For the best experience, open
https://m.suddione.com
on your mobile browser.
Advertisement

ಮಹಿಳೆ ಆರ್ಥಿಕ ಸ್ವಾವಲಂಬಿಯಾಗಿರುವುದರಿಂದ ಸಾಮಾಜಿಕ ಪರಿಸ್ಥಿತಿ ಸುಧಾರಿಸಿದೆ : ಶ್ರೀಮತಿ ಶಶಿಕಲಾ ರವಿಶಂಕರ್

12:40 PM Mar 19, 2024 IST | suddionenews
ಮಹಿಳೆ ಆರ್ಥಿಕ ಸ್ವಾವಲಂಬಿಯಾಗಿರುವುದರಿಂದ ಸಾಮಾಜಿಕ ಪರಿಸ್ಥಿತಿ ಸುಧಾರಿಸಿದೆ   ಶ್ರೀಮತಿ ಶಶಿಕಲಾ ರವಿಶಂಕರ್
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಮಾ.19 :  ಪುರಾಣ ಕಾಲದಿಂದಲೂ ಸಹಾ ಮಹಿಳೆ ಶೋಷಣೆಗೆ ಒಳಗಾಗುತ್ತಿದ್ದಾಳೆ, ಅದು ಇಂದಿಗೂ ಸಹಾ ತಪ್ಪಿಲ್ಲ, ಈಗಲೂ ಸಹಾ ಮಹಿಳೆ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶಶಿಕಲಾ ರವಿಶಂಕರ್ ಅಭಿಪ್ರಾಯಪಟ್ಟಿದ್ದಾರೆ. 

Advertisement

ಜಿಲ್ಲಾ ಲಿಂಗಾಯತ ಶಿವಶಿಂಪಿ ಮಹಿಳಾ ಘಟಕದವತಿಯಿಂದ ಶಿವಶಿಂಪಿ ಮಹಿಳಾ ಸಂಭ್ರಮದ ಅಂಗವಾಗಿ ಸೋಮವಾರ ಸಂಜೆ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಹಿಳೆ ಸಮರ್ಥ ಸಾಂಸ್ಕೃತಿಕ ರಾಯಭಾರಿ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ವೈಚಾರಿಕವಾಗಿ ಮಹಿಳೆ ಪ್ರಬುದ್ದತೆ ಪ್ರೌಢತ್ಯೆಯನ್ನು ಬೆಳಿಸಿಕೊಂಡು ಮಾತನಾಡುವ ಮಾತುಗಳು ಮಹಿಳೆಯರಿಗೆ ದಾರಿ ದೀಪವಾಗಲಿವೆ. ಇದಕ್ಕಿಂತ ಒಳ್ಳೆಯ ಕೆಲಸ ಬೇರೆ ಇಲ್ಲ ಎನ್ನಿಸುತ್ತದೆ.

ಚಿತ್ರದುರ್ಗದ ಶಿವಶಿಂಪಿ ಮಹಿಳಾ ಘಟಕದಲ್ಲಿ ಶಿಕ್ಷಣ, ಆರ್ಥಿಕ, ಸಾಮಾಜಿಕವಾಗಿ ಯಾವುದೇ ಕೊರತೆ ಇಲ್ಲ ನೀವುಗಳ ಆಬಲೆಯರಲ್ಲ ಸಬಲೆಯರಾಗಿದ್ದೀರಾ, ಸಮಾಜ ಮುಖಿಯಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತಿರುವ ಉತ್ತಮವಾಗಿದೆ. ಇಲ್ಲಿ ಹಿರಿಯರು ಕಿರಿಯರು ಎನ್ನದೆ ಎಲ್ಲರು ಸೇರಿಕೊಂಡು ಸಮಾಜವನ್ನು ಮುನ್ನಡೆಸುವ ಕಾರ್ಯವನ್ನು ಮಾಡುತ್ತಿರುವುದು ತುಂಬಾ ಶ್ಲಾಘನೀಯವಾದದು ಎಂದರು.

ನಮ್ಮ ಪಕ್ಕದಲ್ಲಿಯೇ ಶೋಷಣೆಗೆ ಒಳಗಾದವರನ್ನು ಮರೆಯವ ಹಾಗಿಲ್ಲ, ಮಹಿಳೆಯರು ಚನ್ನಾಗಿ ಇದ್ದಾರೆ ಎನ್ನುವುದು ಮಾತ್ರ ಆದರೆ ನಮ್ಮಲ್ಲಿ ಶೋಷಿತ ವರ್ಗ ನಮ್ಮಲ್ಲಿ ಇದೆ. ಮಹಿಳೆಯರ ಮೇಲೆ ಅನ್ಯಾಯವಾಗುತ್ತಿರುವುದ ಇಂದಿನ ಕಥೆಯಲ್ಲ, ಹಿಂದಿನಿಂದಲೂ ನಡೆದು ಕೊಂಡೆ ಬಂದಿದೆ. ಸೀತೆ, ಅಂಬೆ, ಮಾಧವಿ ಎಲ್ಲರು ಸಹಾ ಶೋಷಣೆಗೆ ಬಳಗಾದವರೇ ಮಹಿಳೆಯರು ತಮಗೆ ಆದ ಅನ್ಯಾಯವನ್ನು ಮೌನವಾಗಿಯೇ ಅನುಭವಿಸುತ್ತಾರೆ, ಮಹಿಳೆಯರಲ್ಲಿ ಪ್ರತಿಭಟನೆ ಎನ್ನುವುದು ವಿಶೇಷವಾದ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಆದರೆ ಸಮಾಜ ಅದನ್ನು ಬೇರೆ ರೀತಿಯಲ್ಲಿ ವಿಶೇಷಣೆ ಮಾಡುತ್ತಿದೆ.

ಇದಕ್ಕೆ ಸಮಾಜಯಿಷಿಯನ್ನು ನೀಡುತ್ತಿದೆ. ಇದು ಸಮಾಜವಾಗಿದೆ. ಪುರಾಣ ಕಾಲದಿಂದಲೂ ಸಹಾ ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿದೆ ಅದು ಇಂದಿಗೂ ಸಹಾ ನಿಂತಿಲ್ಲ, ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಮಹೀಳೆಯ ಮೇಲೆ ಪುರುಷರು ಮಾಡಿದ ತಪ್ಪನ್ನು ಮುಚ್ಚುವ ಸಲುವಾಗಿ ಪುರಾಣಗಳಲ್ಲಿ ವಿಶೇಷ ರೀತಿಯಲ್ಲಿ ಮಹಿಳೆಯನ್ನು ಅಥೈಸಲಾಗುತ್ತಿದೆ ಎಂದರು.

ಇಂದಿನ ದಿನಮಾನದಲ್ಲಿ ಮಹಿಳೆ ಶಿಕ್ಷಣ, ಉದ್ಯೋಗ ಎನ್ನವುದು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಮೂಲಕ ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸಲಾಗುತ್ತಿದೆ. ಅದರೆ ಇದು ಎಷ್ಟರ ಮಟ್ಟಿಗೆ ಎನ್ನುವುದು ಪ್ರಶ್ನೆಯಾಗಿದೆ. ಹಿಂದಿನ ಕಾಲದಲ್ಲಿ ಉದ್ಯೋಗಸ್ಥ ಮಹಿಳೆಯ ಸಂಖ್ಯೆ ಕಡಿಮೆ ಇತ್ತು ಆದರೆ ಈಗ ಅದರ ಪ್ರಮಾಣ ಜಾಸ್ತಿಯಾಗಿದೆ. ಇಂದಿನ ದಿನದಲ್ಲಿ ಉನ್ನತವಾದ ಹುದ್ದೆಗಳನ್ನು ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಶಶಿಕಲಾ ತಿಳಿಸಿದರು.

ಚಿತ್ರದುರ್ಗ ಆಕಾಶವಾಣಿಯ ಸಾಂಧರ್ಬಿಕ ಉದ್ಘೋಷಕರಾದ ಶ್ರೀಮತಿ ದ್ಯಾಮಲಾಂಬಿಕ 12ನೇ ಶತಮಾನದ ವಚನಗಾರ್ತಿಯರ ಬಗ್ಗೆ ಮಾತನಾಡಿ, 12 ನೇ ಶತಮಾನದಲ್ಲಿ ಹೆಣ್ಣು ಗಂಡು ಎನ್ನುವ ಬೇದ ಇಲ್ಲದೆ ಎಲ್ಲರನ್ನು ಸಮಾನವಾಗಿ ಕಂಡವರು ನಮ್ಮ ಶರಣರು, ಇಬ್ರು ಒಂದೇ ಎನ್ನುವುದರ ಮೂಲಕ ಇಬ್ಬರಿಗೂ ಸಮಾನವಾದ ಸ್ಥಾನವನ್ನು ನೀಡಿದ್ದಾರೆ. ಅನುಭವ ಮಂಟಪದಲ್ಲಿ ಅಕ್ಕ ಮಹಾದೇವಿಯನ್ನು ಅಲ್ಲಮ ವಿವಿಧ ರೀತಿ ಪ್ರಶ್ನೆಗಳನ್ನು ಕೇಳುವುದರ ಮೂಲಕ ಪರೀಕ್ಷೆ ಮಾಡುವುದರ ಮೂಲಕ ಅನುಭವ ಮಂಟಪದಲ್ಲಿ ಸ್ಥಾನವನ್ನು ನೀಡುತ್ತಾರೆ. ಅಲ್ಲಮರ ಪ್ರಶ್ನೆಗೆ ತಕ್ಕ ಉತ್ತರವನ್ನು ನೀಡುವುದರ ಮೂಲಕ ತನ್ನ ತನವನ್ನು ಪ್ರದರ್ಶಿಸಿದ್ದಾಳೆ ಎಂದರು.

ಶರಣರ ಕಾಲದಲ್ಲಿ ವಚನಗಾರರು ಮತ್ತು ವಚನಗಾರ್ತಿಯರು ಸಮಾನವಾಗಿ ಕೆಲಸವನ್ನು ಮಾಡುವುದರ ಮೂಲಕ ಸಮಾಜವನ್ನು ತಿದ್ದುವಂತ ಕಾರ್ಯವನ್ನು ಮಾಡಿದ್ದಾರೆ, ಈ ಸಮಯದಲ್ಲಿ ಹಲವಾರು ವಚನಗಳು ಹೂರ ಬರುವುದರ ಮೂಲಕ ಇಂದಿನ ದಿನಮಾನಕ್ಕೆ ಸಮಾಜಕ್ಕೆ ದಾರಿ ದೀಪವಾಗಿದೆ. ೧೨ನೇ ಶತಮಾನದಲ್ಲಿ ಶರಣರು ನೀಡಿದ ವಚನಗಳು ನಮ್ಮನ್ನು ಸರಿದಾರಿಗೆ ಕರೆದುಕೊಂಡು ಹೋಗುತ್ತವೆ. ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಳಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಲಿಂಗಾಯತ ಶಿವಶಿಂಪಿ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾ ಮುರುಗೇಶ್ ವಹಿಸಿದ್ದರು. ಘಟಕದ ಕಾರ್ಯದರ್ಶಿ ಶ್ರೀಮತಿ ಕವಿತಾ ಪಂಪಾಪತಿ ಆಗಮಿಸಿದ್ದರು.

ಸಮಾರಂಭದ ನಂತರ ಮಹಿಳೆಯರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಗೂ ಇತ್ತಿಚೆಗೆ ನಡೆದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಶ್ರೀಮತಿ ಶೈಲಜಾ ವಿಜಯಕುಮರ್ ಪ್ರಾರ್ಥಿಸಿದರು, ಶ್ರೀಮತಿ ನಿರ್ಮಲ ಬಸವರಾಜು ಸ್ವಾಗತಿಸಿದರು, ಶ್ರೀಮತಿ ಕವಿತಾ ಸುರೇಶ್ ಪ್ರಸ್ತಾವಿಕವಾಗಿ ಮಾತನಾಡಿದರೆ, ಘಟಕದ ಕಾರ್ಯದರ್ಶಿ ಶ್ರೀಮತಿ ಕವಿತಾ ಪಂಪಾಪತಿ ವಾರ್ಷಿಕ ವರದಿಯನ್ನು ಮಂಡಿಸಿದರು. ಶ್ರೀಮತಿ ನಂದಾ ಬಕ್ಕೇಶ್ ವಂದಿಸಿದರು, ಶ್ರೀಮತಿ ಅನ್ನಪೂರ್ಣ ವಿಜಯಕುಮಾರ್, ಹಾಗೂ ಶೈಲಜಾ ಉಮಾಮಹೇಶ್ವರಪ್ಪ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
Advertisement