Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿದ್ದರಾಮಯ್ಯರ ಬಜೆಟ್ ಸುಳ್ಳಿನ ಸಂತೆ : ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗಿದೆ : MLC  ಕೆ.ಎಸ್ ನವೀನ್

06:50 PM Mar 01, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ. 01 : ಈ ಬಜೆಟ್‌ಲ್ಲಿ ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಅದರಲ್ಲೂ ಚಿತ್ರದುರ್ಗ ಜಿಲ್ಲೆಗೆ ಮುಖ್ಯಮಂತ್ರಿಗಳು ಅನ್ಯಾಯ ಮಾಡಿದ್ದಾರೆ. ಅಧಿವೇಶನ ಸರಿಯಾದ ಕಾರಣ ಹುಡುಕಿ ಪರಿಹಾರ ಮಾಡುವ ಬದಲು ಕೇವಲ ಸಿದ್ದರಾಮಯ್ಯರ ಸುಳ್ಳಿನ ಸಂತೆಯಾಗಿ ಮಾರ್ಪಟ್ಟಿತು ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್ ದೂರಿದ್ದಾರೆ.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಧಿವೇಶನದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಮಂತ್ರಿಮಂಡಲ ಸರಿಯಾದ ಉತ್ತರ ನೀಡದೇ ದಾವಂತದಲ್ಲಿ ಬಿಲ್ಲುಗಳನ್ನು ಪಾಸು ಮಾಡಲು ನಿರತರಾಗಿದ್ದರು. ಈ ರಾಜ್ಯದ ಜನತೆಯ ಸಮಸ್ಯೆಗಳನ್ನು ಅರಿವು ಸೌಜನ್ಯವನ್ನು ಸಹ ತೋರಲಿಲ್ಲ.. ರಾಜ್ಯದಲ್ಲಿ ಭೀಕರ ಬರಗಾಲವಿದೆ... ಕುಡಿಯಲು ನೀರಿಲ್ಲ ಟ್ಯಾಂಕರ್ ಮರೆ ಹೋಗಿದ್ದಾರೆ... ಇದನ್ನು ಕೇಳಲು ಹೋದರೆ ಪಿಡಿಓ ಗಳು ಜನರ ಕೈಗೆ ಸಿಗುತ್ತಿಲ್ಲ. ಎಂದು ಆರೋಪಿಸಿದರು.

ಸಿದ್ದರಾಮಯ್ಯರವರು ಪ್ರತಿ ಸಾರಿ 5300 ಕೋಟಿ ರೂ ಕೊಟ್ಟಿಲ್ಲ ಅಂತ ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸುತ್ತಾರೆ.. ಮೊದಲು ಅವರು ಮಾಡಬೇಕಾದ ಕೆಲಸವನ್ನು ಮಾಡುತ್ತಿಲ್ಲ. ಈ ಬಜೆಟ್‌ಲ್ಲಿ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ.. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ನಮ್ಮ ಜಿಲ್ಲೆಗೆ ಶಾಪವಾಗಿ ಪರಿಣಮಿಸಿದೆ.. ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವುದೇ ಮಂತ್ರಿಗಳು ಗಮನ ಹರಿಸುತ್ತಿಲ್ಲ. ಬಯಲು ಸೀಮೆ ಪ್ರಾಧಿಕಾರಕ್ಕೆ ಕನಿಷ್ಠ ಒಂದು ಕೋಟಿ ರೂ ನೀಡಬೇಕು ಆದರೆ 30 ಲಕ್ಷ ಮಾತ್ರ ನೀಡಿದ್ದಾರೆ.ಅದನ್ನು ಎಲ್ಲಿಗೆ ಖರ್ಚು ಮಾಡಬೇಕು ಎಂದು ಪ್ರಶ್ನಿಸಿದರು.

ನಿನ್ನೆ ಬಜೆಟ್ ಅಧಿವೇಶನ ಮುಕ್ತಾಯವಾಗಿದೆ... ಈ ಬಜೆಟ್‌ಲ್ಲಿ ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ ಅದರಲ್ಲೂ ಚಿತ್ರದುರ್ಗ ಜಿಲ್ಲೆಗೆ ಮುಖ್ಯಮಂತ್ರಿಗಳು ಅನ್ಯಾಯ ಮಾಡಿದ್ದಾರೆ... ಇದನ್ನು ಕೇಳಲು ಅವಕಾಶ ಮಾಡಿಕೊಡದೇ ಇರುವುದು ಇನ್ನೂ ದೊಡ್ಡ ಅನ್ಯಾಯ. ಅಧಿವೇಶನ ಸರಿಯಾದ ಕಾರಣ ಹುಡುಕಿ ಪರಿಹಾರ ಮಾಡುವ ಬದಲು ಕೇವಲ ಸಿದ್ದರಾಮಯ್ಯರ ಸುಳ್ಳಿನ ಸಂತೆಯಾಗಿ ಮಾರ್ಪಟ್ಟಿತು. ಜಿಡಿಪಿಯಲ್ಲಿ ಪ್ರಗತಿ ಇಲ್ಲ ಅಂದರೆ ಪ್ರಗತಿಪರ ಬಜೆಟ್ ಮಂಡಿಸಲು ಹೇಗೆ ಸಾಧ್ಯ ಎಂದು ಸ್ವಯಂಘೋಷಿತ ಆರ್ಥಿಕತಜ್ಞ ಸಿದ್ದರಾಮಯ್ಯ ಹೇಳುತ್ತಾರೆ. ಯಾವುದೇ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ನಮ್ಮ ಜಿಲ್ಲೆಗೆ ನೀಡುವ ಪ್ರಯತ್ನ ಮಾಡಿಲ್ಲ ಇದನ್ನು ನಾನು ಖಂಡಿಸುತ್ತೇನೆ ಎಂದರು.

ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್ ನಲ್ಲಿ 2700 ಕೋಟಿ ಅನುದಾನ ನೀಡುವುದಾಗಿ ಹೇಳಿತ್ತು ಅದರಲ್ಲಿ 1400 ಕೋಟಿ ರೂ ಮಾತ್ರ ನೀಡಿದ್ದಾರೆ.. ಹಳೆಯ 1200 ಕೋಟಿ ರೂ ಇನ್ನೂ ಬಾಕಿ ಇದೆ.. ಆ ಹಣವನ್ನು ಮೊದಲು ಬಿಡುಗಡೆ ಮಾಡಲಿ. ನಾನು ನನ್ನ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಬಹಿರಂಗ ಚರ್ಚೆಗೆ ಸ್ವಾಗತಿಸುತ್ತೇನೆ  ನಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಹಣ ನೀಡಿದ್ದೇವೆ... ನಿಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಹಣ ನೀಡಿದ್ದೀರಿ ಎಂಬುದರ ಬಗ್ಗೆ ತಿಳಿಸಲಿ ಎಂದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ... ರೈತರಿಗೆ ನೀಡಬೇಕಾದ ಬರ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಮೃತಪಟ್ಟ ರೈತರ ಮನೆಗೆ ಯಾವುದೇ ಸಚಿವರು ಭೇಟಿ ನೀಡಿಲ್ಲ.. ಕೃಷಿ ಅಧಿಕಾರಿಗಳು ಸಹ  ಭೇಟಿ ನೀಡಿಲ್ಲ. ಕಾಂಗ್ರೆಸ್ ಪಕ್ಷ ಪಕ್ಷದ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಮಾಡುತ್ತದೆ... ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವನನ್ನು ಬಂಧಿಸಿ ಎಂದರೆ ಎಫ್.ಎಸ್.ಎಲ್ ವರದಿ ಬರಲಿ ಎಂದು ಅವನನ್ನು ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಕೇವಲ ತನ್ನ ಮತ ಬ್ಯಾಂಕ್ ಕೂಟವನ್ನು ಕಾಯುವ ಕೆಲಸ ಮಾಡುತ್ತಿದೆ ಹೊರತು ರಾಜ್ಯದ ಜನತೆಯ ಹಿತವನ್ನು ಕಾಯುವ ಕೆಲಸ ಮಾಡುತ್ತಿಲ್ಲ ಹಳ್ಳಿಗಾಡಿನಲ್ಲಿ ಜನರು ಗುಳ್ಳೆ ಹೊರಟಿದ್ದಾರೆ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನವೀನ್ ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಗೃಹ ಸಚಿವ ಅಮಿತ್ ಶಾ ರವರು ಚಳ್ಳಕೆರೆಗೆ ಆಗಮಿಸಿದಾಗ ಮದಕರಿ ಥೀಮ್ ಪಾರ್ಕ್ ಮಾಡುವುದಾಗಿ ಹೇಳಿದ್ದರು ಆದರೆ ಕೋಟೆ ಸುತ್ತ ಇರುವ ಜಾಗ ಕೆಲವು ಬೇರೆ ಬೇರೆ ಇಲಾಖೆಗೆ ಹಂಚಿಕೆಯಾಗಿದೆ.. ಆದರೆ ಥೀಮ್ ಪಾರ್ಕ್ ಮಾಡಲು ಸುಮಾರು ೪೦ ರಿಂದ ೫೦ ಎಕರೆ ಜಾಗದ ಅವಶ್ಯಕತೆ ಇದೆ... ಈ ಪ್ರಯತ್ನ ಮುಂದುವರೆದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹಾಸನದ ಮಾಜಿ ಶಾಸಕರಾದ ಪ್ರೀತಂ ಗೌಡ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಮತ್ತೊಮ್ಮೆ ಮೋದಿ ಮಾಡಲು ಬೂತ್ ಮಟ್ಟದಲ್ಲಿ ಮನೆ ಮನೆಗೆ ತಲುಪುವ ಕೆಲಸ ನಡೆಯುತ್ತಿದೆ. ಬರುವ ದಿನಗಳಲ್ಲಿ ರಾಷ್ಟ್ರೀಯ ನಾಯಕರುಗಳು ಜಿಲ್ಲೆಗೆ ಆಗಮಿಸಲಿದ್ದು,  ಚುನಾವಣಾ ನೀತಿ ಸಂಹಿತೆ ಪೂರ್ವದಲ್ಲಿ ದೇಶ್ಯಾದ್ಯಂತ ಒಂದನೇ ಹಂತದ ಪ್ರಚಾರ ಕಾರ್ಯಕ್ರಮ ಮುಗಿಸಿದ್ದೇವೆ.. ರಾಜ್ಯದಲ್ಲಿ 28 ಕ್ಕೂ 28bಸ್ಥಾನಗಳನ್ನು ಬಿಜೆಪಿ ಪಕ್ಷ ಗೆಲ್ಲಲಿದೆ.. ಟಾಪ್-10 ರ ಲೀಡ್‌ನಲ್ಲಿ ಚಿತ್ರದುರ್ಗ ಸಹ ಒಂದು ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಯಾವುದೇ ಬಣಗಳಿಲ್ಲ.. ಇರುವುದು ಒಂದೇ ಬಣ ಕಮಲ ಬಣ... ಆದರೆ ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ... ನಮ್ಮ ಪಕ್ಷದಲ್ಲಿ ವಿಚಾರಗಳನ್ನು ಮಂಡಿಸುವ ಹಕ್ಕನ್ನು ಎಲ್ಲಾ ಕಾರ್ಯಕರ್ತರು ಹೊಂದಿರುತ್ತಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 10000 ಕಾರ್ಯಕರ್ತರಿದ್ದಾರೆ ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಕುಳಿತು ಚರ್ಚೆ ಮಾಡಿ ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರದಾನ ಕಾರ್ಯದರ್ಶಿ ಸಂಪತ್ ಕುಮಾರ್, ವಕ್ತಾರ ದಗ್ಗೆ ಶಿವಪ್ರಕಾಶ್, ರಾಮದಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Tags :
bengalurubudget 2024Chief Minister SiddaramaiahchitradurgaCM SiddaramaiahMLC  ಕೆ.ಎಸ್ ನವೀನ್suddionesuddione newsಅನ್ಯಾಯಚಿತ್ರದುರ್ಗಚಿತ್ರದುರ್ಗ ಜಿಲ್ಲೆಬಜೆಟ್ಬೆಂಗಳೂರುಮುಖ್ಯಮಂತ್ರಿ ಸಿದ್ದರಾಮಯ್ಯಸಿದ್ದರಾಮಯ್ಯಸುದ್ದಿಒನ್ಸುದ್ದಿಒನ್ ನ್ಯೂಸ್ಸುಳ್ಳಿನ ಸಂತೆ
Advertisement
Next Article