ನೀಟ್ ಪರೀಕ್ಷೆಯಲ್ಲಿ ಎಸ್.ಎಲ್.ವಿ. ಪಿ.ಯು.ಕಾಲೇಜಿನ 64 ವಿದ್ಯಾರ್ಥಿಗಳು ಆಯ್ಕೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂ.06 : ವೈದ್ಯಕೀಯ ಕೋರ್ಸ್‍ಗಳ ಆಯ್ಕೆಗೆ 2024 ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಎಸ್.ಎಲ್.ವಿ. ಪಿ.ಯು.ಕಾಲೇಜಿನ ಒಟ್ಟು 64 ವಿದ್ಯಾರ್ಥಿಗಳು ಕೋರ್ಸ್‍ಗೆ ಆಯ್ಕೆ ಪಡೆದಿದ್ದಾರೆ.
ದೈವಿಕ್ ಡಿ.ಕುಮಾರ್ 584 ಅಂಕಗಳನ್ನು ಗಳಿಸಿ ಆಲ್ ಇಂಡಿಯಾದಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಮಾನಸ ಎಂ.ವಿ. ಸ್ನೇಹ ಕೆ. ಕುಲದೀಪ್‍ಸಿಂಗ್, ಪವನ್ ಕೆ. ಶ್ರೀರಕ್ಷಾ, ಲಿಖಿತ್, ತ್ರಿಪುರಾಂಭ ಇನ್ನಿತರೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಹೆಚ್.ಚಂದ್ರಕಲಾ
ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್, ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಆಂಟೋನಿ ಮ್ಯಾಥ್ಯೂ, ಸಂಯೋಜಕ ಕೆ.ಟಿ.ಕೊಟ್ರೇಶ್, ಎಸ್.ಎಲ್.ವಿ. ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ಯು.ಕೇಶವಮೂರ್ತಿ ಇವರುಗಳು ಅಭಿನಂದಿಸಿದ್ದಾರೆ.