯ ಒಳಗಾಗಿ ಜಗಳೂರು ಭಾಗದ ಎಲ್ಲಾ ಕೆರೆಗಳಿಗೆ ನೀರು ಹರಿಸಲಿದ್ದೇವೆ. ತುಂಗಭದ್ರಾ ಡ್ಯಾಂನಿಂದ ಸು100 ಟಿಎಂಸಿ ವ್ಯರ್ಥವಾಗಿ ಸಮುದ್ರಕ್ಕೆ ಹೋಗುತ್ತಿದೆ. ನೀರಿನ ಹಂಚಿಕೆ ಇದ್ದರೂ ಆ ನೀರನ್ನು ಬಳಸಿಕೊಳ್ಳಲು ಯಾವ ಅಭ್ಯಂತರವೂ ಇಲ್ಲ. ಡಾ.ಶ್ರೀಗಳು ಸರ್ಕಾರಕ್ಕೆ ಒತ್ತಾಯ ಮಾಡಿ ಕರ್ನಾಟಕ ಭಾಗದ ಎಲ್ಲಾ ಕೆರೆಗಳನ್ನು ಏತಾನೀರಾವರಿ ಯೋಜನೆಗಳ ಮೂಲಕ ತುಂಬಿಸುವ ಕೆಲಸ ಮಾಡಬೇಕೆಂಬುದು ನಮ್ಮ ಒತ್ತಾಸೆಯಾಗಿದೆ ಎಂದರು.

ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಅವರು ತರಳಬಾಳು ಪ್ರಕಾಶನದ ಸಾಹಿತ್ಯ ಸಿರಿ ಮಾಲಿಕೆಯ ಆತ್ಮನಿವೇದನೆ ಸಂಕಲ್ಪ, ಅಕ್ಕಮಹಾದೇವಿ ಕೆ ವಚನ್, ಅಲ್ಲಮಪ್ರಭು ಕೆ ವಚನ್ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಉದ್ಯಮಿಗಳಾದ ರಾಜಪಾಟೀಲ್, ದಾವಣಗೆರೆ ಶಿವಗಂಗಾ, ಸಾವಿತ್ರಿರೆಡ್ಡಿ, ನೀರಾವರಿ ನಿಗಮದ ಅಭಿಯಂತರು ಇದ್ದರು.
ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ ನಿರೂಪಿಸಿದರು, ತರಳಬಾಳು ವಿದ್ಯಾಸಂಸ್ಥೆಯ ಆಢಳಿತಾಧಿಕಾರಿ ಎಚ್.ವಿ.ವಾಮದೇವಪ್ಪ ಸ್ವಾಗತಿಸಿದರು, ವಿಶೇಷಾಧಿಕಾರಿ ವೀರಣ್ಣ ಎಸ್.ಜತ್ತಿ, ಕಾರ್ಯದರ್ಶಿ ಜಿ.ಆರ್.ಓಂಕಾರಪ್ಪ ಇತರರು ಇದ್ದರು.

Advertisement
Tags :
bengaluruchitradurgaDr. Shivamurthy Shivacharya Swamijisuddionesuddione newsಚಿತ್ರದುರ್ಗಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿತರಳಬಾಳು ಜಗದ್ಗುರುಬೆಂಗಳೂರುಭಸ್ಮಾಸುರಸಿರಿಗೆರೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article