Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕುರಿತು ಕಿರುನಾಟಕ

06:41 PM Nov 26, 2024 IST | suddionenews
Advertisement

 

Advertisement

ಚಿತ್ರದುರ್ಗ, ನ. 25 : ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ಇಂದು ಬೆಳಗ್ಗೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕುರಿತು ಸರಸ್ವತಿ ಕಾನೂನು ಕಾಲೇಜಿನ ವಿದ್ಯಾರ್ಥಿಗ ಳಿಂದ ಅಂತರಾಷ್ಟ್ರೀಯ ಮಹಿಳಾ ಹಿಂಸಾಚಾರ ತಡೆ ದಿನಾಚರಣೆ ಅಂಗವಾಗಿ ಕಿರುನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

 

Advertisement

ಇನ್ನು ಕಾನೂನು ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಮಹಿಳೆ ಯರ ಮೇಲೆ ನಡೆಯುವ ದೌರ್ಜನ್ಯ, ಅವುಗಳ ಪ್ರಭಾವ ಮತ್ತು ಸಮಾಜದಲ್ಲಿ ಹಿಂಸಾಚಾರ ತಡೆಗೆ ಅಗತ್ಯವಾದ ಕ್ರಮ ಗಳನ್ನು ಪ್ರಸ್ತುತಪಡಿಸಿದರು. ನಾಟಕದ ಮೂಲಕ ಪ್ರೇಕ್ಷಕರಲ್ಲಿ ಜಾಗೃತಿ ಮೂಡಿ ಸುವ ಪ್ರಯತ್ನ ಎಲ್ಲರ ಗಮನ ಸೆಳೆ ದಿದ್ದು, ಈ ಮೂಲಕ ಸಂಬಂಧಪಟ್ಟ ಇಲಾಖೆ ಹಾಗೂ ಪೆÇಲೀಸ್ ಇಲಾ ಖೆಯ ಗಮನ ಸೆಳೆಯುವಲ್ಲಿ ಕಾನೂನು ವಿಧ್ಯಾರ್ಥಿಗಳು ಶ್ರಮಿಸಿ ದರು. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಹ ದೊರೆತಿದೆ.

ಕಾರ್ಯಕ್ರಮದ ವೇಳೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್. ಸುಧಾದೇವಿ ಮಾತನಾಡಿ, ಎಲ್ಲಿ ಮಹಿಳೆಯನ್ನು ಗೌರವಿಸಲಾಗುತ್ತ ದೆಯೋ ಅಲ್ಲಿ ದೇವರು ನೆಲೆಸುತ್ತಾನೆ. ಹಾಗಾಗಿ ಮಹಿಳೆಯರ ಮೇಲೆ ನಡೆ ಯುವ ಹಿಂಸಾಚಾರ, ಬಾಲ್ಯವಿವಾಹ ತಡೆಯಬೇಕು ಎಂದು ತಿಳಿಸಿದರು.

ಪೋಸ್ಕೋ ಕಾಯ್ದೆಯ ಬಗ್ಗೆ ಯೂ ಮಾಹಿತಿ ನೀಡಿದರು.
ಈ ವೇಳೆ ಕಾಲೇಜಿನ ಸಹಾ ಯಕ ಪ್ರಾಧ್ಯಾಪಕರಾದ ಶ್ರೀಮತಿ ಹರ್ಷಾ, ದೈಹಿಕ ನಿರ್ದೇಶಕ ಮುರುಗೇಶ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Tags :
bengaluruchitradurgakannadaKannadaNewspreventionsuddionesuddionenewsviolencewomenಕನ್ನಡಕನ್ನಡವಾರ್ತೆಕನ್ನಡಸುದ್ದಿಕಿರುನಾಟಕಚಿತ್ರದುರ್ಗದೌರ್ಜನ್ಯಬೆಂಗಳೂರುಮಹಿಳೆಯರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article