Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯೂರಿನಲ್ಲಿ ಶಫಿ ಉಲ್ಲಾ ರವರ "ಕಣ್ಮರೆ" ಕೃತಿ ಲೋಕಾರ್ಪಣೆ

08:16 AM Oct 22, 2024 IST | suddionenews
Advertisement

 

Advertisement

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 22 : ರವಿ ಕಾಣದ್ದನ್ನು ಕವಿ ಕಂಡ" ಎಂಬಂತೆ ಎಲ್ಲಿ ಪ್ರೀತಿ, ವಿಶ್ವಾಸ ಗೌರವ ಬಾಂಧವ್ಯ ಬೆಸೆಯುವ ಸಮಾನ ಶುದ್ಧ ಮನಸ್ಸು ಇರುತ್ತದೋ ಅಲ್ಲಿ ನಾವು ಏನಾದರೂ ಸಾಧಿಸಬಹುದು ಅಲ್ಲದೆ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬಹುದು ಎಂದು ಖ್ಯಾತ ವಕೀಲರಾದ ಬಿ.ಕೆ ರೆಹಮತ್ ಹೇಳಿದರು.

ನಗರದ ರೋಟರಿ ಭವನದಲ್ಲಿ ಸೋಮವಾರ ಸಿ ವಿ ಜಿ ಪಬ್ಲಿಕೇಶನ್, ಬೆಂಗಳೂರು ಹಾಗೂ ಚಿಮ್ಮಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಇವರ ಸಹಯೋಗದಲ್ಲಿ ತೇಜಸ್ ಇಂಡಿಯಾ ಪ್ರಕಟಿಸಿರುವ ಎಚ್.ಎಸ್. ಶಫಿ ಉಲ್ಲಾ ರವರ "ಕಣ್ಮರೆ" ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ನಂತರ ಡಾ. ಮೀರಾ ಸಾಬೀಹಳ್ಳಿ ಶಿವಣ್ಣರವರು ಲೋಕಾರ್ಪಣೆ ಮಾಡಿ ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಬರೆಯುವ ಕೌಶಲ್ಯ ಆಸಕ್ತಿಯನ್ನು ಬೆಳಸಿಕೊಂಡು ಈ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.

ಈ ಕಣ್ಮರೆ ಕೃತಿಯನ್ನು ಜಬಿವುಲ್ಲಾ ಎಂ.ಅಸದ್ ರವರು ವಿಮರ್ಶಿಸಿದರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಯಾ ಪುತ್ತೊರ್ಕರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕವಿಗಳು ಬರೆಯುವ ಪುಸ್ತಕಗಳಿಗೆ ಸರಿಯಾದ ಮನ್ನಣೆ ದೊರೆಯುತ್ತಿಲ್ಲ. ಹಾಗಾಗಿ ಇದರ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗಳು ಗಮನ ಹರಿಸುವುದು ಬಹು ಮುಖ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಕಾರ್ಯಮದಲ್ಲಿ ಪ್ರೊ.ಎಂ.ಜಿ ರಂಗಸ್ವಾಮಿ, ಉಷಾರಾಣಿ, ಅಧ್ಯಕ್ಷರಾದ ಏಚ್.ಎಸ್ ಶಫಿ ಉಲ್ಲಾ, ಶೋಭಾ ಮಲ್ಲಿಕಾರ್ಜುನ್, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶಿವಮೂರ್ತಿ.ಟಿ ಕೋಡಿಹಳ್ಳಿ, ಸಾಹಿತಿ ಶಾರದಾ ಜೈರಾಮ್, ಸುಮಾ ರಾಜಶೇಖರ್, ಶಿವಕುಮಾರ್, ವಿನಾಯಕ್, ಶಿವಾನಂದ್, ಮುದ್ದುರಾಜ್, ತಿಪ್ಪಮ್ಮ ನಾಗರಾಜ್, ಸತೀಶ್ ಕುಮಾರ್, ಜಲೀಲ್ ಸಾಬ್, ಶಿವರುದ್ರಪ್ಪ, ಮೀರಾ ನಾಡಿಗ್, ಜಯದೇವ್ ಮೂರ್ತಿ, ಗೌರಮ್ಮ, ರಾಜೇಶ್ವರಿ, ಮುದ್ದು ರಾಜ್, ಸಾದತ್,ಬೆಳಕು ಪ್ರಿಯ, ಕನಕ ಪ್ರೀತೇಶ್,ಪ್ರವೀಣ್, ವೀರೇಶ್, ದುರ್ಗಪ್ಪ ದಾಸಣ್ಣನವರ್, ಚಳ್ಳಕೆರೆಯ ಕವಯಿತ್ರಿ ಶಬ್ರಿನಾ ಮಹಮದ್ ಅಲಿ, ಶ್ರೀಮತಿ ಪರ್ವೀನ್, ಡಾ.ನವೀನ್ ಸಜ್ಜನ್, ಸಾಹಿತಿಗಳು ಹಾಗೂ ಪತ್ರಕರ್ತರು ಆದ ಕೊರ್ಲುಕುಂಟೆ ತಿಪ್ಪೇಸ್ವಾಮಿ, ಸತ್ಯಪ್ರಭ ವಸಂತ್ ಕುಮಾರ್, ಯತೀಶ್, ಮೆಹಬೂಬ್, ಕೆ.ಟಿ ಶಾಂತಮ್ಮ,ಧನಂಜಯ್, ಪವಿತ್ರಾ, ಅನಿತಾ, ಸುಜಾತ ಪ್ರಾಣೇಶ್, ಮಲ್ಲಿಕಾರ್ಜುನ್, ನಿರ್ಮಲ,ರೇಣುಕಾ, ಸವಿತಾ ಮುದ್ಗಲ್,
ಡಾ.ಡಿ. ಧರಣೇಂದ್ರಯ್ಯ, ಬಸವರಾಜ್ ಹರ್ತಿ, ಜಯಪ್ರಕಾಶ್,
ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ , ಪ್ರಕಾಶ್,ಕಿರಣ್ ಮಿರಜ್ಜಕರ್, ಬಸವರಾಜ್ ಅಲ್ಲದೆ ಎಲ್ಲ ಸಾಹಿತ್ಯ ಆಸಕ್ತರು,ಕಲಾ ವಿದರು,ಕವಿಗಳು, ಕನ್ನಡಾಭಿಮಾನಿಗಳು ಮುಂತಾದವರು ಉಪಸ್ಥಿತರಿದ್ದರು.

Advertisement
Tags :
bengaluruchitradurgahiriyuruKanmareLaunchedShafi Ullahsuddionesuddione newsಕಣ್ಮರೆಕೃತಿ ಲೋಕಾರ್ಪಣೆಚಿತ್ರದುರ್ಗಬೆಂಗಳೂರುಶಫಿ ಉಲ್ಲಾಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article