For the best experience, open
https://m.suddione.com
on your mobile browser.
Advertisement

ಸ್ತ್ರೀವಾದ ಗೊತ್ತಿಲ್ಲದ ಕಾಲದಲ್ಲಿಯೇ ಮಹಿಳೆಯರಿಗೆ ಗೌರವ ತಂದುಕೊಟ್ಟ ಶರಣೆ ಅಕ್ಕಮಹಾದೇವಿ : ಡಾ.ಪಿ.ಯಶೋಧ ರಾಜಶೇಖರಪ್ಪ

06:00 PM Jan 13, 2024 IST | suddionenews
ಸ್ತ್ರೀವಾದ ಗೊತ್ತಿಲ್ಲದ ಕಾಲದಲ್ಲಿಯೇ ಮಹಿಳೆಯರಿಗೆ ಗೌರವ ತಂದುಕೊಟ್ಟ ಶರಣೆ ಅಕ್ಕಮಹಾದೇವಿ   ಡಾ ಪಿ ಯಶೋಧ ರಾಜಶೇಖರಪ್ಪ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.13  : ಸ್ತ್ರೀವಾದ ಎನ್ನುವುದು ಗೊತ್ತಿಲ್ಲದ ಕಾಲದಲ್ಲಿಯೇ ಮಹಿಳೆಯರಿಗೆ ಗೌರವ ತಂದುಕೊಟ್ಟಂತ ಶರಣೆ ಅಕ್ಕಮಹಾದೇವಿ ಕನ್ನಡ ನಾಡಿನಲ್ಲಿದ್ದರು ಎನ್ನವುದೇ ಒಂದು ವಿಸ್ಮಯ ಎಂದು ಡಾ.ಪಿ.ಯಶೋಧ ರಾಜಶೇಖರಪ್ಪ ಹೇಳಿದರು.

Advertisement
Advertisement

ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಮಹಿಳಾ ಘಟಕದಿಂದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ತಿಂಗಳ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಪರಂಪರೆಯಿಂದ ಬಂದಂತ ಸ್ತ್ರೀಯರಿಗೆ ಸಂಬಂಧಿಸಿದ ಅನೇಕ ಸಂಗತಿ, ಸಂಸಾರದ ಪರಿಕಲ್ಪನೆಯನ್ನು ಬುಡ ಮೇಲು ಮಾಡಿದ ಅಕ್ಕಮಹಾದೇವಿ ಮಹಿಳೆ ತನ್ನ ಸಾಧನೆಗಾಗಿ ಸಮಾಜವನ್ನು ಎದುರು ಹಾಕಿಕೊಂಡು ಒಂಟಿಯಾಗಿ ಹೋಗುವುದು ಸಾಧ್ಯವಿಲ್ಲ ಎನ್ನುವ ನಿಲುವನ್ನು ತೊಡೆದು ಹಾಕಿದ ಶ್ರೇಷ್ಟ ವಚನಗಾರ್ತಿ, ಕವಿಯತ್ರಿ ಎಂದು ಬಣ್ಣಿಸಿದರು.

ಪುರಾಣ, ಪುಣ್ಯಕಥೆ, ವೇದಶಾಸ್ತ್ರಗಳಿಂದ ಏನು ಪ್ರಯೋಜನವಿಲ್ಲ. ನುಚ್ಚು, ತೌಡು ಕುಟ್ಟಿದಂತೆ ಸಮಾಜ ನಾನಾ ರೀತಿಯಲ್ಲಿ ನಿಂದಿಸಿದಾಗ ತನಗೆ ತಾನೆ ಸಮಾಧಾನಪಡಿಸಿಕೊಳ್ಳುತ್ತಿದ್ದ ದಿಟ್ಟ ಮಹಿಳೆ. ಹೊಸ ಪರಂಪರೆಯನ್ನು ಕಟ್ಟಿಕೊಟ್ಟ ಅಕ್ಕಮಹಾದೇವಿ ತನಗೆ ಅನಿಸಿದ್ದನ್ನು ನಿರ್ಭಿತಿ ಆತ್ಮವಿಶ್ವಾಸದಿಂದ ಹೇಳುತ್ತಿದ್ದಳು. ಸ್ತ್ರಿವಾದ ಎನ್ನುವುದು ಗೊತ್ತಿಲ್ಲದ ಕಾಲದಲ್ಲಿಯೇ ಸ್ತೀವಾದಿಯಾಗಿ ಮಹಿಳೆಯರಿಗೆ ಪರವಾಗಿದ್ದ ಕನ್ನಡ ನಾಡಿನ ವಿಸ್ಮಯಗಾರ್ತಿ. ಹಾಗಾಗಿ ಅಲ್ಲಮಪ್ರಭು, ಬಸವಣ್ಣನವರಿಂದ ಶರಣ ಕುಲದ ಶ್ರೇಷ್ಠ ಮಹಾಪ್ರಭೆ ಎಂದು ಶ್ಲಾಘನೆಗೊಳಗಾಗಿದ್ದು, ಇಡಿ ಮಹಿಳಾ ಕುಲಕ್ಕೆ ಸಂದ ಗೌರವ ಎಂದು ಹೇಳಿದರು.

ಜಾಗತಿಕ ಲಿಂಗಾಯಿತ ಮಹಾಸಭಾದ ಸಹ ಸಂಚಾಲಕ ಜಿ.ಟಿ.ನಂದೀಶ ಮಾತನಾಡಿ ಭಾರತೀಯ ಪರಂಪರೆಯಲ್ಲಿ ಸಂಕ್ರಾಂತಿ ಹಬ್ಬದ ಸಾಂಸ್ಕøತಿಕ ವಿಶೇಷತೆಯನ್ನು ವಿವರಿಸಿದರು.

ಶ್ರೀಮತಿ ಶೈಲಜಾ ಬಾಬು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಮಹಿಳೆಯರಲ್ಲಿ ಜಾಗೃತಿ ಮೂಡಿಸುವಂತ ಇಂತಹ ಕಾರ್ಯಕ್ರಮಗಳಲ್ಲಿ ಲಿಂಗಾಯಿತ ಧರ್ಮದ ಮಹಿಳೆಯರು ಹೆಚ್ಚು ಭಾಗವಹಿಸುವಂತೆ ಮನವಿ ಮಾಡಿದರು.
ಉಪನ್ಯಾಸಕಿ ರಶ್ಮಿ ಮಾತನಾಡಿ ಪರಸ್ಪರರು ಎಳ್ಳು ಬೆಲ್ಲವನ್ನು ಸವಿಯುವ ಮಕರ ಸಂಕ್ರಾಂತಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಒಂದೊಂದು ಹೆಸರಿನಿಂದ ಕರೆಯಲಾಗುವುದು ಎಂದು ಹಬ್ಬದ ವಿಶೇಷತೆ ಕುರಿತು ವಿವರಿಸಿದರು.

ಲಿಂಗಾಯಿತ ಮಹಾಸಭಾ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಜಯಶೀಲ ವೀರಣ್ಣ, ಶ್ರೀಮತಿ ಶೋಭ ಮಲ್ಲಿಕಾರ್ಜುನ್ ವೇದಿಕೆಯಲ್ಲಿದ್ದರು.
ಬಸವರಾಜ ಕಟ್ಟಿ, ಡಿ.ಎಂ.ಧನಂಜಯ, ಶಿವಾನಂದ ವರ್ಷ ಹಾಗೂ ಸದಸ್ಯರುಗಳು ಹಾಜರಿದ್ದರು.
ಶ್ರೀಮತಿ ಮೀನಾಕ್ಷಿ ಸ್ವಾಗತಿಸಿದರು. ಶ್ರೀಮತಿ ವೀಣ ವಂದಿಸಿದರು. ಶ್ರೀಮತಿ ಗೀತ ನಿರೂಪಿಸಿದರು.

Advertisement
Tags :
Advertisement