For the best experience, open
https://m.suddione.com
on your mobile browser.
Advertisement

ಚಿತ್ರದುರ್ಗಕ್ಕೆ ನೀರು ಬರಲು ಎಸ್.ಎಂ.ಕೃಷ್ಣರವರ ಕೊಡುಗೆ ಅಪಾರ : ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

04:37 PM Dec 10, 2024 IST | suddionenews
ಚಿತ್ರದುರ್ಗಕ್ಕೆ ನೀರು ಬರಲು ಎಸ್ ಎಂ ಕೃಷ್ಣರವರ ಕೊಡುಗೆ ಅಪಾರ   ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 10 : ಒಂದು ಕಾಲದಲ್ಲಿ ನೀರಿಗೆ ಹಾಹಾಕಾರವಿದ್ದ ಚಿತ್ರದುರ್ಗದಲ್ಲಿ ಈಗ ಯಥೇಚ್ಚವಾಗಿ ನೀರು ಹರಿಯುತ್ತಿದೆ ಎಂದರೆ ಅದಕ್ಕೆ ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣರವರ ಕೊಡುಗೆ ಅಪಾರವೆಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸ್ಮರಿಸಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಎಸ್.ಎಂ.ಕೃಷ್ಣರವರ ನಿಧನದಿಂದ ಅತೀವ ನೊವಾಗಿದೆ. ವಿದೇಶದಲ್ಲಿ ಶಿಕ್ಷಣ ಪಡೆದು ಹಿರಿಯ ಮುತ್ಸದಿ ರಾಜಕಾರಣಿಯಾಗಿದ್ದ ಎಸ್.ಎಂ.ಕೃಷ್ಣ ವಿಧಾನಸಭೆ, ವಿಧಾನಪರಿಷತ್, ರಾಜ್ಯಸಭೆ ಪ್ರವೇಶಿಸಿದ ಮಹಾನ್ ನಾಯಕ. ವಿದೇಶಾಂಗ ಸಚಿವರಾಗಿ
ರಾಜ್ಯಪಾಲರಾಗಿದ್ದ ಅವರು ಕೇಂದ್ರ ಕೈಗಾರಿಕಾ ಮಂತ್ರಿಯಾಗಿದ್ದಾಗ ಮೈಸೂರು, ಮಂಡ್ಯದಲ್ಲಿ ಕಾರ್ಖಾನೆ ಆರಂಭಿಸಿದರು. ಕೇಂದ್ರ ಹಣಕಾಸು ಸಚಿವರಾಗಿಯೂ ರಾಜಕಾರಣದಲ್ಲಿ ಅವಿರತ ಸೇವೆ ಸಲ್ಲಿಸಿದ್ದಾರೆಂದು ಗುಣಗಾನ ಮಾಡಿದರು.

1995 ರಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಪಕ್ಷಕ್ಕೆ ಶಕ್ತಿ ತುಂಬಿದರು. ಕಾಡುಗಳ್ಳ ವೀರಪ್ಪನ್ ಅಪಹರಣವಾದಾಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣರವರನ್ನು ದೆಹಲಿಯಲ್ಲಿ ಭೇಟಿಯಾಗಿ ಚಿತ್ರದುರ್ಗದಲ್ಲಿ ಕುಡಿಯುವ ನೀರಿಗೆ ಭೀಕರ ಸಮಸ್ಯೆಯಿದೆ ಎಂದು ಮನವರಿಕೆ ಮಾಡಿದಾಗ ಕ್ಯಾಬಿನೆಟ್‍ನಲ್ಲಿ 90 ಕೋಟಿ ರೂ.ಗಳನ್ನು ಮಂಜೂರು ಮಾಡಿದ ಫಲವಾಗಿ ದುರ್ಗದಲ್ಲಿ ನೀರಿನ ಸಮಸ್ಯೆ ಬಗೆಹರಿದಿದೆ. ರಾಜಕಾರಣಕ್ಕೆ ಬರುವ ಮುನ್ನ ಪ್ರೊಫೆಸರ್ ಆಗಿದ್ದರೆಂದು ಜಿ.ಹೆಚ್.ತಿಪ್ಪಾರೆಡ್ಡಿ ನೆನಪಿಸಿಕೊಂಡರು.

Tags :
Advertisement