Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಿವರಾತ್ರಿ ಮಹೋತ್ಸವ ಮಧ್ಯ ಕರ್ನಾಟಕದ ನಾಡ ಹಬ್ಬ : ಮಾದಾರ ಚನ್ನಯ್ಯ ಸ್ವಾಮೀಜಿ

04:01 PM Jan 28, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 28 :  ಶಿವರಾತ್ರಿ ಮಹೋತ್ಸವ ಮಧ್ಯ ಕರ್ನಾಟಕದ ನಾಡ ಹಬ್ಬವಾಗಿ ಪರಿಣಮಿಸಬೇಕಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.

Advertisement

ನಗರದ ಕರುವಿನ ಕಟ್ಟೆವೃತ್ತದಲ್ಲಿನ ಶ್ರೀ ಸದ್ಗುರು ಕಬೀರಾನಂದಾಶ್ರಮದವತಿಯಿಂದ ನಡೆಯುವ 94ನೇ ಶಿವನಾಮ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಶ್ರೀ ಸದ್ಗುರು ಕಬೀರಾನಂದಾಶ್ರಮದ ಆವರಣದಲ್ಲಿ ಕರೆಯಲಾಗಿದೆ. ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ನಾಡಿನ ಬೇರೆ ಬೇರೆ ಮಠಗಳು ಬೇರೆ ಬೇರೆ ಕಾರ್ಯಕ್ರಮಗಳನ್ನು ಮಾಡುತ್ತಾರೆ ಆದರೆ ಮಧ್ಯ ಕರ್ನಾಟಕದ ಕಬೀರಾನಂದಾಶ್ರಮದವತಿಯಿಂದ ನಡೆಯುವ ಮಹಾಶಿವರಾತ್ರಿ ಮಹೋತ್ಸವವೂ ಅತ್ಯಂತ ಸಡಗರದಿಂದ ನಡೆಯುತ್ತದೆ. ಈ ರೀತಿಯಾದ ಹಬ್ಬವೂ ನಾಡಹಬ್ಬವಾಗಿ ನಡೆದರೆ ಇನ್ನೂ ಚೆನ್ನಾಗಿ ಮೂಡಿ ಬರುತ್ತದೆ ಎಂದರು.

ಆರಂಭದಲ್ಲಿ ಚಿಕ್ಕದಾಗಿ ಪ್ರಾರಂಭವಾದರೂ ಸಹಾ ತದ ನಂತರ ದೊಡ್ಡದಾಗಿ ಬೆಳಿದಿದೆ. ಈಗ ಕರ್ನಾಟಕ ವ್ಯಾಪ್ತಿಗೆ ಬಂದಿದೆ. ಕಾರ್ಯಕ್ರಮದ ಮೂಲಕ ಶ್ರೀಗಳು ವೈಚಾರಿಕ ತತ್ವಗಳು ಪ್ರಗತಿಪರ ಕಾರ್ಯಕ್ರಮ ಹಾಗೂ ಶಿವನಾಮಕ್ಕೆ ಸಂಬಂಧಪಟ್ಟಂತೆ ಶಿವನಾಮ ಸ್ತೋತ್ರಗಳು ಭಾರತದ ಸನಾತನ ಧರ್ಮ ಹಾಗೂ ಪ್ರಗತಿಪರವಾದ ಚಿಂತನೆಗಳಿಗೆ ವೇದಿಕೆಯನ್ನು ಶ್ರೀಗಳು ನೀಡಿದ್ದಾರೆ.

ಈ ಮಹೋತ್ಸವದ ಅಧ್ಯಕ್ಷರಾಗಿ ವಿವಿಧ ರೀತಿಯ ಗಣ್ಯರು ಕೆಲಸವನ್ನು ಮಾಡಿದ್ದಾರೆ. ನಾವು ನೀವು ಎಲ್ಲರು ಸಹಾ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡಬೇಕಿದೆ. ಶ್ರೀಗಳು ಬೇರೆಯವರಿಂದ ಸಹಾಯವನ್ನು ಕೇಳಲು ಸಹಾ ಹಿಂಜರಿಯುತ್ತಾರೆ. ಈ ಹಿನ್ನಲೆಯಲ್ಲಿ ಶ್ರೀಗಳು ಶಿವರಾತ್ರಿ ಮಹೋತ್ಸವಕ್ಕೆ ದೇಣಿಗೆಯನ್ನು ಸಹಾ ಇಂತಿಷ್ಟು ಕೂಡಿ ಎಂದು ಕೇಳುವುದಿಲ್ಲ ನೀಡಿದಷ್ಟು ಮಾತ್ರ ಪಡೆಯುತ್ತಾರೆ ಈ ಹಿನ್ನಲೆಯಲ್ಲಿ ನಮ್ಮ ಕೈಲಾದ ಧನಸಹಾಯವನ್ನು ಮಾಡುವುದರ ಮೂಲಕ ಶ್ರೀಗಳಿಗೆ ನೆರವಾಗಬೇಕಿದೆ ಎಂದು ಶ್ರೀಗಳು ಕರೆ ನೀಡಿದರು.

ವರ್ಷದಿಂದ ವರ್ಷಕ್ಕೆ ಮಹೋತ್ಸವ ಚನ್ನಾಗಿ ನಡೆಯಬೇಕಿದೆ ಇದರ ಕಡೆ ಗಮನವನ್ನು ಹೆಚ್ಚಾಗಿ ನಡೆಯಬೇಕಿದೆ, ಕಳೆದ ಬಾರಿ ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರ ಮೂಲಕ ಈ ಬಾರಿ ಮಹೋತ್ಸವವನ್ನು ಚನ್ನಾಗಿ ಮಾಡಬೇಕಿದೆ. ಮಹೋತ್ಸವದಲ್ಲಿ ಸರಳ ಮತ್ತು ಸಹಜತೆ ಇರಬೇಕಿದೆ. ಎಲ್ಲರ ಸಹಕಾರ ಅಗತ್ಯವಾಗಿದೆ. ಶಿವರಾತ್ರಿ ಮಹೋತ್ಸವನ್ನು ಮಧ್ಯ ಕರ್ನಾಟಕದ ಉತ್ಸವವಾಗಬೇಕಿದೆ. ಎಂದು ಶ್ರೀಗಳು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಮತ್ತೋರ್ವ ಶ್ರೀಗಳಾದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, 94ನೇ ಶಿವರಾತ್ರಿ ಮಹೋತ್ಸವವೂ ಯಶಸ್ಸಿಯಾಗಿ ನಡೆಯಲು ಹಲವಾರು ಜನತೆ ಹಲವಾರು ವಿವಿಧ ರೀತಿಯ ಸಲಹೆಯನ್ನು ನೀಡಿದ್ದಾರೆ ಅವುಗಳನ್ನು ಸ್ವೀಕಾರ ಮಾಡುವುದರ ಮೂಲಕ ಮುಂದಿನ ದಿನದಲ್ಲಿ ರೂಪುರೇಷೆಗಳನ್ನು ತಯಾರಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ಚಿತ್ರದುರ್ಗ ನಗರದ ಒಂದು ಸಂಧೇಶವನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ನಿಮ್ಮೆಲ್ಲರ ಸಹಾಯ ಮತ್ತು ಸಹಕಾರ ಶ್ರೀಮಠಕ್ಕೆ ಇರಲಿ, ನಿಮ್ಮ ನೆರವಿನೊಂದಿಗೆ ಮಹಾ ಶಿವರಾತ್ರಿ ಮಹೋತ್ಸವ ನಡೆಯಬೇಕಿದೆ ಎಂದರು.

ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವಿರೇಶ್ ಮಾತನಾಡಿ, ಶ್ರೀಗಳು ತಾಯಿಯ ಹೃದಯದಂತೆ, ಎಲ್ಲರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿದ್ದಾರೆ. 94ನೇ ಶಿವರಾತ್ರಿ ಮಹೋತ್ಸವವನ್ನು ಯಶಸ್ವಿಯಾಗಿ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ಮಹೋತ್ಸವವಕ್ಕೆ 25000ದೇಣಿಗೆಯನ್ನು ನೀಡುವ ಭರವಸೆಯನ್ನು ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್ ಮಾತನಾಡಿ, ಭಕ್ತರ ಸಹಕಾರ ಶ್ರೀಗಳ ಮಾರ್ಗದರ್ಶನದಲ್ಲಿ 94ನೇ ಶಿವರಾತ್ರಿ ಮಹೋತ್ಸವ ಚನ್ನಾಗಿ ಮೂಡಿಬರಬೇಕಿದೆ, ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ. ದೇಣೀಗೆ ಸಂಗ್ರಹದಲ್ಲಿಯೂ ಸಹಾ ಪ್ರಗತಿಯನ್ನು ಕಾಣಬೇಕಿದೆ ಎಂದರು.

ಬಿಜೆಪಿ ಮುಖಂಡರಾದ ಅನಿತ್ ಕುಮಾರ್ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಶಿವರಾತ್ರಿ ಮಹೋತ್ಸವ ಚನ್ನಾಗಿ ಮೂಡಿಬರಬೇಕಿದೆ. ಕಳೆದ ಬಾರಿ ಅಧ್ಯಕ್ಷರಾಗಿ ಸೇವೆಯನ್ನು ಮಾಡಲು ಅವಕಾಶವನ್ನು ಕಲ್ಪಿಸಲಾಯಿತು. ಇದರಿಂದ ನಾನು ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಲು ಸಹಾಯವಾಯಿತೆಂದು ತಿಳಿಸಿದರು.
ಚಳ್ಳಕೆರೆ ನಗರಸಭೆಯ ಸದಸ್ಯರಾದ ಕೆ.ಸಿ.ನಾಗರಾಜ್ ಮಾತನಾಡಿ, ನಾನು ಪ್ರಥಮವಾಗಿ ಶ್ರೀಮಠಕ್ಕೆ ಆಗಮಿಸಿದ್ದೇನೆ ಶ್ರೀಗಳ ನನ್ನ ಸಂಬಂಧ 92ರಿಂದಲೂ ಇದೆ ಈ ಮಹೋತ್ಸವದಲ್ಲಿ ಶ್ರೀಗಳು ನೀಡಿದ ನಿರ್ದೆಶನದಂತೆ ಕೆಲಸವನ್ನು ಮಾಡಲಾಗುವುದೆಂದು ತಿಳಿಸಿದರು.

ಶ್ರೀ ಗುರು ಕಭೀರಾನಂದಾಶ್ರಮದ ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್ ಮಾತನಾಡಿ, ಕಳೆದ 93ನೇ ಶಿವರಾತ್ರಿ ಮಹೋತ್ಸವದಲ್ಲಿ 22 ಲಕ್ಷ ರೂ.ಗಳನ್ನು ವೆಚ್ಚ ಮಾಡುವುದರ ಮೂಲಕ ನಡೆಸಲಾಯಿತು, ಈ ಬಾರಿ 94ನೇ ಶಿವರಾತ್ರಿ ಮಹೋತ್ಸವದ ವೆಚ್ಚವನ್ನು 25 ಲಕ್ಷ ರೂಗಳಿಗೆ ನಿಗಧಿ ಮಾಡಲಾಗಿದೆ. ಇದಕ್ಕೆ ಎಲ್ಲರ ಸಹಾಯ ಮತ್ತು ಸಹಕಾರ ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಇತಿಹಾಸ ಸಂಶೋಧಕರಾದ ಪ್ರೋ.ಶ್ರೀಶೈಲಾರಾಧ್ಯರವರ ನಿಧನಕ್ಕೆ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು.

ಈ ಪೂರ್ವಬಾವಿ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಉಜ್ಜನಪ್ಪ, ಇತಿಹಾಸ ಸಂಶೋಧಕರಾದ ಬಿ.ರಾಜಶೇಖರಪ್ಪ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯರಾದ ಓಂಕಾರ್, ಶ್ರೀಮತಿರೇಖಾ, ಜೆಡಿಎಸ್‍ನ ಗೋಪಾಲಸ್ವಾಮಿ ನಾಯಕ್, ಬಿಜೆಪಿಯ ನಂದಿ ನಾಗರಾಜ್, ಮಂಜುನಾಥ್ ಗುಪ್ತ, ನಗರಸಭಾ ಸದಸ್ಯರಾದ ವೆಂಕಟೇಶ್, ವರ್ತಕರಾದ ವೆಂಕಟೇಶ್, ಭದ್ರಾವತಿಯ ಕಾರ್ಯದರ್ಶಿ ರಾಮಮೂರ್ತಿ ಭಾಗವಹಿಸಿ ತಮ್ಮ ಸಲಹೆ ಮತ್ತು ಸಹಕಾರವನ್ನು ನೀಡಿದರು.

ನಗರದ ಕರುವಿನಕಟ್ಟೆವೃತ್ತದಲ್ಲಿನ ಶ್ರೀ ಸದ್ಗುರು ಕಬೀರಾನಂದಾಶ್ರಮದವತಿಯಿಂದ ನಡೆಯುವ ಶಿವನಾಮ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಪದ್ದತಿಯಾಗಿದೆ ಶಿವನಾಮ ಸಪ್ತಾಹವೂ ಮಾರ್ಚಿ 2 ರಿಂದ 8ರವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಶನಿವಾರ ನಡೆದ ಪೂರ್ವಬಾವಿ ಸಭೆಯಲ್ಲಿ 94ನೇ ಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾಗಿ ಶಾಸಕರ ಸಹೋದರರು ಚಳ್ಳಕೆರೆ ನಗರಸಭೆ ಮತ್ತು ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್‍ರವರನ್ನು ಶ್ರೀ ಮಾದಾರ ಚನ್ನಯ್ಯ ಶ್ರೀಗಳು ಸಾನಿಧ್ಯದಲ್ಲಿ ಶ್ರೀ ಶಿವಲಿಂಗಾನಂದ ಶ್ರೀಗಳು ನೇಮಕ ಮಾಡಿದರು.

ಈ ಸಂದರ್ಭದಲ್ಲಿ ನಾಗರಾಜ್ ರವರನ್ನು ಉಭಯ ಶ್ರೀಗಳು ಸನ್ಮಾಸಿದರು, ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಅನಿತ್ ಕುಮಾರ್, ನಂದಿ ನಾಗರಾಜ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದರಿನಾಥ್, ಮಾಜಿ ಸದಸ್ಯರಾದ ಓಂಕಾರ್, ನಗರಸಭಾ ಸದಸ್ಯರಾದ ವೆಂಕಟೇಶ್, ಜೆಡಿಎಸ್ ನ ಗೋಪಾಲಸ್ವಾಮಿ ನಾಯ್ಕ್, ಶ್ರೀ ಗುರು ಕಭೀರಾನಂದಾಶ್ರಮದ ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್, ಶ್ರೀಮಠದ ನಿರಂಜನ ಮೂರ್ತಿ, ರಾಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Tags :
Central KarnatakachitradurgaMadara Channaiah SwamijiNada FestivalShivratri Mahotsavಚಿತ್ರದುರ್ಗಮಧ್ಯ ಕರ್ನಾಟಕದ ನಾಡ ಹಬ್ಬಮಾದಾರ ಚನ್ನಯ್ಯ ಸ್ವಾಮೀಜಿಶಿವರಾತ್ರಿ ಮಹೋತ್ಸವ
Advertisement
Next Article