Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಛಲವಾದಿ ಗುರುಪೀಠದ ಬೆಳ್ಳಿ ಮಹೋತ್ಸವ | 2024-25 ನೇ ಸಾಲಿನ ಪದಾಧಿಕಾರಿಗಳ ನೇಮಕ

05:54 PM Mar 12, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.12 : ಚಿತ್ರದುರ್ಗದಲ್ಲಿ ಛಲವಾದಿ ಗುರುಪೀಠ ಆರಂಭಗೊಂಡು 22 ವರ್ಷಗಳಾಗಿದ್ದು, ಬೆಳ್ಳಿ ಮಹೋತ್ಸವ ಆಚರಿಸಲು ಸಿದ್ದತೆಗಳನ್ನು ನಡೆಸಲಾಗುವುದೆಂದು ಛಲವಾದಿ ಸಮಾಜದ ಮುಖಂಡ ಜಿ.ಇ.ಮಂಜುನಾಥ ತಿಳಿಸಿದರು.

Advertisement

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಛಲವಾದಿ ಜನಾಂಗವೆಂದರೆ ತ್ಯಾಗ, ಸ್ವಾಭಿಮಾನದ ಸಂಕೇತ. ಭೀಮಸಮುದ್ರದಲ್ಲಿ ಕೆರೆ ಕಟ್ಟಿದವರು ನಮ್ಮ ಸಮಾಜದವರು. ಛಲವಾದಿ ಗುರುಪೀಠ ಆರಂಭಗೊಂಡು 22 ವರ್ಷಗಳಾಗಿದ್ದರು ಬೇರೆ ಮಠಗಳಂತೆ ನಮ್ಮ ಮಠ ಬಲಿಷ್ಠವಾಗಿ ಬೆಳೆದಿಲ್ಲವೆನ್ನುವ ಕೊರಗಿದೆ. ಮಧ್ಯಕರ್ನಾಟಕದಲ್ಲಿ ಛಲವಾದಿ ಸಮಾಜಕ್ಕೆ ರಾಜಕೀಯವಾಗಿ ಪ್ರಾಧಾನ್ಯತೆ ಸಿಕ್ಕಿಲ್ಲ. ನಮ್ಮ ಜನಾಂಗದಲ್ಲಿಯೇ ಕೆಲವರು ಗುರುಪೀಠಕ್ಕೆ ವಿರೋಧವಾಗಿದ್ದಾರೆ. ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬಹುದು ಮಠಕ್ಕೆ ಬಂದು ಸ್ವಾಮೀಜಿ ಬಳಿ ಮಾತನಾಡಲಿ ಎಂದು ಆಹ್ವಾನಿಸಿದರು.

ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮೀಜಿ ಮಾತನಾಡಿ ಗುರುಪೀಠ ಆರಂಭಗೊಂಡು 22 ವರ್ಷಗಳಾಗಿರುವುದರಿಂದ ಬೆಳ್ಳಿ ಮಹೋತ್ಸವ ಆಚರಿಸುವ ಕುರಿತು ಸಭೆ ನಡೆಸಿ 2024-25 ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಜಿಲ್ಲಾಧ್ಯಕ್ಷರಾಗಿ ಹೆಚ್.ಶೇಷಪ್ಪ, ಗೌರವಾಧ್ಯಕ್ಷರಾಗಿ ಹೆಚ್.ಅಣ್ಣಪ್ಪಸ್ವಾಮಿ ಇವರುಗಳನ್ನು ನೇಮಕ ಮಾಡಿದ್ದೇವೆ. ಒಂದು ಪುಸ್ತಕ ಇಡುತ್ತೇವೆ. ಆರು ತಿಂಗಳುಗಳ ಕಾಲ ಅವಕಾಶವಿದೆ. ಬೆಳ್ಳಿ ಮಹೋತ್ಸವಕ್ಕೆ ಗುರುಪೀಠದ ಜೊತೆ ಕೈಜೋಡಿಸಿ ಸಹಕರಿಸಬಹುದೆಂದು ಮನವಿ ಮಾಡಿದರು.

ಗುರುಪೀಠಕ್ಕೆ ಟ್ರಸ್ಟ್ ರಚಿಸಿದ್ದೇನೆ. ನಮ್ಮಲ್ಲಿಯೇ ಕೆಲವರು ಜಮೀನು ಆಸ್ತಿ ಕಬಳಿಸಲು ಹೊಂಚು ಹಾಕುತ್ತಿದ್ದಾರೆ. ಅಂತಹವರನ್ನು ಟ್ರಸ್ಟ್‍ಗೆ ಸೇರಿಸಿಕೊಳ್ಳುವುದಿಲ್ಲ ಎನ್ನುವುದನ್ನು ಬಿಟ್ಟರೆ ಪೀಠಕ್ಕೆ ಯಾರ ವಿರೋಧವೂ ಇಲ್ಲ ಎಂದು ಸ್ಪಷ್ಠ ಪಡಿಸಿದ ಬಸವನಾಗಿದೇವಸ್ವಾಮಿ ನಮ್ಮ ಮಠದಲ್ಲಿ ಕೋಣೆಗಳಿಗೆ ಯಾರು ಬೀಗ ಹಾಕಿಲ್ಲ. ಎಲ್ಲಾ ಕೀಗಳು ನನ್ನ ಬಳಿಯೇ ಇದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಶೇಷಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಆರ್.ರವೀಂದ್ರ, ಉಪಾಧ್ಯಕ್ಷ ಓಂಕಾರಮೂರ್ತಿ, ಸಹ ಕಾರ್ಯದರ್ಶಿ ನರಸಿಂಹಮೂರ್ತಿ, ಖಜಾಂಚಿ ಟಿ.ನರಸಿಂಹಮೂರ್ತಿ, ರಾಮಚಂದ್ರಪ್ಪ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಚಿತ್ರದುರ್ಗ : ಛಲವಾದಿ ಮಹಾಸಭಾ ಜಿಲ್ಲಾ ಸಮಿತಿಗೆ 2024-25 ನೇ ಸಾಲಿಗೆ ಪದಾಧಿಕಾರಿಗಳನ್ನು ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ ಎಂದು ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಪದಾಧಿಕಾರಿಗಳ ವಿವರ ತಿಳಿಸಿದರು.

ಅಧ್ಯಕ್ಷರಾಗಿ ಹೆಚ್.ಶೇಷಪ್ಪ, ಗೌರವಾಧ್ಯಕ್ಷರಾಗಿ ಹೆಚ್.ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷರಾಗಿ ಜಿ.ಕೆ.ಓಂಕಾರಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಆರ್.ರವೀಂದ್ರ, ಸಹಕಾರ್ಯದರ್ಶಿಯಾಗಿ ನರಸಿಂಹಮೂರ್ತಿ ಎಂ. ಖಜಾಂಚಿಯಾಗಿ ಟಿ.ನರಸಿಂಹಮೂರ್ತಿ, ಚಿತ್ರದುರ್ಗ ಉಪಾಧ್ಯಕ್ಷರಾಗಿ ಶ್ರೀಮತಿ ಸುವರ್ಣಮ್ಮ, ಹೊಳಲ್ಕೆರೆ ತಾಲ್ಲೂಕು ಉಪಾಧ್ಯಕ್ಷರಾಗಿ ಸಿ.ನಿಂಗಪ್ಪ, ಹಿರಿಯೂರು ತಾಲ್ಲೂಕು ಉಪಾಧ್ಯಕ್ಷರಾಗಿ ಶ್ರೀಮತಿ ಜಯಶೀಲ, ಹೊಸದುರ್ಗ ತಾಲ್ಲೂಕು ಉಪಾಧ್ಯಕ್ಷರಾಗಿ ಎಂ.ರವಿ, ಚಳ್ಳಕೆರೆ ತಾಲ್ಲೂಕು ಉಪಾಧ್ಯಕ್ಷರಾಗಿ ಶ್ರೀಮತಿ ಮಂಜುಳ ಎಸ್. ಮೊಳಕಾಲ್ಮುರು ತಾಲ್ಲೂಕು ಉಪಾಧ್ಯಕ್ಷರಾಗಿ ಟಿ.ರುದ್ರೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಧನಂಜಯ ಚಿತ್ರದುರ್ಗ, ಆರ್.ಗುರುಮೂರ್ತಿ ಹೊಳಲ್ಕೆರೆ, ಎಂ.ಅನಂತ್ ಹಿರಿಯೂರು, ಕೀರ್ತಿ ಪಿ.ಜೆ. ಹೊಸದುರ್ಗ, ಕೆ.ದೇವರಾಜ್ ಚಳ್ಳಕೆರೆ, ವಿ.ಮಂಜುನಾಥ್ ಮೊಳಕಾಲ್ಮುರು, ನಿರ್ದೇಶಕರುಗಳಾಗಿ ಹೆಚ್.ಸತ್ಯಪ್ಪ, ಎ.ಡಿ.ನಿರಂಜನ್, ಹೆಚ್.ಅಂಜಿನಪ್ಪ, ಹೆಚ್.ನಾಗರಾಜ್, ಕೃಷ್ಣಮೂರ್ತಿ ಎಂ.ಟಿ. ಜೆ.ತಿಪ್ಪೇಸ್ವಾಮಿ, ನಾಗರಾಜ್ ಪಿ. ಮಲ್ಲೇಶ್, ಎ.ಆರ್.ತಿಪ್ಪೇಸ್ವಾಮಿ, ಸಿ.ನರಸಿಂಹಸ್ವಾಮಿ, ನಾಗರಾಜು, ಆರ್.ಕೃಷ್ಣಮೂರ್ತಿ ಇವರುಗಳನ್ನು ನೇಮಕ ಮಾಡಿರುವುದಾಗಿ ಬಸವನಾಗಿದೇವಸ್ವಾಮಿ ತಿಳಿಸಿದ್ದಾರೆ.

Advertisement
Tags :
bengaluruchitradurgasuddionesuddione newsಚಿತ್ರದುರ್ಗಛಲವಾದಿ ಗುರುಪೀಠಪದಾಧಿಕಾರಿಗಳ ನೇಮಕಬೆಂಗಳೂರುಬೆಳ್ಳಿ ಮಹೋತ್ಸವಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article