ಅದ್ದೂರಿಯಾಗಿ ನಡೆದ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವ
05:22 PM Mar 31, 2024 IST | suddionenews
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಜಿಲ್ಲೆಯ ಭರಮಸಾಗರ ಹೋಬಳಿಯ ಕೂಗುಂಡೆ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
Advertisement
ಭೀಕರ ಬರದ ನಡುವೆಯೂ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸಮೃದ್ಧ, ಮಳೆ ಮತ್ತು ಬೆಳೆ ನೀಡಲೆಂದು ಶ್ರೀ ಬಸವಣ್ಣ ದೇವರ ಬಳಿ ಪ್ರಾರ್ಥನೆ ಮಾಡಿದರು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಬಸವಣ್ಣ ದೇವರ ರಥವು ಅತ್ಯಂತ ವಿಜೃಂಭಣೆಯಿಂದ ನಡೆಯಿತು..
ಈ ಜಾತ್ರಾ ಮಹೋತ್ಸವವು ಎಲ್ಲರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಜಾತ್ರಾ ಮಹೋತ್ಸವದಲ್ಲಿ ಅಕ್ಕ ಪಕ್ಕ ಹಳ್ಳಿಗಳ ಜನರು ಸ್ವಾಮಿಯ ದರ್ಶನ ಪಡೆದು ಹೂವು ಹಣ್ಣು ಕಾಯಿ ಮಾಲಾರ್ಪಣೆ ಮಾಡಿ ಸ್ವಾಮಿಯ ಕೃಪೆಗೆ ಪಾತ್ರರಾದರು.
Advertisement
ಅಲ್ಲದೆ ಈ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅತ್ಯಂತ ಯಶಸ್ವಿಯಾಗಿ ನಡೆಯಿತು, ಕೂಗುಂಡೆ ಗ್ರಾಮದ ಹಾಗೂ ನೆರೆ ಹೊರೆಯ ಎಲ್ಲ ಗ್ರಾಮಸ್ಥರು ಈ ಜಾತ್ರೆಗೆ ಸಾಕ್ಷಿಯಾದರು.