Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿದ್ದರಾಮಯ್ಯ ಎರಡನೇ ದೇವರಾಜ ಅರಸು : ಲೇಖಕ ಹೆಚ್.ಆನಂದಕುಮಾರ್

05:26 PM Aug 21, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

ಸುದ್ದಿಒನ್,ಚಿತ್ರದುರ್ಗ, ಆಗಸ್ಟ್.21 : ಹಿಂದುಳಿದ ವರ್ಗಗಳ ಹರಿಕಾರ ದಿವಂಗತ ಡಿ.ದೇವರಾಜ ಅರಸುರವರು ಕೊಟ್ಟಂತ ಕೊಡುಗೆಗಳು ಇನ್ನು ಜೀವಂತವಾಗಿವೆ ಎಂದು ಲೇಖಕ ಹೆಚ್.ಆನಂದಕುಮಾರ್ ಹೇಳಿದರು.

Advertisement

ಅಹಿಂದ ಸಬಲೀಕರಣ ಸೌಹಾರ್ಧ ಸಹಕಾರ ನಿಯಮಿತ ವತಿಯಿಂದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಡಿ.ದೇವರಾಜ ಅರಸುರವರ ಜಯಂತಿ ಅಂಗವಾಗಿ ಚಳುವಳಿ ಎಂಬ ವಿಚಾರ ಕುರಿತು ಮಾತನಾಡಿದರು.

ಸಮಾಜದ ಕಟ್ಟ ಕಡೆಯವನಿಗೂ ಸಮಾನತೆ ಸರ್ಕಾರದ ಮೂಲಭೂತ ಸೌಲಭ್ಯಗಳು ಸಿಗಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಅದೆ ರೀತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ಶೋಷಿತರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಕಟ್ಟಕಡೆಯ ವ್ಯಕ್ತಿಯ ಕಡೆ ಸದಾ ಗಮನ ಕೊಡುತ್ತಿದ್ದರು. ಉಳುವವನೆ ಭೂಮಿಯ ಒಡೆಯ ಎನ್ನುವ ಕಾನೂನು ಜಾರಿಗೆ ತಂದು ಎಲ್ಲರಿಗೂ ಭೂ ಒಡೆತನದ ಹಕ್ಕು ನೀಡಿದರು ಎಂದು ಶ್ಲಾಘಿಸಿದರು.

ಬಸವಲಿಂಗಪ್ಪ, ಅರಸು ಇವರುಗಳು ದಿಟ್ಟ ರಾಜಕಾರಣಿಗಳಾಗಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೆ ದೇವರಾಜ ಅರಸು ಎಂದು ಕರೆಸಿಕೊಂಡಿದ್ದಾರೆ.

ಡಾ.ಬಾಬು ಜಗಜೀವನರಾಂ, ಕಾನ್ಷಿರಾಂರವರ ಸಾಲಿನಲ್ಲಿ ಅರಸುರವರು ನಿಲ್ಲುತ್ತಾರೆ. ಮನುವಾದದ ವಿರುದ್ದ ಇರುವ ನಾಯಕ ಸಿದ್ದರಾಮಯ್ಯನವರನ್ನು ಎಂದಿಗೂ ಬಿಟ್ಟುಕೊಡಬಾರದು ಎಂದರು.

ದಲಿತ ಮುಖಂಡ ಬಿ.ರಾಜಣ್ಣ ಮಾತನಾಡಿ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸುರವರಲ್ಲಿದ್ದ ವಿಚಾರ ಧಾರೆಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕಿದೆ. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣವಂತರಾಗಲಿ ಎನ್ನುವ ಉದ್ದೇಶದಿಂದ ಅನೇಕ ಹಾಸ್ಟೆಲ್, ವಸತಿ ಶಾಲೆಗಳನ್ನು ತೆರೆದಿದ್ದಾರೆ. ದಲಿತರ ಮೇಲೆ ದೇಶದೆಲ್ಲೆಡೆ ನಿರಂತರ ಅತ್ಯಾಚಾರ, ಕೊಲೆಗಳು ನಡೆಯುತ್ತಿದೆ. ಯಾರೂ ಧ್ವನಿ ಎತ್ತುತ್ತಿಲ್ಲ. ಚುನಾವಣೆಯಲ್ಲಿ ನಿಮ್ಮ ಅಮೂಲ್ಯವಾದ ಮತಗಳನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ. ನಿಮ್ಮ ಪರವಾಗಿ ಯಾರಿರುತ್ತಾರೆನ್ನುವುದನ್ನು ಯೋಚಿಸಿ ಮತದಾನ ಮಾಡಿ ಎಂದು ಮನವಿ ಮಾಡಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆಯನ್ನು ನೀಡಿದ್ದಾರೆ. ಆದರೆ ದಲಿತರು ಇನ್ನು ಅಸ್ಪøಶ್ಯತೆಯಿಂದ ಹೊರಬರಲು ಆಗುತ್ತಿಲ್ಲ. ದೇವರಾಜ ಅರಸುರವರಂತ ದಿಟ್ಟ ನಾಯಕರ ಮಾರ್ಗದರ್ಶನದಲ್ಲಿ ನಾವುಗಳು ನಡೆಯಬೇಕಿದೆ ಎಂದರು.

ಅಹಿಂದ ಚಳುವಳಿ ಮತ್ತು ಅಹಿಂದ ಸಬಲೀಕರಣ ಸೌಹಾರ್ಧ ಸಹಕಾರಿ ನಿಯಮಿತ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕೆಂಚಪ್ಪ, ಸಹ ಸಂಚಾಲಕ ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ ಪ್ರದೀಪ್‍ಕುಮಾರ್ ಇನ್ನು ಅನೇಕರು ಅರಸುರವರ ಜಯಂತಿಯಲ್ಲಿ ಭಾಗವಹಿಸಿದ್ದರು.

 

Advertisement
Tags :
Author H. Ananda KumarbengaluruchitradurgaDevaraja ArasuSiddaramaiahsuddionesuddione newsಚಿತ್ರದುರ್ಗದೇವರಾಜ ಅರಸುಬೆಂಗಳೂರುಲೇಖಕ ಹೆಚ್.ಆನಂದಕುಮಾರ್ಸಿದ್ದರಾಮಯ್ಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article