ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಶ್ರೀಗಳ 150ನೇ ಜಯಂತ್ಯೋತ್ಸವ | ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಕ್ರೀಡಾ ಜಾತ್ರೆ ಆಯೋಜನೆ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಸೆ. 09 : ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಶ್ರೀಗಳ 150ನೇ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕ್ರೀಡಾ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.
ನಗರದ ಬೃಹನ್ಮಠದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅ. 1 ರಿಂದ 4 ರವರೆಗೆ ನಗರದ ಜೆ.ಎಂ.ಐ.ಟಿ. ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿಯು ನಾಕೌಟ್ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಇದರಲ್ಲಿ 10 ಇಲಾಖೆಯ ತಂಡಗಳು ಭಾಗವಹಿಸಲಿವೆ. ಇದರಲ್ಲಿ ವಿಜೇತರಾದವರಿಗೆ ನಗದು ಬಹುಮಾನದೊಂದಿಗೆ ಟ್ರೋಫಿಯನ್ನು ನೀಡಲಾಗುವುದು ಕ್ರೀಡಾ ಕೂಟ ಪ್ರಾರಂಭದಲ್ಲಿ ಮತ್ತು ಮುಕ್ತಾಯದಲ್ಲಿ ವರ್ಣರಂಜಿತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್,ಜೆ,ಎಂ. ಪೀಠದ ಆಡಳಿತ ಮಂಡಳಿ ಸದಸ್ಯರಾದ ಚಿತ್ರದುರ್ಗ ಬೃಹನ್ಮಠದ ಶ್ರೀ ಬಸವ ಪ್ರಭು ಶ್ರೀಗಳು ಮಾತನಾಡಿ, ಶರಣ ಸಂಸ್ಕøತಿ ಉತ್ಸವ ಹಾಗೂ ಜಯದೇವ ಶ್ರೀಗಳು 150ನೇ ಜಯಂತ್ಸೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಸೆ. 25 ರಿಂದ ಅ.4ರವರಗೆ ಬೆಳಿಗ್ಗೆ ಅರೋಗ್ಯ ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರಿಗೆ ತಮ್ಮ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ. ಸಂಜೆ ಜಯದೇವ ಶ್ರೀಗಳ ಬಗ್ಗೆ ಉಪನ್ಯಾಸವನ್ನು ಏರ್ಪಡಿಸಲಾಗಿದೆ ಎಂದರು.
ಕ್ರೀಡಾ ಸಮಿತಿಯ ಅಧ್ಯಕ್ಷರಾದ ಶ್ರೀರಾಮ್ ಮಾತನಾಡಿ ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಶ್ರೀಗಳು 150ನೇ ಜಯಂತ್ಸೋತ್ಸವದ ಅಂಗವಾಗಿ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕಬ್ಬಡಿ ಹ್ಯಾಂಡ್‍ಬಾಲ್, ಖೋ ಖೋ ಪಂದ್ಯಾವಳಿಯನ್ನು ಅ. 5 ರಿಂದ 7ರವರೆಗೆ ನಗರದ ಹಳೇ ಮಾದ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಯ 17 ವರ್ಷದೊಳಗಿನ ಮಕ್ಕಳು ಬಾಗವಹಿಸಬಹುದಾಗಿದೆ. ಇದರಲ್ಲಿ ಜಿಲ್ಲೆಯ 6 ತಾಲ್ಲೂಕುಗಳಿಂದಮ ಸುಮಾರು 1400ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ ಇವರಿಗೆ ಉಚಿತವಾಗಿ ಟಿ ಶರ್ಟ, ವಸತಿ ಆಹಾರವನ್ನು ಹಾಗೂ ಪ್ರಯಾಣದ ಭತ್ಯೆಯನ್ನು ಸಹಾ ನೀಡಲಾಗುವುದು ಎಂದರು.
ಮಹಿಳಾ ಕ್ರೀಡಾಕೂಟ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರುದ್ರಾಣಿ ಮಾತನಾಡಿ ಶರಣ ಸಂಸ್ಕøತಿ ಉತ್ಸವ ಹಾಗೂ ಜಯದೇವ ಶ್ರೀಗಳು 150ನೇ ಜಯಂತ್ಸೋತ್ಸವದ ಅಂಗವಾಗಿ ನಗರದ ಮಹಿಳೆಯರಿಗಾಗಿ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದೆ ಇದರಲ್ಲಿ ಹಗ್ಗ ಜಗ್ಗಾಟ, ಮಡಿಕೆ ಒಡೆಯವುದು ಚಮಚದಲ್ಲಿ ನಿಂಬೆಹಣ್ಣು, ಥ್ರೋಬಾಲ್, ಮೋಜಿಕಲ್ ಚೇರ್ ಸೇರಿದಂತೆ ವಿವಿದ ಆಟಗಳನ್ನು ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಡಿಸಲಾಗುವುದು, ಇದರಲ್ಲಿ 25 ರಿಂದ 50 ವರ್ಷದವರಿಗೆ ಒಂದು ಗುಂಪು 50 ವರ್ಷ ಮೇಲ್ಪಟ್ಟವರಿಗೆ ಒಂದು ಗುಂಪು ಮಾಡಿ ಆಟವನ್ನು ಆಡಿಸಲಾಗುವುದು ಇದರಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು ಅಲ್ಲದೆ ಸಮಾರೋಪದಿನದಂದು ಶರಣದ ವೇಷಭೂಷಣ ಸ್ಪರ್ದೆಯನ್ನು ಏರ್ಪಡಿಸಲಾಗಿದೆ ಮಹಿಳೆಯರು ಬರುವಾಗ ಆಧಾರ ಕಾರ್ಡ ತರಬೇಕೆಂದು ತಿಳಿಸಿದರು.
ಗೋಷ್ಟಿಯಲ್ಲಿ ಜಯದೇವ ಕಪ್ ಕ್ರೀಡಾಕೂಟದ ಗೌರವ ಅಧ್ಯಕ್ಷರಾದ ನಾಗರಾಜ್, ಉಪಾಧ್ಯಕ್ಷರಾದ ಶಂಕರ್ ಮೂರ್ತಿ, ಮಂಜುನಾಥ್ ಗೊಪ್ಪೆ, ಕ್ರೀಡಾಕೂಟದ ಉಸ್ತುವಾರಿಗಳಾದ ರವಿಶಂಕರ್‍ರೆಡ್ಡಿ, ಪ್ರಧಾನ ಕಾರ್ಯದರ್ಶಿ ಸೈಯದ್ ಅನೀಸ್, ಕಾರ್ಯದರ್ಶಿ ವಿಜಯಕುಮಾರ್, ಶಾಂತಕುಮಾರ್, ಸಂಘಟನಾ ಕಾರ್ಯದರ್ಶಿ ರವಿ ಮಲ್ಲಾಪುರ, ಸೈಯದ್‍ಖುದ್ದುಸ್, ಪ್ರಕಾಶ್‍ರಾಮನಾಯ್ಕ್, ಶಿವರಾಂ, ಜಯ್ಯಣ್ಣ ಮುರುಗೇಶ್, ರುದ್ರಮೂರ್ತಿ, ತಿಪ್ಪಣ್ಣ ಪ್ರಸನ್ನ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.