For the best experience, open
https://m.suddione.com
on your mobile browser.
Advertisement

ಸ್ವಸಹಾಯ ಸಂಘಗಳಿಂದ ಸಾತ್ವಿಕ ಮನಸ್ಸುಗಳು ಒಗ್ಗೂಡಲು ನೆರವಾಗಲಿದೆ : ಶ್ರೀಮತಿ ಗೀತಾ ಬಿ.

05:11 PM Dec 30, 2023 IST | suddionenews
ಸ್ವಸಹಾಯ ಸಂಘಗಳಿಂದ ಸಾತ್ವಿಕ ಮನಸ್ಸುಗಳು ಒಗ್ಗೂಡಲು ನೆರವಾಗಲಿದೆ   ಶ್ರೀಮತಿ ಗೀತಾ ಬಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.30 : ಸ್ವಸಹಾಯ ಸಂಘಗಳೆಂದರೆ ಕೇವಲ ಸಾಲ ಪಡೆಯುವುದಷ್ಟೆ ಅಲ್ಲ. ಪರಸ್ಪರ ಸಹಭಾಳ್ವೆ, ಬಾಂಧವ್ಯ ಬೆಳೆಯುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ಬಿ. ಹೇಳಿದರು.

Advertisement

ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ನಗರ ಎ.ವಲಯ ಚಿತ್ರದುರ್ಗ ವತಿಯಿಂದ ಚೋಳಗುಡ್ಡದಲ್ಲಿರುವ ಮೈಲಾರಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ ಮೈದಾನದಲ್ಲಿ ಶನಿವಾರ ನಡೆದ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸ್ವಸಹಾಯ ಸಂಘಗಳಿಂದ ಸಾತ್ವಿಕ ಮನಸ್ಸುಗಳು ಒಗ್ಗೂಡಲು ನೆರವಾಗಲಿದೆ. ಅವಿಭಕ್ತ ಕುಟುಂಬ, ಸಂಬಂಧ ಕಡಿಮೆಯಾಗುತ್ತಿದೆ. ಮಹಿಳೆಯರು ಸಂಘಗಳಲ್ಲಿ ಸದಸ್ಯರುಗಳಾಗಿರುವುದರಿಂದ ಮನೆಯಲ್ಲಿ ಪುರುಷರು ಗೌರವಿಸುವಂತಾಗಿದೆ. ಸಂಘದ ಶಕ್ತಿಯೇ ಸರ್ವಶಕ್ತಿ ಎನ್ನುವುದನ್ನು ಮಹಿಳೆಯರು ತಿಳಿದುಕೊಂಡು ಸಂಘದಿಂದ ಸಿಗುವ ಪ್ರಯೋಜನ ಪಡೆದುಕೊಂಡು ಸ್ವಾವಲಂಭಿಗಳಾಗಿ ಬದುಕಬೇಕೆಂದು ಕರೆ ನೀಡಿದರು.

ಪ್ರತಿ ವಾರವು ಮಹಿಳೆಯರು ಸೇರಿಕೊಂಡು ಶಿಸ್ತಿನಿಂದ ಸಭೆ ನಡೆಸಬೇಕು. ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಿ ಕೌಶಲ್ಯಗಳ ಕುರಿತು  ತಿಳಿದುಕೊಂಡಾಗ ಅಂತಹ ಸಂಘಗಳು ಚಟುವಟಿಕೆಯಿಂದಿರಲು ಸಾಧ್ಯ. ವಾರದ ಸಭೆ ಸಂಸ್ಕøತಿಯಾಗಿ ಪರಿವರ್ತನೆಯಾಗಬೇಕು. ಸಂಘ ಎನ್ನುವುದು ಒಂದು ಆಸ್ತಿಯಿದ್ದಂತೆ ಎಂದು ಹೇಳಿದರು.

ಎಸ್.ಡಿ.ಪಿ.ಐ.ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದಲ್ಲಿನ ಮಹಿಳೆಯರು 101 ಕೋಟಿ ರೂ.ಗಳನ್ನು ಉಳಿತಾಯ ಮಾಡಿದ್ದಾರೆ. ಸಾಕಷ್ಟು ಮಹಿಳೆಯರಿಗೆ ಉದ್ಯೋಗವಿಲ್ಲ. ಸಂಘದಿಂದ ಸಾಲ ಪಡೆದು ಕೆಲವರು ಹಿಂದಿರುಗಿಸಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿಗೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಉಳಿತಾಯದ ಹಣದಲ್ಲಿಯೇ ಕೈಗಾರಿಕೆಯನ್ನು ತೆರೆದು ಸ್ವಸಹಾಯ ಸಂಘದ ಮಹಿಳೆಯರ ಕೈಗೆ ಕೆಲಸ ಕೊಡುವುದು ಉತ್ತಮ ಎಂದು    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾರವರಲ್ಲಿ ಮನವಿ ಮಾಡಿದರು.

ಹತ್ತು ತಂಡಗಳ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದ್ದಾರೆ. ಸಂಘದಿಂದ ಸಾಲ ಪಡೆಯುವವರು ಶೇ.80 ರಷ್ಟು ಕೂಲಿ ಕಾರ್ಮಿಕರು, ಕೇವಲ ಸಾಲ ಪಡೆದುಕೊಳ್ಳುವುದರಿಂದ ಜೀವನ ಮಟ್ಟ ಸುಧಾರಿಸುವುದಿಲ್ಲ. ಉದ್ಯೋಗ ಕಲ್ಪಿಸಿದಾಗ ಮಾತ್ರ ಸ್ವಾವಲಂಭಿಯಾಗಿ ಬದುಕಬಹುದು ಎಂದು ಹೇಳಿದರು.

ಜನಜಾಗೃತಿ ವೇದಿಕೆ ಸದಸ್ಯ ಮಹಮದ್ ನೂರುಲ್ಲಾ, ನಗರಸಭೆ ಸದಸ್ಯೆ ಶ್ರೀಮತಿ ಶಕೀಲಾಭಾನು ಸಯಿದು, ಮೈಲಾರಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್ ವೇದಿಕೆಯಲ್ಲಿದ್ದರು.

ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಪದಗ್ರಹಣ ಸಮಾರಂಭದಲ್ಲಿ ಹಾಜರಿದ್ದರು.

Advertisement
Tags :
Advertisement