Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೊಬ್ಬರಿ ಖರೀದಿಯ ನಿಯಮಾವಳಿ ಸರಳೀಕರಿಸಿ : ರಾಜ್ಯ ರೈತ ಸಂಘ ಒತ್ತಾಯ

05:28 PM Apr 19, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ. 19 : ಕೊಬ್ಬರಿ ಖರೀದಿಯ ನಿಯಮಾವಳಿಯನ್ನು ಸರಳೀಕರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

Advertisement

ಹೊಸದುರ್ಗದಲ್ಲಿ ಕೊಬ್ಬರಿ ಖರೀದಿ ಕೇಂದ್ರವನ್ನು ನಿಲ್ಲಿಸಲಾಗಿದೆ. ಅಲ್ಲದೆ ಈಗಾಗಲೇ ಖರೀದಿಯಾಗಿರುವ ಕೊಬ್ಬರಿಯಲ್ಲಿ 75 ಎಮ್. ಎಮ್. ಗಿಂತ ಕಡಿಮೆ ಗಾತ್ರವಿದೆ ಎಂಬ ಕಾರಣಕ್ಕೆ ಹೊಸದುರ್ಗದಲ್ಲಿ ಖರೀದಿಯಾದ ಕೊಬ್ಬರಿಯಲ್ಲಿ ಮೂರು ಲೋಡು ಲಾರಿ ಕೊಬ್ಬರಿಯನ್ನು ರವಾನೆ ಮಾಡದೆ ನಿಲ್ಲಿಸಿರುತ್ತಾರೆ.

ಇತ್ತೀಚೆಗಿನ ವಾತಾವರಣದ ಏರುಪೇರಿನ ಕಾರಣದಿಂದಾಗಿ ಕೊಬ್ಬರಿಯ ಗಾತ್ರದಲ್ಲಿ ವ್ಯತ್ಯಾಸವಾಗಿದೆ. ಈಗ ಹಾಲಿ ಇರುವ ನಿಯಾಮಾವಳಿಗಳ ಪ್ರಕಾರ ರೈತರ ಶೇಕಡ 50% ರಷ್ಟನ್ನು ಸಹ ರೈತರು ಮಾರಲಾಗುವುದಿಲ್ಲ.  ಅಲ್ಲದೇ ಕೊಬ್ಬರಿ ಆಹಾರೋತ್ಪನ್ನವಾಗಿರುವುದರಿಂದ ಗುಣಮಟ್ಟವನ್ನು ಗಣನೆಗೆ ತಗೆದುಕೊಳ್ಳಬೇಕೇ ಹೊರತು ಗಾತ್ರವನ್ನಲ್ಲ. ಆ ಕಾರಣ ಈಗ ಹಾಲಿ ರೈತರು  ಕೊಬ್ಬರಿಯನ್ನು ಮಾರಲು ಸಿದ್ಧತೆ ನಡೆಸಿದ್ದಾರೆ ಎಂದಿದ್ದಾರೆ.

ಪ್ರತಿವರ್ಷಕ್ಕಿಂತ ಈ ವರ್ಷ 5000 ಟನ್ನು ಕೊಬ್ಬರಿಯನ್ನು ಕಡಿಮೆ ಖರೀದಿ ಮಾಡಲು ತೀರ್ಮಾನಿಸಿರುತ್ತಾರೆ. ಹಾಗೂ ಇನ್ನೀತರೆ ವಿಚಾರಗಳು ಖರೀದಿಗೆ ನಮ್ಮ ಜಿಲ್ಲೆಯಲ್ಲಿ ಮತ್ತು ತೂಕಕ್ಕೆ ಸಂಬಂಧಿಸಿದಂತೆ ಸರಳೀಕರಣ ಮಾಡಬೇಕೆಂದು ಒತ್ತಾಯಿಸಿ ರೈತರು ದಿನಾಂಕ 22/04/2024 ರಂದು ತಮ್ಮ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆಗೆ ಸಜ್ಜಾಗಿಸಿದ್ದಾರೆ. ಈ ಸಂದರ್ಭದಲ್ಲಿ ನಾಫೆಡ್ ನ ಉನ್ನತ ಅಧಿಕಾರಿಗಳು ತಮ್ಮ ಕಛೇರಿಯ ಮುಂದೆ ಹಾಜರಿರಬೇಕೆಂದು ಕೋರುತ್ತೇವೆ ಒಂದು ವೇಳೆ ದಿನಾಂಕ 22 ರಂದು ಇತ್ಯಾರ್ಥವಾಗದಿದ್ದಲ್ಲಿ ದಿನಾಂಕ 23/04/2024 ರಿಂದ ಹೊಸದುರ್ಗ ತಾಲ್ಲೂಕು ಕಛೇರಿ ಮುಂದೆ ಅನಿರ್ದಿಷ್ಟ ಚಳುವಳಿಯನ್ನು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ, ಜಿಲ್ಲಾ ಕಾರ್ಯದರ್ಶಿ ಬೈಲಪ್ಪ,  ಜಿಲ್ಲಾ ಉಪಾಧ್ಯಕ್ಷ ಮುರಿಗೆಂದ್ರಪ್ಪ,  ಶಿವಕುಮಾರ್,  ಕಾರ್ಯದರ್ಶಿ ಕರಿಬಸಪ್ಪ,  ರಮೇಶ್,  ಅಪ್ಪ ಸ್ವಾಮಿ, ರಾಮಚಂದ್ರಪ್ಪ, ಆರ್ ಚಂದ್ರಶೇಖರಪ್ಪ, ಗೋವಿಂದಪ್ಪ, ಪವನ್, ರಾಜ್ಯ ಕಾರ್ಯಧ್ಯಕ್ಷರು ಸಿದ್ಧವೀರಪ್ಪ, ಬೋರೇಶ, ತಾಲೂಕ ಅಧ್ಯಕ್ಷರು, ಹೊಸದುರ್ಗ ಇನ್ನು ಮುಂತಾದವರು ಇದ್ದರು.

Advertisement
Tags :
bengaluruchitradurgaCoconut Purchase RulesState Farmers' Associationsuddionesuddione newsಕೊಬ್ಬರಿ ಖರೀದಿಚಿತ್ರದುರ್ಗನಿಯಮಾವಳಿ ಸರಳೀಕರಿಸಿಬೆಂಗಳೂರುರಾಜ್ಯ ರೈತ ಸಂಘಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article