ವಿಕಲಚೇತನ ನೌಕರರಿಗೆ ಸಂಚಾರಿ ಭತ್ಯೆ ಮಂಜೂರು : ಬೀರಪ್ಪ ಅಂಡಗಿ ಚಿಲವಾಡಗಿ
ಕೊಪ್ಪಳ: 7ನೇ ವೇತನ ಆಯೋಗದವು ವಿಕಲಚೇತನ ನೌಕರರಿಗೆ ಅವರ ಮೂಲ ವೇತನದ ಶೇಕಡಾ ೬ ರಷ್ಟು ಸಂಚಾರಿ ಭತ್ಯೆಯನ್ನು ಮಂಜೂರು ಮಾಡುವಂತೆ ಸರಕಾರಕ್ಕೆ ಅಕ್ಟೋಬರ್ 8 ರಂದು ವರದಿ ಸಲ್ಲಿಸಿತ್ತು.ಆದರೂ ಸರಕಾರ ಮಾತ್ರ ಆದೇಶ ಜಾರಿಗೆ ಮಾಡಿರಲಿಲ್ಲಾ.ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರ ನೇತೃತ್ವದಲ್ಲಿ ಆದೇಶ ಜಾರಿಗೆ ಮಾಡುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಮಾಡುವುದರ ಜೊತೆಯಲ್ಲಿ ಅನೇಕ ರೀತಿಯ ಒತ್ತಡ ಹಾಕಿದ ನಂತರ ಸರಕಾರ ಇಂದು ಅಧಿಕೃತ ಆದೇಶ ಮಾಡಿದೆ. ಆಯೋಗದ ವರದಿ ಕೊಟ್ಟ ಎರಡು ತಿಂಗಳ ನಂತರ ಸರಕಾರ ಇಂದು ಅಧೀಕೃತ ಆದೇಶ ಜಾರಿಗೆ ಮಾಡಿದೆ.ರಾಜ್ಯದಲ್ಲಿ ವಿಬಿಧ ಇಲಾಖೆಯಲ್ಲಿ ಸುಮಾರು 25 ಸಾವಿರ ವಿಕಲಚೇತನ ನೌಕರರಿಗೆ ಕಾರ್ಯ ನಿರ್ವಹಿಸುತ್ತಿದ್ದು,ಅವರಿಗೆ ಈ ಆದೇಶದಿಂದ ಅನುಕೂಲವಾಗಲಿದೆ.
7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಎಲ್ಲಾ ಇಲಾಖೆಯ ನೌಕರರಿಗೆ ಆಗಸ್ಟ್ ತಿಂಗಳಿನಿಂದ ಅನ್ವಯ ಆಗುವಂತೆ ವೇತನ ಹೆಚ್ಚಳ ಮಾಡಿದ್ದಾರೆ.ಆದರೆ ವಿಕಲಚೇತನ ನೌಕರರಿಗೆ ಮಾತ್ರ ಈ ತಿಂಗಳಿಂದ ಅನ್ವಯ ಮಾಡಿದ್ದಾರೆ.ಜಾರಿಗೆ ಮಾಡುವ ನಿಟ್ಟಿನಲ್ಲಿ ಅನೇಕ ಒತ್ತಡವನ್ನು ಸರಕಾರದ ಮಟ್ಟದಲ್ಲಿ ಹಾಕಲಾಗಿತ್ತು.ಆದೇಶ ಜಾರಿಗೆ ಮಾಡಿದ ರಾಜ್ಯ ಸರಕಾರಕ್ಕೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.