Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೇಲೆ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ : ಪ್ರಭಂಜನ ಆರೋಪ

05:41 PM Apr 19, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಏ.19 : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದ ನಿರಂತರವಾಗಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣದ ಪ್ರಾಂತ ಸಂಯೋಜಕ ಪ್ರಭಂಜನ ಆರೋಪಿಸಿದ್ದಾರೆ.

Advertisement

ಈ ಬಗ್ಗೆ ಹೇಳಿಕೆಯನ್ನು ನೀಡಿರುವವ ಅವರು, ಬೆಂಗಳೂರಿನ ನಗರ್ತಾರ್  ಪೇಟೆಯಲ್ಲಿ  ಹನುಮಾನ್ ಚಾಲೀಸಾ ಹಾಕಿದ್ದಾರೆಂದು ಕೆಲವು ಮುಸ್ಲಿಂ ಯುವಕರು ಅಂಗಡಿಗೆ ನುಗ್ಗಿ  ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಅದೇ ರೀತಿ ಬೆಂಗಳೂರಿನ ಬನಶಂಕರಿಯ ಪ್ರಗತಿಪುರದಲ್ಲಿ ಕೆಲವು ಮುಸಲ್ಮಾನ ಯುವಕರು ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೊಟ ಮಾಡಿ 42 ದಿನಗಳ ಕಾಲ ತಲೆ ಮರಿಸಿಕೊಂಡು ಇದ್ದ ಭಯೋತ್ಪದಕರ ಬೆನ್ನಿಗೆ ನಿಂತವರು ಯಾರು ಎಂಬುದು ಯೋಚನೆ ಮಾಡಬೇಕು ಎಂದಿದ್ದಾರೆ.

ದಾವಣಗೆರೆಯ ಚೆನ್ನಗಿರಿ ತಾಲೂಕಿನಲ್ಲಿ ರಾಮನವಮಿ ಮಾಡಬೇಕಾದರೆ ಮುಸಲ್ಮಾನ ಯುವಕರು ವಿರೋಧ ಮಾಡಿ ಹಲ್ಲೆ  ಮಾಡಿದ್ದಾರೆ,ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಕಾರ್‍ನಲ್ಲಿ ಬರುತ್ತಿರುವವರು ಹಿಂದೂ ಅಂತ ಗೊತ್ತಾದ ತಕ್ಷಣ ಗಾಂಜಾ ಮತ್ತಿನಲ್ಲಿ ಇದ್ದ ಮುಸ್ಲಿಂ ಗುಂಡಾಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಮೇಲಿನ ಎಲ್ಲಾ ಘಟನೆಗಳು  ನಡೆಯಲು ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯೇ ತುಷ್ಟಿಕರಣವೇ ಕಾರಣವಾಗಿದೆ ಎಂದು ದೂರಿದ್ದಾರೆ.

ಸರ್ಕಾರದ ಒತ್ತಡದ ಕಾರಣಕ್ಕೆ ಮಣಿದ ಆಡಳಿತ ವ್ಯವಸ್ಥೆ ವಿಶ್ವ ಹಿಂದೂ ಪರಿಷತ್  ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ರಘು ಸಕಲೇಶಪುರ, ಬಜರಂಗದಳ ಕಾರ್ಯಕರ್ತರಾದ  ಶಿವು, ಪುತ್ತೂರು ಸಂಯೋಜಕ ಭರತ್ ಕುಮ್ದೇಲ್ ಮತ್ತು ಸಂತೋಷ್ ತುಂಬೆ, ಮಂಗಳೂರಿನ ಜಯಪ್ರಕಾಶ್ ಚಿಕ್ಕಮಂಗಳೂರು ಜಿಲ್ಲೆಯ ಮಂಜು ತುಡುಕೂರ್  ಇನ್ನು ಮುಂತಾದ ಕಾರ್ಯಕರ್ತರ ಮೇಲೆಮೇಲೆ ಗೂಂಡಾ ಕಾಯ್ದೆ, ಗಡಿಪಾರು ಮಾಡಿ ಹತ್ತಿಕುವ ಕೆಲಸ ಮಾಡುತ್ತಿದೆ ಎಂದರು.

ನಾಚಿಕೆಗೇಡಿನ ಸರ್ಕಾರ ರಾಜ್ಯದ ಶಕ್ತಿ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಅದನ್ನ ಸಮರ್ಥಿಸಿಕೊಳ್ಳುವ ಸರ್ಕಾರಗಳಿಂದ ಏನು ನಿರೀಕ್ಷೆ ಮಾಡಲು ಸಾಧ್ಯ. ನಿನ್ನೆ ಚಿತ್ರದುರ್ಗ ನಗರದಲ್ಲಿ ಉಮೇಶ್ ನಾಯಕ್ ಎಂಬ ಯುವಕ ಜೊತೆಯಾಗಿ ಕೆಲಸ ಮಾಡುವ ಮುಸ್ಲಿಂ ಯುವತಿಯನ್ನು ಮನೆಗೆ ಬಿಡಲು ಬೈಕ್ ನಲ್ಲಿ ಹೋಗುವಾಗ ಮುಸ್ಲಿಂ ಯುವಕರು ಆ ಯುವಕನಿಗೆ ಹಲ್ಲೆ ಮಾಡಿದ್ದಾರೆ. ಎಚ್ಚರಗೊಳ್ಳಿ ಹಿಂದುಗಳೇ ಇಂದು ಕಾಂಗ್ರೆಸ್ ಮಯೆರ್ ಮಗಳಾದ ನೇಹಾ ಎಂಬ ಕಾಲೇಜು ಕಲಿಯುತ್ತಿದ್ದ ಯುವತಿಯನ್ನ ಲವ್ ಜಿಹಾದ್ ಗೆ ಬೀಳಲಿಲ್ಲ ಎಂದು ಸಾರ್ವಜನಿಕವಾಗಿ 9 ಬಾರಿ ಇರಿದು ಕೊಂದ ಫಯಾಜ್ ಯಾವ ಶಕ್ತಿ ಬೆನ್ನ ಹಿಂದೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಪ್ರಭಂಜನ ತಿಳಿಸಿದ್ದಾರೆ.

Advertisement
Tags :
allegationbengaluruchitradurgaCongress governmentHindusPrabhanjansuddionesuddione newsviolenceಅಧಿಕಾರಆರೋಪಕಾಂಗ್ರೆಸ್ ಸರ್ಕಾರಚಿತ್ರದುರ್ಗದೌರ್ಜನ್ಯಪ್ರಭಂಜನಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹಿಂದೂಗಳು
Advertisement
Next Article