For the best experience, open
https://m.suddione.com
on your mobile browser.
Advertisement

ಸಿದ್ದರಾಮಯ್ಯ ಸರ್ಕಾರದ ಖಜಾನೆ ನಿರಂತರವಾಗಿ ಲೂಟಿಯಾಗುತ್ತಿದೆ : ಗೋವಿಂದ ಕಾರಜೋಳ

04:22 PM May 31, 2024 IST | suddionenews
ಸಿದ್ದರಾಮಯ್ಯ ಸರ್ಕಾರದ ಖಜಾನೆ ನಿರಂತರವಾಗಿ ಲೂಟಿಯಾಗುತ್ತಿದೆ   ಗೋವಿಂದ ಕಾರಜೋಳ
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಮೇ. 31 :  ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ಖಜಾನೆ ನಿರಂತರವಾಗಿ ಲೂಟಿಯಾಗುತ್ತಿದೆ. ವಾಲ್ಮೀಕಿ ನಿಗಮ ಹಗರಣ ಸರ್ಕಾರದ ಖಜಾನೆಯ ಹಗಲು ದರೋಡೆಯಾಗಿದೆ. ಇದು ಭ್ರಷ್ಠಾಚಾರ ಅಲ್ಲ ಹಗಲು ದರೋಡೆಯಾಗಿದೆ ಎಂದು ಮಾಜಿ ಸಚಿವರಾದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

ಜೂ.3 ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಚಿತ್ರದುರ್ಗ ನಗರದ ಸಂತ ಜೋಸೆಫ್ ಕಾನ್ವೆಂಟ್‍ನಲ್ಲಿ ಮತಯಾಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ಖಜಾನೆ ನಿರಂತರವಾಗಿ ಲೂಟಿಯಾಗುತ್ತಿದೆ. ವಾಲ್ಮೀಕಿ ನಿಗಮ ಹಗರಣ ಸರ್ಕಾರದ ಖಜಾನೆಯ ಹಗಲು ದರೋಡೆಯಾಗಿದೆ. ಇದು ಭ್ರಷ್ಠಾಚಾರ ಅಲ್ಲ ಹಗಲು ದರೋಡೆಯಾಗಿದೆ.

Advertisement

ಮಾರ್ಚಿನಲ್ಲಿ 180 ಕೋಟಿ ಹಣವನ್ನು ಬೇರೆ ಬೇರೆ ಆಕೌಂಟ್ ಓಪನ್ ಮಾಡಿ ವರ್ಗಾವಣೆ ಮಾಡಿದ್ದಾರೆ. ಚುನಾವಣೆಯ ಹಿನ್ನಲೆಯಲ್ಲಿ ನೆರೆ ರಾಜ್ಯವಾದ ಹೈದರಾಬಾದ್ ಮತ್ತು ತೆಲಂಗಾಣಕ್ಕೆ ಹಣ ಹೋಗಿದೆ. ಮುಖ್ಯಮಂತ್ರಿಗಳು ಇದುವರೆವಿಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ, ಹಣಕಾಸು ಇಲಾಖೆಯನ್ನು ನೋಡುತ್ತಿರುವವರ ಮುಖ್ಯಮಂತ್ರಿಗಳಾಗಿದ್ದಾರೆ.

ಈ ವೇಳೆಗೆ ಸಚಿವ ನಾಗೇಂದ್ರ ರವರ ರಾಜೀನಾಮೆಯನ್ನು ಪಡೆಯಬೇಕಿತ್ತು. ಈ ಪ್ರಕರಣವನ್ನು ನಿಸ್ಪಕ್ಷಪತವಾದ ತನಿಖೆಗೆ ಆದೇಶವನ್ನು ಮಾಡಬೇಕಿತ್ತು, ಅದನ್ನು ಮಾಡಿಲ್ಲ ಬಂಡತನದಿಂದ ಅವರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಸದಸ್ಯರು ಮಾಡುತ್ತಿದ್ದಾರೆ. ಇದು ಖಂಡನೀಯವಾದದು ಎಂದಿದ್ದಾರೆ.

ಗುತ್ತಿಗೆದಾರರಲ್ಲದ ವ್ಯಕ್ತಿಯೋರ್ವ ಈಶ್ವರಪ್ಪರವರ ಮೇಲೆ ವಿನಾಕಾರಣ ಆರೋಪವನ್ನು ಮಾಡಿದ ಇದನ್ನು ಖಂಡಿಸಿದ ಸಿದ್ದರಾಮ್ಯಯ ಆವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕೆಂದು ಒತ್ತಾಯ ಮಾಡಿದ್ದರು. ಆದರೆ ಇದು ನಮ್ಮದೆ ಸರ್ಕಾರದಲ್ಲಿ ತಮ್ಮದೆ ಸಚಿವ ಸಂಪುಟದಲ್ಲಿ ಇರುವ ವ್ಯಕ್ತಿಯ ಮೇಲೆ ಆರೋಪ ಬಂದಿದೆ ಆದರೆ ಅವರನ್ನು ಇನ್ನೂ ಸಹಾ ತಮ್ಮ ಜೊತೆಯಲ್ಲಿಯೇ ಇಟುಕೊಂಡಿದ್ದಾರೆ ಇದು ದುರಂತ ಎಂದ ಅವರು, ನೇರವಾಗಿ ಸರ್ಕಾರದ ಖಜಾನೆಯಿಂದಲೇ ಹಣ ಹೋಗಿದೆ. ಸಿಎಂರವರಿಗೆ ನೈತಿಕತೆ ಇಲ್ಲವಾಗಿದೆ. ಹಕ್ಕನ್ನು ಕಳೆದುಕೊಂಡಿದ್ದೀರಾ, ನೀವೇ ಸ್ವಂತಹ ರಾಜೀನಾಮೆಯನ್ನು ನೀಡಿ ನಿಸ್ಪಕ್ಷಪಾತವಾದ ತನಿಖೆಯನ್ನು ನಡೆಸಲು ಮುಂದಾಗಬೇಕಿತ್ತು, ಸಚಿವರನ್ನು ವಜಾ ಮಾಡಿ ಸಿಬಿಐಯಿಂದ ತನಿಖೆಯನ್ನು ನಡೆಸಬೇಕಿತ್ತು. ಅದರೆ ಇದನ್ನು ಬಿಟ್ಟು ಸಿಓಡಿ ತನಿಖೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಸಿಓಡಿ ತನಿಖೆ ಮಾಡಲು ಸಾಧ್ಯವಿಲ್ಲ ಇದರಲ್ಲಿ ಬ್ಯಾಂಕ್ ಅಧಿಕಾರಿಗಳು ಸಹಾ ಒಳಗಾಗಿದ್ದಾರೆ  ಎಂದು ಎಸ್,ಟಿ.ನಿಗಮದ ಜನರಲ್ ಮಾನ್ಯೇಜರ್ ಬ್ಯಾಂಕ್ ಅಧಿಕಾರಿಗಳು ವಿರುದ್ದ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

ಸಚಿವ ನಾಗೇಂದ್ರರವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು, ಸಿಬಿಐ ಯಿಂದ ತನಿಖೆಯನ್ನು ಮಾಡಿಸಬೇಕು, ಇದು ಭಂಡತನದ ಸರ್ಕಾರವಾಗಿದೆ. ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ ಇಡಿ ಸಂಪುಟವೇ ರಾಜೀನಾಮೆಯನ್ನು ನೀಡಬೇಕಿದೆ. ಮುಖ್ಯಂತ್ರಿಗಳೇ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆಯನ್ನು ನೀಡಬೇಕಿತ್ತು. ಏಕೆಂದರೆ ಹಣಕಾಸಿನ ಇಲಾಖೆ ಅವರ ಬಳಿ ಇದೆ ಖಜಾನೆಯಿಂದ 44 ಕೋಟಿ ವರ್ಗಾವಣೆ ಯಾಗಿದೆ.

ರಾಜೀನಾಮೆಯನ್ನು ನೀಡಿ ನಿಸ್ಪಕ್ಷಪಾತವಾದ ತನಿಖೆಗೆ ಸಿಬಿಐಗೆ ಅದೇಶವನ್ನು ಮಾಡಬೇಕಿದೆ ಎಂದ ಅವರು ಪ್ರಜ್ವಲ್ ರೇವಣ ಪ್ರಕರಣದಲ್ಲಿ ನಿಸ್ಪಕ್ಷಪಾತವಾದ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ. ನಾನು ಬಸವ ತತ್ವದಲ್ಲಿ ನಂಬಿಕೆ ಇರುವವನು ನಾನು ಮೂಢನಂಬಿಕೆ ಗೂಡ್ಡ ಕಂದಾಚಾರಗಳಿಗೆ ಯಾವೂತ್ತು ಸಹಾ ಬೆಲೆ ಕೊಟ್ಟಿಲ್ಲ, ಕೂಡುವುದಿಲ್ಲ ಇದರ ಬಗ್ಗೆ ನನ್ನ ಪ್ರತಿಕ್ರಿಯೇ ಕೇಳುವುದು ಅನಾವಶ್ಯಕ ಎಂದರು.
ಬಿಜೆಪಿ ಸರ್ಕಾರ ಆಧಿಕಾರದಲ್ಲಿದ್ದಾಗ ಸರ್ಕಾರೀ ನೌಕರರಿಗೆ ಯಾವುದೇ ರೀತಿಯ ಸಮಸ್ಯೆಯನ್ನು ಮಾಡಿಲ್ಲ, ಅವರಿಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಡಲಾಗಿದೆ, 7ನೇ ವೇತನ ಆಯೋಗ ಜಾರಿಯಾಗುವ ಮುನ್ನವೇ ಬಿಜೆಪಿ ಸರ್ಕಾರ ತನ್ನ ನೌಕರರಿಗೆ ಶೇ,17 ರಷ್ಟು ಭತ್ಯೆಯನ್ನು ನೀಡಿದೆ.

ನಾರಾಯಣಸ್ವಾಮಿಯವರು ಸಹಾ ಶಿಕ್ಷಕ ಹಲವಾರು ಸಮಸ್ಯೆಗಳ ಬಗ್ಗೆ ಸದನದ ಒಳಗೂ ಹಾಗೂ ಹೊರಗು ಸಹಾ ಹೋರಾಟವನ್ನು ಮಾಡುವುದರ ಮೂಲಕ ಅವರ ಸಮಸ್ಯೆಗಳಿಗೆ ಸ್ಫಂದಿಸಿದ್ದಾರೆ, ಇನ್ನೂ ಮುಂದೆಯೂ ಸಹಾ ಸ್ಪಂಧಿಸಲಿದ್ದಾರೆ ಎಂದು ತಿಳಿಸಿದ ಅವರು, ಕಳೆದ ಮೂರು ಬಾರಿ  ಬಿಜೆಪಿ ಅಭ್ಯರ್ಥಿಯಾಗಿದ್ದ ಅವರು ಈ ಬಾರಿ ನಾನು ಬಿಜೆಪಿ ಜೆಡಿಎಸ್‍ನ ಮೃತ್ರಿ ಕೂಟದ ಅಭ್ಯರ್ಥಿಯಾಗಿದ್ದಾರೆ ಈ ಹಿನ್ನಲೆಯಲ್ಲಿ ನಮ್ಮ ಬಲ ಹೆಚ್ಚಾಗಿದೆ. ಅಲ್ಲದೆ ಅವರ ಪರವಾದ ಒಲವು ಹೆಚ್ಚಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಶಂಭು ಮಹಾರಾಜ್, ನಗರಸಭಾ ಸದಸ್ಯರಾದ ಹರೀಶ್ ಕೃಷ್ಣಮೂರ್ತಿ, ನವೀನ ಚಾಲುಕ್ಯ, ಪರಶುರಾಮ್, ಶೀಲ, ಬಿಜೆಪಿ ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಮಂಜುಳಮ್ಮ, ಶಾಂತಮ್ಮ, ಕಾಂಚನ, ಅರುಣ್ ರವಿಕುಮಾರ್,ಶಂಭು, ಶ್ರೀಮತಿ ಶೈಲಜಾ ರೆಡ್ಡಿ, ಬಸಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

Tags :
Advertisement