Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನೆಮ್ಮದಿಯಿಂದ ಇರಲು ದೇಶದ ಗಡಿ ಕಾಯುವ ಸೈನಿಕರು ಕಾರಣ: ಜಿ.ಹೆಚ್.ತಿಪ್ಪಾರೆಡ್ಡಿ

05:18 PM Jul 26, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜು 26:  ದೇಶದ ಒಳಗಡೆ ನಾವುಗಳು ನೆಮ್ಮದಿಯಿಂದ ಇರಲು ದೇಶದ ಗಡಿ ಪ್ರದೇಶದಲ್ಲಿ ಕಾವಲು ಕಾಯುತ್ತಿರುವ ಸ್ಥನಿಕರು ಕಾರಣವಾಗಿದ್ದಾರೆ, ಇವರ ಕಾರ್ಯವನ್ನು ಎಷ್ಟು ಸ್ಮರಣೆ ಮಾಡಿದರು ಸಾಲದು ಎಂದು ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಸ್ಮರಣೆ ಮಾಡಿದರು.

Advertisement

ಚಿತ್ರದುರ್ಗ ನಗರದ ಮದಕರಿ ವೃತ್ತದಲ್ಲಿನ ವೈದ್ಯಕೀಯ ಸಭಾಂಗಣದಲ್ಲಿ ಶುಕ್ರವಾರ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕ ಹಾಗೂ ಚಿತ್ರದುರ್ಗ ಮಾಜಿ ಸೈನಿಕರ ಕ್ಷೇಮಾಭೀವೃದ್ದಿ ಸಂಘದ ಆಶ್ರಯದಲ್ಲಿ ನಡೆದ 25 ನೇ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವದ ಅಂಗವಾಗಿ ಹುತ್ಮಾತರ ಗೌರವಾರ್ಥವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಗಿಲ್ ಯುದ್ದದಲ್ಲಿ ನಮ್ಮ ಸೈನಿಕರು ಮಾಡಿದ ಸಾಹಸವನ್ನು ನಾವುಗಳು ಮೆಚ್ಚಲೇ ಬೇಕಿದೆ. ಅವರು ಪರಿಶ್ರಮದಿಂದ ಹೋರಾಟವನ್ನು ಮಾಡದಿದ್ದರೆ ನಾವು ಜಯಗಳಿಸಲು ಸಾಧ್ಯವಾಗುತ್ತಿಲ್ಲ, ಇಂದಿನ ದಿನವನ್ನು ನೆನೆದರೆ ಒಂದು ಕಡೆಯಲ್ಲಿ ಸಂತೋಷವಾಗುತ್ತದೆ ಮತ್ತೊಂದು ಕಡೆಯಲ್ಲಿ ದುಃಖವಾಗುತ್ತದೆ, ಗಡಿ ಪ್ರದೇಶದಲ್ಲಿ ನಮ್ಮ ಸೈನಿಕರು ಪಡುವ ಕಷ್ಠವನ್ನು ನಾನು ಕಣ್ಣಾರೆ ನೋಡಿದ್ದೇನೆ, ಒಂದು ಕಿ.ಮೀಗೆ ಒಬ್ಬರಂತೆ ಗಡಿ ಪ್ರದೇಶವನ್ನು ಕಾಯುತ್ತಾರೆ, ಕೂರೆಯುವ ಚಳಿಯಲ್ಲಿಯೂ ಸಹಾ ದೇಶಕ್ಕಾಗಿ ನಮ್ಮ ಪ್ರಾಣವನ್ನೇ ನೀಡುತ್ತಾರೆ. ಆದರೆ ಯುದ್ದವಾದಾಗ ಮಾತ್ರ ನಿರಾಪರಾಧಿಗಳು ಸಾವನ್ನು ಅಪ್ಪುತ್ತಾರೆ. ಇದು ದುಃಖ ವಿಷಯವಾಗಿದೆ ಎಂದರು.

Advertisement

ಸೈನಿಕರು ತಮ್ಮ ಸುಖವನ್ನು ತ್ಯಾಗ ಮಾಡುವುದರ ಮೂಲಕ ದೇಶವನ್ನು ಶತೃಗಳಿಂದ ರಕ್ಷಣೆ ಮಾಡುತ್ತಿದ್ದಾರೆ. ಇದರಲ್ಲಿ ಮಡಿದ ಯೋಧನ ಮೃತ ದೇಹವನ್ನು ಪಡೆಯುವಾಗ ದುಃಖ ಬರುತ್ತದೆ. ಮನೆಯಲ್ಲಿ ಕಷ್ಠ ಇದ್ದರೂ ಸಹಾ ಸೈನ್ಯಕ್ಕೆ ಸೇರುವುದರ ಮೂಲಕ ದೇಶವನ್ನು ಕಾಯುವ ಕಾರ್ಯವನ್ನು ಮಾಡುತ್ತಿದ್ದಾರೆ, ಮನೆಯಲ್ಲಿ ತಂದೆ, ತಾಯಿಯವರ ರಕ್ಷಣೆ ಅಕ್ಕ-ತಂಗಿ, ತಮ್ಮರವರ ಸಲಹುವಿಕೆಯ ಭಾರವನ್ನು ಹೋತ್ತಿರುತ್ತಾರೆ. ಸೈನಿಕನಾಗಿ ಮನೆಯಲ್ಲಿನ ಕಷ್ಠವನ್ನು ಮರೆಯವುದರ ಮೂಲಕ ದೇಶದ ರಕ್ಷಣೆಯಲ್ಲಿ ತೊಡಗುತ್ತಾರೆ. ಕಳೆದ ೫೦-೬೦ ವರ್ಷಗಳಿಂದ ಸೈನಿಕರಿಗೆ ಸರಿಯಾದ ಸೌಲಭ್ಯ ಇರಲಿಲ್ಲ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಇವರಿಗೆ ವಿವಿಧ ರೀತಿಯ ಸೌಲಭ್ಯಗಳು ದೂರಕುತ್ತಿವೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ನಮ್ಮ ದೇಶದ ಹಲವಾರು ಕಡೆಯಲ್ಲಿ ನೆರೆ ದೇಶ ಪಾಕಿಸ್ತಾನ ಜಾಗವನ್ನು ಆಕ್ರಮಿಸಿದೆ ಇದನ್ನು ಮೋದಿ ಸರ್ಕಾರ ತಮ್ಮ ಸೈನಿಕರ ಮೂಲಕ ವಾಪಸ್ಸು ಪಡೆಯಬೇಕಿದೆ. ಗಡಿ ಪ್ರದೇಶವನ್ನು ಮತ್ತಷ್ಟು ಬಲಗೊಳಿಸಬೇಕಿದೆ. ಸೈನಿಕರಿಗೆ ಅಧುನಿಕ ಶಸ್ತ್ರಾಸ್ತಗಳನ್ನು ನೀಡುವುದರ ಮೂಲಕ ಅವರಿಗೆ ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು.

ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಕುಮಾರಸ್ವಾಮಿ ಮಾತನಾಡಿ, ಗಡಿ ಪ್ರದೇಶದಲ್ಲಿ ಸೈನಿಕರು ರಕ್ಷಣೆಯನ್ನು ಮಾಡುತ್ತಿರುವುದರಿಂದ ದೇಶದ ಒಳಗಡೆ ನಾವುಗಳು ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ. ದೇಶದ ಜನತೆಗಾಗಿ ಸೈನಿಕರು ತಮ್ಮ ಪ್ರಾಣವನ್ನು ಸಹಾ ನೀಡುತ್ತಿದ್ದಾರೆ. ಸೈನಿಕರಿಗೆ ಗೌರವ ಸ್ಥಾನವನ್ನು ನೀಡಬೇಕಿದೆ. ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅತಿ ಮುಖ್ಯವಾಗಿದೆ.  ಸರ್ಕಾರವೂ ಸಹಾ ಇವರಿಗೆ ಸ್ಪಂದಿಸುತ್ತಿದೆ. ಇವರಿಗೆ ಇನ್ನೂ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಬೇಕಿದೆ ಸೈನಿಕರು ಎಂತಹ ಕಷ್ಠದ ಸಮಯದಲ್ಲಿಯೂ ಸಹಾ ದೇಶಕ್ಕಾಗಿ ಕೆಲಸವನ್ನು ಮಾಡುತ್ತಿದ್ದಾರೆ, ನಾವುಗಳು ದೇಶದ ಒಳಗಡೆಯಲ್ಲಿ ರಕ್ಷಣೆಯ ಕಾರ್ಯವನ್ನು ಮಾಡಿದರೆ ಸೈನಿಕರು ದೇಶದ ಗಡಿ ಪ್ರದೇಶದಲ್ಲಿ ದೇಶವನ್ನು ಕಾಯುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಚಿತ್ರದುರ್ಗ ಮಾಜಿ ಸೈನಿಕರ ಕ್ಷೇಮಾಭೀವೃದ್ದಿ ಸಂಘದ ಅಧ್ಯಕ್ಷರು, ಮಾಜಿ ಸೈನಿಕರಾದ ಸತ್ಯನಾರಾಯಣ ರೆಡ್ಡಿ ಮಾತನಾಡಿ,  ಕಾರ್ಗಿಲ್ ವಿಜಯೋತ್ಸವವು ಒಂದು ಕಡೆಯಲ್ಲಿ ಸಂತೋಷವನ್ನು ತಂದರೆ ಮತ್ತೊಂದು ಕಡೆಯಲ್ಲಿ ದುಃಖವನ್ನು ತರುತ್ತದೆ. ಈ ಯುದ್ದದಲ್ಲಿ ನಾವುಗಳು ವಿಜಯಯಾಗಿದ್ದೇವೆ ಎಂದು ಸಂತೋಷವನ್ನು ಪಡಬೇಕೊ ಅಥವಾ ಇದರಲ್ಲಿ ನಮ್ಮ ಹಲವಾರು ಸೈನಿಕರನ್ನು ಕಳೆದುಕೊಂಡಿದ್ದೇವೆ ಎಂದು ದುಃಖ ಪಡಬೇಕೋ ತಿಳಿಯದಾಗಿದೆ. ಯುದ್ದದಲ್ಲಿಒ ಗೆಲುವುದರ ಮೂಲಕ ಭಾರಾತಂಭೆಗೆ ಕೀರಿಟವನ್ನು ನೀಡಲಾಗಿದೆ. ಇಷ್ಠಲ್ಲಾ ಕೆಲಸವನ್ನು ಮಾಡಿದರು ಸಹಾ ಸೈನಿಕನಿಗೆ ಸರ್ಕಾರದಿಂದ ಸಿಗುವಂತ ಮಾರ್ಯದೆ ಇಲ್ಲವಾಗಿದೆ, ನಮಗೆ ವಿವಿಧ ರೀತಿಯ ರ್ಸಲಭ್ಯಗಳನ್ನು ನೀಡುವುದಾಗಿ ಬರೀನ ಪುಸ್ತಕ, ಬರವಣಿಗೆಯಲ್ಲಿ ಮಾತ್ರ ಇದೆ ಹೊರೆತು ಅದು ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ವಿಷಾಧಿಸಿದರು.

ಚಿತ್ರದುರ್ಗದಲ್ಲಿ ಮಾಜಿ ಸೈನಿಕರಿಗೆ ಸಭೆಯನ್ನು ಮಾಡಲು ನಿಖರವಾದ ಸ್ಥಳ ಇಲ್ಲವಾಗಿದೆ ಇದರ ಬಗ್ಗೆ ಸರ್ಕಾರ, ಮುಖ್ಯಮಂತ್ರಿಗಳು, ಜಿಲ್ಲಾಡಳಿತ, ಸಚಿವರು, ಶಾಸಕರನ್ನು ಕಂಡು ಬೇಟಿ ಮನವಿ ಮಾಡಿದರೂ ಸಹಾ ಯಾವುದೇ ಪ್ರಯೋಜನವಾಗಿಲ್ಲ, ದೇಶವನ್ನು ಬ್ರಿಟಿಷರಿಂದ ಸ್ವಾತಂತ್ರ್ಯಗೊಳಿಸುವಲ್ಲಿ ಅಂದಿನ ಹೋರಾಟಗಾರರು ಎಷ್ಟು ಮುಖ್ಯವೂ ಅಷ್ಠೇ ಪ್ರಮಾಣದಲ್ಲಿ ಈಗ ದೇಶವನ್ನು ಕಾಯುತ್ತಿರುವ ಸೈನಿಕರು ಸಹಾ ಅಷ್ಟೇ ಪ್ರಮಾಣದಲ್ಲಿ ಪ್ರಮುಖರಾಗಿದ್ದಾರೆ. ಸರ್ಕಾರಕ್ಕೆ ನಮ್ಮ ಬಗ್ಗೆ ಕಾಳಜಿ ಇಲ್ಲವಾಗಿದೆ, ಚಿತ್ರದುರ್ಗದಲ್ಲಿ ಮಾಜಿ ಸೈನಿಕರಿಗಾಗಿ ಒಂದು ಜಾಗವನ್ನು ನೀಡುವಂತೆ ಹಲವಾರು ಮನವಿ ಮಾಡಿದ್ದರೂ ಸಹಾ ಅದರ ಬಗ್ಗೆ ಗಮನ ನೀಡಿಲ್ಲ,  ಈಗ ಇರುವ ವೀರಸೌಧವನ್ನು ನಮಗೆ ನೀಡಿದರೆ ಸರ್ಕಾರದಿಂಧ ಯಾವುದೇ ಸಹಾಯವನ್ನು ಆಪೇಕ್ಷಿಸದೇ ನಾವೇ ನಿರ್ವಹಣೇ ಮಾಡುತ್ತವೆ ಅಲ್ಲದೆ ಸೈನ್ಯಕ್ಕೆ ಸೇರುವ ಯು ಪಿಳೀಗೆಗೆ ತರಬೇತಿ ಮತ್ತು ಸಹಾಯವನ್ನು ಸಹಾ ಮಾಡಲಾಗುವುದು. ಅಲ್ಲದೆ ರೈತರಿಗೂ ಸಹಾ ವಿವಿಧ ರೀತಿಯಲ್ಲಿ ನೆರವಾಗುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ನಿವೃತ್ತ ಸೈನಿಕರಾದ ಮಹೇಶ್ವರಪ್ಪ ಮಾತನಾಡಿದರು. ಸಮಾರಂಭದಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪಾಲಯ್ಯ ಆರ್ ಕಾಲುವೆಹಳ್ಳಿ ಬಿಜೆಪಿಯ ಮಲ್ಲಿಕಾರ್ಜುನ, ನವೀನ್ ಚಾಲುಕ್ಯ, ಸಂಪತ್ ಕುಮಾರ್,  ಚಂದುಶೇಖರ್ ವಿ ಎಸ್ ಹಳ್ಳಿ, ಸಂದೀಪ್ ಸಿರಿಗೆರೆ, ಆದರ್ಶ ಎಂ, ಮಾಜಿ ಸೈನಿಕರಾದ ಕೃಷ್ಣಾರೆಡ್ಡಿ, ನಾರಾಯಣ, ಸೈಯದ್ ಜಾಕಿರ್,  ಉಪಸ್ಥಿತೆರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ದದಲ್ಲಿ ವೀರ ಮರಣವನ್ನಪ್ಪಿದ.  720  ಸೈನಿಕರಿಗೆ ಒಂದು ನಿಮಿಷ ಮೌನ ಆಚರಿಸಲಾಯಿತು. ಸಮಾರಂಭದಲ್ಲಿ  ಸೂರಯ್ಯ  ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ ವಂದಿಸಿದರು.

Advertisement
Tags :
bengaluruchitradurgacountry's bordersG h ThippareddySoldiers guardingsuddionesuddione newsಚಿತ್ರದುರ್ಗಜಿ.ಹೆಚ್. ತಿಪ್ಪಾರೆಡ್ಡಿದೇಶದ ಗಡಿನೆಮ್ಮದಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಸೈನಿಕರು
Advertisement
Next Article