For the best experience, open
https://m.suddione.com
on your mobile browser.
Advertisement

ಶರಣ ಸಂಸ್ಕೃತಿ ಉತ್ಸವ 2024 : ನಸಾಬ್ ಚಲನಚಿತ್ರ ಪೋಸ್ಟರ್ ಬಿಡುಗಡೆ

06:57 PM Oct 06, 2024 IST | suddionenews
ಶರಣ ಸಂಸ್ಕೃತಿ ಉತ್ಸವ 2024   ನಸಾಬ್ ಚಲನಚಿತ್ರ ಪೋಸ್ಟರ್ ಬಿಡುಗಡೆ
Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 06 : ಕೆ. ಕಿಶೋರ್ ಕುಮಾರ್ ನಿರ್ದೇಶನದ ಕೀರ್ತಿಕುಮಾರ್ ನಾಯ್ಕ ನಟಿಸಿರುವ ಇದೇ ತಿಂಗಳ 25 ರಂದು ಬಿಡುಗಡೆಗೊಳ್ಳಲಿರುವ ನಸಾಬ್ ಚಿತ್ರದ ಪೋಸ್ಟರ್ ಗಳನ್ನು ಚಿತ್ರದುರ್ಗದಲ್ಲಿ ಶರಣ ಸಂಸ್ಕøತಿ ಉತ್ಸವ 2024 ಆರಂಭವಾದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

Advertisement

ಚಿತ್ರದುರ್ಗ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನದ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮ ಮಹಾಸ್ವಾಮಿಗಳು, ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಜಗದ್ಗುರು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಶ್ರೀ ವಿರಕ್ತಮಠದ ಶ್ರೀ ನಿ.ಪ್ರ.ಸ್ವ. ಮಹಾಂತರುದ್ರೇಶ್ವರ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮಿಗಳು, ಕಾಂಗ್ರೆಸ್ ಮುಖಂಡ ಸೈಯದ್ ಅನೀಸ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್ ಮೊದಲಾದವರು ಪೋಸ್ಟರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕೆ.ಡಿ.ಪಿ.ಸದಸ್ಯರಾದ ಕೆ.ಸಿ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ ಕೆ ತಾಜ್ ಪೀರ್, ನಿವೃತ್ತ ಡಿಡಿಪಿಐ ರವಿಶಂಕರ್ ರೆಡ್ಡಿ, ಲಿಡ್ಕರ್ ಮಾಜಿ ಛೇರ್ಮನ್ ಓ ಶಂಕರ್, ಸಿರಾಜ್, ಖುದ್ದುಸ್, ನಾಗಶೇಖರ, ಶ್ರೀರಾಮ್, ಶ್ರೀಮತಿ ಅಂಜು ಉಪಸ್ಥಿತರಿದ್ದರು.

Advertisement
Advertisement
Tags :
Advertisement