For the best experience, open
https://m.suddione.com
on your mobile browser.
Advertisement

ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯ ಸರಿಪಡಿಸಿ : ಶಿಕ್ಷಕರ ಸಂಘ ಒತ್ತಾಯ

05:54 PM Aug 06, 2024 IST | suddionenews
ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯ ಸರಿಪಡಿಸಿ   ಶಿಕ್ಷಕರ ಸಂಘ ಒತ್ತಾಯ
Advertisement

ಸುದ್ದಿಒನ್,ಕೊಪ್ಪಳ, ಆಗಸ್ಟ್.06 :  ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸೋಮವಾರ ಸಂಜೆ ತಾಲೂಕಿನ ತಹಸಿಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement
Advertisement

ಪ್ರಾಥಮಿಕ ಶಾಲಾ ಶಿಕ್ಷಕರನ್ನು ಈ ಮೊದಲು 1 ರಿಂದ 8 ನೇ ತರಗತಿ ಬೋಧನೆ ಮಾಡುವವ ಶಿಕ್ಷಕರೆಂದು ಪರಿಗಣಿಸಲಾಗುತ್ತಿತ್ತು. ಪ್ರಸ್ತುತವಾಗಿ ಅವರನ್ನು 1 ರಿಂದ 5ನೇ ತರಗತಿ ಬೋಧನೆ ಮಾಡುವ ಶಿಕ್ಷಕರೆಂದು ಪರಿಗಣಿಸಿರುವುದು ಅನ್ಯಾಯವಾಗಿದೆ. 2017 ರ ವೃಂದ ಮತ್ತು ನೇಮಕಾತಿ ನಿಯಮಗಳು 2016ಕ್ಕಿಂತ ಮುಂಚೆ ನೇಮಕವಾದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂಬುದರ ಕುರಿತು ಇಲಾಖೆಯು ಆದೇಶ ಹೊರಡಿಸಿ ಮೂಲತ 1 ರಿಂದ 8ನೇ ತರಗತಿಗೆ  ನೇಮಕ ಹೊಂದಿರುವವರನ್ನು ಪಿ.ಎಸ್.ಟಿ.ಎಂದು ಪದನಾಮ ಮಾಡಿ 1ರಿಂದ 5 ನೇ ತರಗತಿಗೆ ಹಿಂಬಡ್ತಿ ನೀಡಿದ್ದನ್ನು ಹಿಂದೆ ಪಡೆಯಬೇಕು.

2016ಕ್ಕಿಂತ ಮೊದಲು ನೇಮಕವಾದ ಶಿಕ್ಷಕರನ್ನು ಎನ್.ಸಿ.ಟಿ.ಈ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆಯನ್ನು ಹೊಂದಿದ ಎಲ್ಲಾ ಸೇವಾನಿರತ ಶಿಕ್ಷಕರನ್ನು ಜಿ.ಪಿ.ಟಿ.ಶಿಕ್ಷಕರೆಂದು ಸೇವಾಜೇಷ್ಠತೆಯೊಂದಿಗೆ ಪನರ್ ಪದನಾಮಕರಣ ಮಾಡಬೇಕು,ಪ್ರಾಥಮಿಕ ಶಾಲಾ ಶಿಕ್ಷರನ್ನು ಅವರ ಸೇವಾ ಜೇಷ್ಠತೆಯ ಆಧಾರದ ಮೇಲೆ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು.

Advertisement

ಪ್ರಾಥಮಿಕ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳು ಬಹಳ ಹಳೆಯ ನಿಯಮಗಳಾಗಿದ್ದು,ಅವುಗಳನ್ನು ಕೂಡಲೇ ತಿದ್ದುಪಡಿ ಮಾಡಬೇಕು,ಅನೇಕ ಇಲಾಖೆಯ ಹಂತ ಹಂತವಾಗಿ ಬಡ್ತಿ ನೀಡುವ ಪ್ರಕ್ರೀಯೆಯು ಜರುತ್ತದೆ ಆದರೆ ನಮ್ಮ ಇಲಾಖೆಯಲ್ಲಿ ಸಿಗುವ ಮುಖ್ಯೋಪಾಧ್ಯಾಯರ ಬಡ್ತಿಗೂ ಕೂಡಾ ನ್ಯಾಯಾಲಯದಲ್ಲಿ  ದಾವೆ ಇರಿವುದರಿಂದ ಅದರಿಂದ ಕೂಡಾ ಶಿಕ್ಷಕರು ವಂಚಿತರಾಗಿದ್ದಾರೆ,ಪ್ರಾಥಮಿಕ ಶಾಲಾ ಶಿಕ್ಷಕರಿ ನ್ಯಾಯ ಒದಗಿಸಿ ಕೊಡುವಂತೆ ಮನವಿ ಸಲ್ಲಿಸಲಾಯಿತು.

Advertisement

ಮನವಿ ಸ್ವೀಕರಿಸಿದ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕರಯ್ಯಾ.ಟಿ.ಎಸ್.ಮಾತನಾಡಿ,ಬೇಡಿಕೆಗಳು ನ್ಯಾಯುತವಾಗಿದ್ದು,ಅವುಗಳನ್ನು ಸರಕಾರಕ್ಕೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಈ ಸಮಯದಲ್ಲಿ ವಿಕಲಚೇತನ ನೌಕರರ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ,ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪ್ರಕಾಶ ತಗಡಿನಮನಿ,ಅಕ್ಷರ ದಾಸೋಹದ ತಾಲೂಕ ಅಧಿಕಾರಿ ಹನುಮಂತಪ್ಪ, ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ, ಕಾರ್ಯದರ್ಶಿ ಮಂಜುನಾಥ.ಬಿ.,ಕೊಪ್ಪಳ ತಾಲೂಕ ಅಧ್ಯಕ್ಷರಾದ ಹೊಳಿಬಸಯ್ಯಾ,ಕಾರ್ಯದರ್ಶಿ ಬಾಳಪ್ಪ ಕಾಳೆ,ನಿಕಟಪೂರ್ವ ಅಧ್ಯಕ್ಷರಾದ ಪ್ರಾಣೇಶ ಪೂಜಾರ,ಪತ್ತಿನ ಸಂಘದ ಅಧ್ಯಕ್ಷರಾದ ವಿರೇಶ ಅರಳಿಕಟ್ಟಿ,ಕಾಶಿನಾಥ ಸಿರಿಗೇರಿ, ಮುಂತಾದವರು ಹಾಜರಿದ್ದರು.

Tags :
Advertisement